• search

ಸೌಂದರ್ಯ ಲಹರಿ ಪ್ರತಿ ಮಂತ್ರದಲ್ಲೂ ಮಹತ್ವವಿದೆ : ಮೋದಿ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಅಕ್ಟೋಬರ್ 29 : ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದರು. ಯಡತೊರೆಮಠದ ವೇದಾಂತ ಭಾರತಿ ಸಂಸ್ಥೆಯು ಆಯೋಜಿಸಿರುವ ಸೌಂದರ್ಯಲಹರೀ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಂಡಿದ್ದಾರೆ.

  Live : ಅರಮನೆ ಮೈದಾನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

  ಭಾನವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ದೂರದ ಊರುಗಳಿಂದ ಬಂದಿರುವ ಸಾವಿರಾರು ಮಹಿಳೆಯರು ಮತ್ತು ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

  ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಮೋದಿ ಹೇಳಿದ್ದೇನು?

  Narendra Modi in Bengaluru Palace grounds, October 29, 2017

  ಶಂಕರಭಾರತೀ ಮಹಾಸ್ವಾಮೀಜಿ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್‌ ಕುಮಾರ್, ಡಿ.ವಿ.ಸದಾನಂದ ಗೌಡ ಸೇರಿದಂತೆ ವಿವಿಧ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ.

  ಬೀದರ್ ಸಮಾವೇಶದಲ್ಲಿ ಮೋದಿ ಹೇಳಿದ್ದೇನು?

  ಮೋದಿ ಭಾಷಣದ ಮುಖ್ಯಾಂಶಗಳು

  * ಪಾರಾಯಣಕ್ಕೆ ಬಂದ ನಿಮಗೆಲ್ಲರಿಗೂ ಸ್ವಾಗತ ಎಂದು ಕನ್ನಡದಲ್ಲಿ ಭಾಷಣ ಆರಂಭ. ಸೌಂದರ್ಯ ಲಹರಿ ಪಾರಾಯಣಕ್ಕೆ ಬಂದ ಎಲ್ಲ ಸಹೋದರಿಯರಿಗೆ ಸ್ವಾಗತ ಎಂದ ಮೋದಿ

  * ಶಂಕರ ಭಾರತಿ ಸ್ವಾಮೀಜಿಗಳಿಗೆ ನನ್ನ ಪ್ರಣಾಮಗಳು

  * ಒಂದೇ ಜಾಗದಲ್ಲಿ ಒಂದೇ ಸ್ವರದಲ್ಲಿ ಸೌಂದರ್ಯ ಲಹರಿ ಪಠಣ ಒಳ್ಳೆಯ ಕಾರ್ಯ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ. ಮಹಾ ಸಮರ್ಪಣೆಗೆ ಬಂದ ನಿಮ್ಮೆಲ್ಲರನ್ನು ನೋಡಿ ಸಂತಸವಾಗಿದೆ

  * ಕೆಲವು ದಿನಗಳ ಹಿಂದೆ ನಾನು ಕೇದಾರನಾಥಕ್ಕೆ ಹೋಗಿದ್ದೆ. ಅಲ್ಲಿಗೆ ಹೋದಾಗಲೆಲ್ಲ ಶಂಕರರ ಬಗ್ಗೆ ಗೌರವ ಹೆಚ್ಚಾಗುತ್ತದೆ. ಇಷ್ಟೆಲ್ಲಾ ಆಧುನಿಕ ಸೌಕರ್ಯಗಳಿದ್ದರೂ ಅಲ್ಲಿಗೆ ಹೋಗುವುದು ಕಷ್ಟ. ಆದರೆ, ಅವರು ಸಾವಿರಾರು ವರ್ಷಗಳ ಹಿಂದೆಯೇ ದೇಶದ ಮೂಲೆಮೂಲೆ ಸಂಚರಿಸಿ ಅಧ್ಯಾತ್ಮ ಜಾಗೃತಿ ಮೂಡಿಸಿದ್ದರು

  * ನಾನು ಹಲವು ವರ್ಷಗಳಿಂದ ನವರಾತ್ರಿ ವ್ರತ ಆಚರಿಸುತ್ತಿದ್ದೇನೆ. ನಾನು ಹೇಳುವ ದೇವಿಸ್ತುತಿಗಳಲ್ಲಿ ಶಂಕರಾಚಾರ್ಯರ ಸೌಂದರ್ಯ ಲಹರಿಯೂ ಸೇರಿದೆ. ಇದರ ಪ್ರತಿ ಮಂತ್ರದಲ್ಲೂ ಮಹತ್ವದ ಭಾವವಿದೆ

  * ಸಾವಿರಾರು ಜನರು ಒಂದೇ ಕಡೆ ಒಕ್ಕೊರಲಿನಿಂದ ಮಂತ್ರ ಹೇಳುವುದರಿಂದ ದೊಡ್ಡ ಮಟ್ಟದ ಶಕ್ತಿ ಸಂಚಯವಾಗುತ್ತೆ. ಈಗ ಇಲ್ಲಿ ನೆರೆದಿರುವವರು ಪಾರಾಯಣ ಮಾಡಿರುವುದರಿಂದ ಉಂಟಾಗಿರುವ ಶಕ್ತಿಯ ಅಲೆಗಳ ಅನುಭವ ನನಗೆ ಆಗುತ್ತಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Narendra Modi in Bengaluru. Modi attend a public function organised by the Vedanta Bharati at the Palace grounds, Bengaluru.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more