ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್‌ಗೆ ಮತ ಹಾಕಿ ತಪ್ಪು ಮಾಡಬೇಡಿ: ಮೋದಿ

By Manjunatha
|
Google Oneindia Kannada News

ಬೆಂಗಳೂರು, ಮೇ 03: ಬಿಸಿಲ ನಾಡು ಕಲಬುರಗಿ, ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ ಮುಗಿಸಿದ ಮೋದಿ ಅವರು ಬೆಂಗಳೂರಿನ ಸಮಾವೇಶಕ್ಕೆ ಆಗಮಿಸಿದ್ದಾರೆ. ಭಾರಿ ಸಂಖ್ಯೆಯಲ್ಲಿ ಜನಸ್ತೋಮ ಸೇರಿದ್ದು ಮೋದಿ ಅವರ ಮಾತು ಕೇಳಲು ಕಾತರರಾಗಿದ್ದಾರೆ.

ಬೆಂಗಳೂರಿನ ಜನತೆಗೆ ನನ್ನ ನಮಸ್ಕಾರಗಳು, ಕೆಂಪೇಗೌಡರವರಿಗೆ, ಡಾ.ರಾಜಕುಮಾರ್, ಸಿವಿ ರಾಮನ್, ವಿಶ್ವೇಶ್ವರಯ್ಯಾ ಅವರಿಗೆ ನನ್ನ ಅನಂತ ಪ್ರಣಾಮಗಳು ಎನ್ನುವ ಮೂಲಕ ಭಾಷಣವನ್ನು ಮೋದಿ ಆರಂಭಿಸಿದರು.

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರುಗಳು ಬಹಳ ದಿನಗಳ ನಂತರ ಬಿಜೆಪಿ ಜೊತೆ ಮತ್ತೆ ಕಾಣಿಸಿಕೊಂಡಿದ್ದು, ವೇದಿಕೆ ಏರಿದ್ದಾರೆ. ಮೋದಿ ಬಂದ ನಂತರ ಎಸ್‌.ಎಂ.ಕೃಷ್ಣ ಅವರು ವೇದಿಕೆಗೆ ಬಂದರು.

Narendra Modi addressing BJP rally in Bengaluru

Newest FirstOldest First
6:21 PM, 3 May

ಸ್ವಚ್ಛ, ಸುಂದರ, ಶಾಂತಿಯುತ ಕರ್ನಾಟಕ ನಿರ್ಮಿಸೋಣ, ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ ಎಂದು ಘೋಷಣೆ ಕೂಗವ ಮೂಲಕ ನರೇಂದ್ರ ಮೋದಿ ಭಾಷಣ ಮುಗಿಸಿದರು.
6:20 PM, 3 May

ನಾಳೆ (ಏಪ್ರಿಲ್ 04) ವಿಡಿಯೋ ಕಾನ್ಫರೆನ್ಸ್‌ ಮೂಲಕ ಕರ್ನಾಟಕದ ಬಿಜೆಪಿ ಮಹಿಳಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದೇನೆ ಎಲ್ಲರೂ ಅದರಲ್ಲಿ ಭಾಗಿ ಆಗಿ.
6:19 PM, 3 May

ನನಗೆ ತಡವಾಗಿದೆ, ಹೊರಡಲೇ ಬೇಕು ಆದರೆ ಮನಸಿಲ್ಲ, ಆದರೆ ಕೊನೆಯದಾಗಿ ಒಂದು ವಿಷಯ ಹೇಳುತ್ತೇನೆ, ನಮ್ಮ ದಿಲ್ಲಿಯ ಸರ್ಕಾರ ಕರ್ನಾಟಕದ ಜೊತೆಗಿದೆ, ಇಲ್ಲಿನ ಜನರ ಜೊತೆಗಿದೆ.
6:18 PM, 3 May

ರೇಷ್ಮೆಯಲ್ಲಿ ರಾಮನಗರ ಪ್ರಸಿದ್ಧಿ ಹೊಂದಿದೆ. ಕೇವಲ ಎರಡು ವರ್ಷದಲ್ಲಿ ರೇಷ್ಮೆ ಉತ್ಪಾದನೆಯನ್ನು ದ್ವಿಗುಣ ಗೊಳಿಸುವುದು ನಮ್ಮ ಸರ್ಕಾರದ ಗುರಿ. ಈಗಾಗಲೇ ನಮ್ಮ ಸರ್ಕಾರ ಈ ಬಗ್ಗೆ 2000 ಕೋಟಿ ಮೀಸಲಿಟ್ಟಿದ್ದೇವೆ.
6:14 PM, 3 May

ಕಾಂಗ್ರೆಸ್‌ನ ಪ್ರಣಾಳಿಕೆ ನೋಡಿದೆ. ಎಲ್ಲಿ ಕಲ್ಲು ಕೂಡ ಇಲ್ಲವೋ ಅಲ್ಲಿ ಬೆಟ್ಟವನ್ನೇ ತೋರಿಸುತ್ತಾರೆ ಇದು ಕಾಂಗ್ರೆಸ್‌ ಕಲೆ. ಐಟಿ ಸೆಕ್ಟರ್‌ನಲ್ಲಿ 300 ಬಿಲಿಯನ್ ಅಮೆರಿಕನ್ ಡಾಲರ್‌ ವ್ಯವಹಾರ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಇದು ಅತ್ಯದ್ಬುತ ಸುಳ್ಳು. ಜನರಿಗೆ ಭರವಸೆ ಕೊಡುವ ಪವಿತ್ರವಾದ ವಸ್ತುವಾದ ಪ್ರಣಾಳಿಕೆಯಲ್ಲಿ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತೀರಾ?
6:12 PM, 3 May

ಮೋದಿ ನೀನು ಏನು ಮಾಡಿದೆ? ಎಂದು ಕಾಂಗ್ರೆಸ್‌ನವರು ನನ್ನ ಕೇಳ್ತಿದ್ದಾರೆ, ಆದರೆ ಕಾಂಗ್ರೆಸ್‌ನವರೆ ಹೇಳಿ ನೀವು ಏನು ಮಾಡಿದ್ದೀರಿ? ಎಲ್ಲಿ ಮಾಡಿದ್ದೀರಿ? ಯಾರಿಗಾಗಿ ಮಾಡಿದ್ದೀರಿ? ಹೇಗೆ ಮಾಡಿದ್ದೀರಿ?
6:03 PM, 3 May

ಸಿಟಿ ಆಫ್ ಲೇಕ್ಸ್‌ (ಕೆರೆಗಳ ನಗರ) ಎನಿಸಿಕೊಂಡಿದ್ದ ಬೆಂಗಳೂರು ಇಂದು ಸಿಟಿ ಆಫ್ ಬರ್ನಿಂಗ್ ಲೇಕ್ಸ್‌ (ಬೆಂಕಿಯ ಕೆರೆ) ಆಗಿಬಿಟ್ಟಿದೆ. ನೀರು ಹರಿಯಬೇಕಿದ್ದ ಕೆರೆಯಲ್ಲಿ ಜಾಗದಲ್ಲಿ ಇಂದು ಕೆಮಿಕಲ್ ಹರಿಯುತ್ತಿದೆ.
Advertisement
6:02 PM, 3 May

ಕಾಂಗ್ರೆಸ್‌ಗೆ ಅಧಿಕಾರದ ಮದ ಏರಿದೆ, ಕಾಂಗ್ರೆಸ್‌ನ ಹಿರಿಯ ಸಚಿವರೊಬ್ಬರು ತಮ್ಮನ್ನು ಭೇಟಿ ಆಗಲು ಬಂದ ಅಂಗವಿಕಲನನ್ನು ಲಿಫ್ಟ್‌ನಿಂದ ಹೊರದಬ್ಬಿದ್ದಾನೆ ಇದು ಅಂಹಕಾರದ ಪರಮಾವಧಿ.
6:02 PM, 3 May

ಬಿಬಿಎಂಪಿ ಕಚೇರಿಯಲ್ಲಿ ಕಾಂಗ್ರೆಸ್‌ನ ಮುಖಂಡನೊಬ್ಬ ಹೋಗಿ ಗೂಂಡಾಗಿರಿ ಮಾಡುತ್ತಾನೆ, ಹಾಗಾದರೆ ನೀವು ಯೋಚಿಸಿ ಇಲ್ಲಿ ಯಾರಿಗೆ ತಾನೇ ರಕ್ಷಣೆ ಇದೆ ಎಂದು
6:01 PM, 3 May

ಇಲ್ಲಿನ ಒಬ್ಬ ಕಾಂಗ್ರೆಸ್‌ನ ಶಾಸಕರ ಮಗ ಅಮಾಯಕರ ಮೇಲೆ ಅಮಾನುಷವಾಗಿ ಹಲ್ಲೆ ಮಾಡುತ್ತಾನೆ, ಅಂತಹಾ ಅಪರಾಧಿಗೆ ಕಾಂಗ್ರೆಸ್ ಸರ್ಕಾರ ಅವನಿಗೆ ಬೆಂಬಲ ನೀಡುತ್ತದೆ.
5:59 PM, 3 May

ಮಹಿಳೆಯರ ಸುರಕ್ಷಿತೆ ಎಂಬುದು ಕರ್ನಾಟಕದಲ್ಲಿ ದೊಡ್ಡ ಚಿಂತೆಯಾಗಿಬಿಟ್ಟಿದೆ. ನ್ಯೂಯಿಯರ್‌ ಆಚರಣೆಗೆ ಜನ ಗೋವಾಗೆ ಹೋಗ್ತಾ ಇದ್ದರು ಅಥವಾ ಬೆಂಗಳೂರಿಗೆ ಬರುತ್ತಿದ್ದರು ಆದರೆ ಇಲ್ಲಿ ಹೊಸ ವರ್ಷದಲ್ಲಿ ಆದ ಘಟನೆ ಎಲ್ಲರನ್ನೂ ಚಿಂತಾಕ್ರನ್ನಾಗಿ ಮಾಡಿದೆ. ಆದರೆ ನಮ್ಮ ಬಿಜೆಪಿ ಸರ್ಕಾರ ಇಂತಹಾ ಮಹಿಳಾ ಪೀಡಕರನ್ನು ನೇಣಿಗೆ ಏರಿಸುವ ನಿರ್ಧಾರ ಕೈಗೊಂಡಿದ್ದೇವೆ ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಇಲ್ಲೂ ಜಾರಿಗೆ ತರುತ್ತೇವೆ.
5:58 PM, 3 May

ಸುಲಭವಾಗಿ ವ್ಯಾಪಾರ ಮಾಡುವ ಬಗ್ಗೆ ನಮ್ಮ ಸರ್ಕಾರ ಮಾತನಾಡುತ್ತಿದ್ದರೆ ಕರ್ನಾಟಕ ಸರ್ಕಾರವು ಸುಲಭವಾಗಿ ಕೊಲೆ ಹೇಗೆ ಮಾಡುವುದು ಎಂದು ಚಿಂತಿಸುತ್ತಿದೆ
Advertisement
5:56 PM, 3 May

ಕರ್ನಾಟಕದ ಪಿ.ಗುರುರಾಜ್, ಅಶ್ವಿನಿ ಪೊನ್ನಪ್ಪ ಅಂತಹಾ ಕ್ರೀಡಾಪಟುಗಳನ್ನು ಇಂದು ದೇಶವೇ ನೆನೆಯುತ್ತಿದೆ. ಕರ್ನಾಟಕದ ನನ್ನ ಪ್ರೀತಿಯ ಯುವಕರೆ ನಿಮಗೆ ಶಕ್ತಿ ಇದೆ ಆದರೆ ಭ್ರಷ್ಟಾಚಾರದ ಈ ಕಾಂಗ್ರೆಸ್‌ ಅನ್ನು ತೊಡೆದುಹಾಕಲಿಲ್ಲವೆಂದರೆ ನಿಮ್ಮ ಕನಸು ನನಸಾಗದು.
5:54 PM, 3 May

ಮೇ 12ರಂದು ಬಿಜೆಪಿಗೆ ಮತ ಹಾಕಿ, ಕಾಂಗ್ರೆಸ್‌ನ ಎಲ್ಲ ಅರಾಜಕತೆಗಳಿಂದ ಕರ್ನಾಟಕವನ್ನು ಮುಕ್ತ ಮಾಡಲು ನಿಮಗೆ ಅವಕಾಶ ಇದೆ ಅದನ್ನು ಕಳೆದುಕೊಳ್ಳಬೇಡಿ.
5:52 PM, 3 May

ಕಾಂಗ್ರೆಸ್‌ ಮಾಡಲು ಹೊರಟಿದ್ದ ಸ್ಟೀಲ್ ಬ್ರಿಡ್ಜ್ ಅದು ಕೇವಲ ಸ್ಟೀಲ್ ಬ್ರಿಡ್ಜ್ ಅಲ್ಲ steal (ಕಳ್ಳತನ)ದ ಬ್ರಿಡ್ಜ್‌. ಆದರೆ ಇದರ ವಿರುದ್ಧ ಬಿಜೆಪಿ ಮತ್ತು ಇಲ್ಲಿನ ಜನ ಅದ್ಭುತ ಹೋರಾಟ ಮಾಡಿ ದರೋಡೆಯನ್ನು ತಡೆದಿದ್ದಾರೆ.
5:52 PM, 3 May

ಈ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರಲ್ಲಿ ಒಂದು ಇಲಾಖೆ ಮೇಲೆ ಮತ್ತೊಂದು ಇಲಾಖೆ ಸ್ಪರ್ಧೆ ಮಾಡುತ್ತದೆ, ಒಬ್ಬ ಮಂತ್ರಿ ಇನ್ನೊಬ್ಬ ಮಂತ್ರಿ ಮೇಲೆ ಸ್ಪರ್ಧೆ ಮಾಡುತ್ತಿದ್ದಾನೆ, ಭ್ರಷ್ಟಾರದಲ್ಲಿ ಕರ್ನಾಟಕ ಸರ್ಕಾರ ಸ್ಪರ್ಧೆಗೆ ಬಿದ್ದಿದೆ.
5:50 PM, 3 May

ಟ್ರಾಫಿಕ್ ಜಾಮ್, ರಸ್ತೆ ಗುಂಡಿ ಇದರಲ್ಲೇ ಬೆಂಗಳೂರಿನ ಜನ ಸಿಕ್ಕಿಕೊಂಡಿದ್ದಾರೆ. ರಸ್ತೆ ಗುಂಡಿಯಿಂದ ಎಷ್ಟು ಜನ ಜೀವ ಕಳೆದುಕೊಂಡಿದ್ದಾರೆ. ಇದೆಲ್ಲಾ ಕಾಂಗ್ರೆಸ್‌ನ ಕೊಡುಗೆ.
5:50 PM, 3 May

ಸ್ಟಾರ್ಟ್‌ಅಫ್‌ ಸಂಸ್ಕೃತಿ ಇಂದು ದೇಶದಲ್ಲಿ ಯಶಸ್ಸು ಕಂಡಿದ್ದರೆ ಅದರ ಯಶಸ್ಸು ಬೆಂಗಳೂರಿನ ಯುಕವರಿಗೆ ಸಲ್ಲಬೇಕು. ಬೆಂಗಳೂರು ಸ್ಟಾರ್ಟ್‌ಅಪ್‌ ಹಬ್ ಆಗಿ ಪರಿವರ್ತಿತಗೊಂಡಿದೆ. ಆದರೆ ಕಾಂಗ್ರೆಸ್‌ ಬೆಂಗಳೂರಲ್ಲಿ ಪಾಟ್‌ ಹೋಲ್‌ (ರಸ್ತೆ ಗುಂಡಿ) ಕ್ಲಬ್ ಮಾಡಿಬಿಟ್ಟಿದೆ.
5:48 PM, 3 May

ಕಾಸ್ಮೋಪಾಲಿಟಿನ್ ಸಂಸ್ಕೃತಿಯ ಮೂಲಕ ದೇಶದಲ್ಲಿ ಹೆಸರು ಮಾಡಿದ್ದ ಬೆಂಗಳೂರನ್ನು ಕಲ್ಚರ್ ಆಫ್ ಖೆಯಾಸ್‌ (ಅಟ್ಟಹಾಸ) ಮಾಡಿಬಿಟ್ಟಿದೆ ಈ ಕಾಂಗ್ರೆಸ್‌ ಸರ್ಕಾರ.
5:47 PM, 3 May

ಕಂಪ್ಯೂಟರ್ ರಾಜಧಾನಿ ಎಂದು ವಿಶ್ವದಲ್ಲಿ ಹೆಸರಾಗಿದ್ದ ಬೆಂಗಳೂರನ್ನು ಕಾಂಗ್ರೆಸ್ ಕ್ರೈಮ್ ರಾಜಧಾನಿಯನ್ನಾಗಿ ಕಾಂಗ್ರೆಸ್ ಪರಿವರ್ತಿಸಿಬಿಟ್ಟಿದೆ.
5:46 PM, 3 May

ಗಾರ್ಡನ್ ಸಿಟಿ ಎಂಬ ಹೆಸರು ಹೊಂದಿದ್ದ ಬೆಂಗಳೂರನ್ನು ಗಾರ್ಬೆಜ್ ಸಿಟಿ ಯನ್ನಾಗಿ ಪರಿವರ್ತಿಸುವ ಕಾರ್ಯವನ್ನು ಕಾಂಗ್ರೆಸ್‌ ಕರ್ನಾಟಕ ಮಾಡಿದೆ
5:45 PM, 3 May

5 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಸಿಲಿಕಾನ್ ವ್ಯಾಲಿಎನಿಸಿಕೊಂಡಿದ್ದ ಬೆಂಗಳೂರನ್ನು ವ್ಯಾಲಿ ಆಫ್ ಸೀನ್ (ಪಾಪದ ಕಣಿವೆ) ಮಾಡಿಬಿಟ್ಟಿದೆ.
5:44 PM, 3 May

5 ವರ್ಷಗಳಲ್ಲಿ ಕಾಂಗ್ರೆಸ್‌ ಬೆಂಗಳೂರಿಗೆ ಎಂತಹಾ ಕೆಟ್ಟ ಉಡುಗೊರೆಗಳನ್ನು ಕೊಟ್ಟಿದೆ. ಅದನ್ನು ನಾನು ಇಲ್ಲಿ ನಿಮ್ಮ ಮುಂದೆ ಇಡುತ್ತೇನೆ.
5:42 PM, 3 May

ಜೆಡಿಎಸ್‌ ಚುನಾವಣೆಯಲ್ಲಿ ಸೋಲುವುದು ಖಂಡಿತ. ಅವರು ಬೇರೆ ರಾಜ್ಯದಿಂದ ಭಯೋತ್ಪಾದಕರಿಗೆ ಬೆಂಬಲ ನೀಡುವವರನ್ನು ರಾಜ್ಯಕ್ಕೆ ಕರೆತಂದು ಮೈತ್ರಿ ಮಾಡಿಕೊಂಡಿದ್ದಾರೆ.
5:42 PM, 3 May

* ಜೆಡಿಎಸ್‌ಗೆ ಮತ ಹಾಕುವ ತಪ್ಪು ನಿರ್ಧಾರ ಮಾಡದಿರಿ, ರಾಜ್ಯದ ಸಮಸ್ಯೆಗಳಿಗೆ ಬಿಜೆಪಿ ಮಾತ್ರವೇ ಪರ್ಯಾಯ ವ್ಯವಸ್ಥೆ.
5:41 PM, 3 May

ಕಾಂಗ್ರೆಸ್‌ಗೆ ಸೋಲುವುದು ಯಾವಾಗ ಖಚಿತವಾಗುತ್ತದೋ ಆಗ ಅದು ಅತಂತ್ರ ವಿಧಾನಸಭೆ ಆಗುತ್ತದೆ ಎನ್ನುವ ಗಾಳಿ ಸುದ್ದಿ ಹರಡಿಸುತ್ತದೆ. ಈ ಬಾರಿ ಕರ್ನಾಟಕದಲ್ಲೂ ಅದೇ ಆಗುತ್ತಿದೆ. ಈಗಲೂ ಕೂಡಾ ಕಾಂಗ್ರೆಸ್ ಗಾಳಿ ಸುದ್ದಿ ಹರಡಿಸುತ್ತಿದೆ ಆದರೆ ಬಿಜೆಪಿ ಬಹುಮತ ಪಡೆಯುವುದು ಖಾಯಂ, ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ.
5:41 PM, 3 May

ರಾಜ್ಯದ ಎಲ್ಲೆಡೆ ಬಿಜೆಪಿ ಪರ ಅಲೆಯಿದೆ, ಸಮಾವೇಶವನ್ನು ಆಯೋಜಿಸಲು ಮೈದಾನಗಳು ಸಾಕಾಗುತ್ತಿಲ್ಲ, ಕಾಂಗ್ರೆಸ್‌ ಕೊನೆಯ ಕೋಟೆಯಾದ ಕರ್ನಾಟಕದಿಂದಲೂ ಅದನ್ನು ಓಡಿಸಲು ಜನ ಸಜ್ಜಾಗಿದ್ದಾರೆ.

English summary
After finishing two BJP rallies in Kalburgi and Bellary Modi addressed BJP rally in Bengaluru's Kengeri. He lambasted on Congress over corruption and Bengaluru's infrastructure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X