ನಾರಾಯಣ ಹೆಲ್ತ್ ಸಿಟಿಯಲ್ಲಿ ಕಡಿಮೆ ಖರ್ಚಿನಲ್ಲಿ ರೋಬೋಟಿಕ್ ಸರ್ಜರಿ

By: Srinivasa Mata
Subscribe to Oneindia Kannada

ಬೆಂಗಳೂರು, ಆಗಸ್ಟ್ 11: ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಆರಂಭವಾಗಲಿರುವ ರೋಬೋಟಿಕ್ ಸರ್ಜರಿ ತರಬೇತಿ ಕೇಂದ್ರಕ್ಕೆ ಗುರುವಾರ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಚಾಲನೆ ನೀಡಿದರು.

ರೋಬೋಟ್ ಸರ್ಜರಿ ಘಟಕ ಆರಂಭಿಸುವುದಕ್ಕೆ 13ರಿಂದ 15 ಕೋಟಿ ರುಪಾಯಿ ಅಗತ್ಯವಿದೆ. ಇದು ಹಣಕಾಸಿನ ವಿಚಾರ ಆಯಿತು. ಇನ್ನು ತರಬೇತಿ ವಿಚಾರಕ್ಕೆ ಬಂದರೆ, ಇಡೀ ದೇಶದಲ್ಲಿ ಒಂದು ತರಬೇತಿ ಕೇಂದ್ರ ಕೇರಳದ ಕೊಚ್ಚಿಯಲ್ಲಿದೆ. ಅಲ್ಲಿ ರೋಬೋಟಿಕ್ ಸರ್ಜರಿ ಉಪಕರಣ ತಯಾರಿಸುವ ಡಾ ವಿನ್ಸಿ ಕಂಪೆನಿಯವರೇ ತರಬೇತಿ ನೀಡುತ್ತಾರೆ. ಅದೇನಿದ್ದರೂ ಅವರ ಬಳಿ ಉಪಕರಣ ಖರೀದಿಸುವವರಿಗೆ ಮಾತ್ರ.

ಒಂದೆಡೆ ಈ ಚಿಕಿತ್ಸೆ ದುಬಾರಿ. ಮತ್ತೊಂದು ಕಡೆ ತರಬೇತಿ ಪಡೆದ ವೈದ್ಯರ ಸಂಖ್ಯೆಯೇ ಕಡಿಮೆ. ಆದ್ದರಿಂದ ದೇಶದಲ್ಲೇ ಮೊದಲ ಬಾರಿಗೆ ವೈದ್ಯರಿಗಾಗಿ ರೋಬೋಟಿಕ್ ಸರ್ಜರಿಯ ಟ್ರೇನಿಂಗ್ ಸೆಂಟರ್ ನಮ್ಮ ಬೆಂಗಳೂರಿನ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿ ಆರಂಭವಾಗಲಿದೆ.

ಅಂದಹಾಗೆ, ನಾರಾಯಣ ಹೆಲ್ತ್ ಸಿಟಿಯಲ್ಲಿ ತರಬೇತಿ ಕೇಂದ್ರವೊಂದೇ ಅಲ್ಲ, ಕಡಿಮೆ ದರದಲ್ಲಿ ರೋಬೋಟಿಕ್ ಸರ್ಜರಿ ಕೂಡ ನಡೆಸುವ ಉದ್ದೇಶ ಇದೆ.

ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಮೂರನೇ ತಲೆಮಾರು ಎನ್ನಬಹುದಾದ (ಓಪನ್ ಸರ್ಜರಿ, ಲಾಪ್ರೋಸ್ಕೋಪಿಕ್ ಈಗ ಹೆಚ್ಚು ಚಾಲ್ತಿಯಲ್ಲಿರುವುದು) ರೋಬೋಟಿಕ್ ಸರ್ಜರಿ ಹೆಚ್ಚು ನಿಖರ. ರೋಬೋಟಿಕ್ ಯಂತ್ರದ ಕೈ ಮನುಷ್ಯರಂತೆಯೇ ಇರುತ್ತದೆ. ಮನುಷ್ಯರ ಕೈಗಿಂತ ವೇಗವಾಗಿ ಚಲಿಸುತ್ತದೆ.

3ಡಿ ತಂತ್ರಜ್ಞಾನ ಇರುವುದರಿಂದ ರೋಗಿಯ ದೇಹದ ತುಂಬ ಸೂಕ್ಷ್ಮ ಜಾಗವನ್ನೂ ವೈದ್ಯರು ಮಾನಿಟರ್ ಸಹಾಯದಿಂದ ಹೆಚ್ಚು ಸ್ಪಷ್ಟವಾಗಿ ನೋಡಬಹುದು.

ರೋಬೋಟಿಕ್ ಸರ್ಜರಿಯಲ್ಲಿ ರೋಗಿಯ ದೇಹದಲ್ಲಿ ತೀರಾ ಸಣ್ಣ ರಂಧ್ರ ಮಾಡಿ, ಆಪರೇಷನ್ ಮಾಡಬಹುದು. ಜತೆಗೆ ಆಪರೇಷನ್ ನಂತರ ರೋಗಿ ಎದುರಿಸುತ್ತಿದ್ದ ಸೈಡ್ ಎಫೆಕ್ಟ್ಸ್ ಕೂಡ ಕಡಿಮೆ ಆಗುತ್ತದೆ. ಇತರ ವಿಧಾನ ಅನುಸರಿಸಿ ಆಪರೇಷನ್ ಮಾಡುವ ವೇಳೆ ಗಾಯದ ಪ್ರಮಾಣ ಹೆಚ್ಚು. ಆಸ್ಪತ್ರೆಯಲ್ಲಿ ಬಹಳ ದಿನ ಇರಬೇಕು... ಹೀಗೆ ಹಲವು ಸಮಸ್ಯೆಗಳು ಕಡಿಮೆ ಆಗುತ್ತವೆ.

ಚಿಕಿತ್ಸೆ ದುಬಾರಿ: ಸದ್ಯಕ್ಕೆ ಚಾಲ್ತಿಯಲ್ಲಿರುವ ಶಸ್ತ್ರಚಿಕಿತ್ಸಾ ವಿಧಾನಕ್ಕೆ ಹೋಲಿಸಿದರೆ ಇದು ಸ್ವಲ್ಪ ದುಬಾರಿ. ಅಂದಾಜು 1ರಿಂದ 3 ಲಕ್ಷ ರುಪಾಯಿ ಆಗುತ್ತದೆ. ಆ ಪೈಕಿ ಆಪರೇಷನ್ ಗೆ ಬಳಸುವ ಸರ್ಜರಿ ವಸ್ತುಗಳಿಗೆ 70 ಸಾವಿರದಿಂದ 1 ಲಕ್ಷ ಆಗುತ್ತದೆ. ಇವುಗಳನ್ನು ಒಮ್ಮೆ ಮಾತ್ರ ಬಳಸಲು ಸಾಧ್ಯ ಅಷ್ಟೇ.

ರೋಬೋಟಿಕ್ ಸರ್ಜರಿ ಯಾವುದಕ್ಕೆ ಬಳಸುತ್ತಾರೆ: ಮೂತ್ರಕೋಶ, ಮೂತ್ರಪಿಂಡ, ಜಿನೆಕಾಲಾಜಿಕಲ್, ಕೊಲೆರೆಕ್ಟಲ್, ತಲೆ ಮತ್ತು ಕತ್ತು ಸಂಬಂಧಿ ಕ್ಯಾನ್ಸರ್ ಸರ್ಜರಿಗಳಲ್ಲಿ ಬಳಸುತ್ತಾರೆ. ಮುಂದಿನ ವಾರ ನಾರಾಯಣ ಹೆಲ್ತ್ ಸಿಟಿಯಲ್ಲಿ 21 ವರ್ಷದ ಯುವಕನಿಗೆ ಕಿಡ್ನಿ ಬ್ಲಾಕೇಜ್ ಆಪರೇ‌ಷನ್ ರೋಬೋಟಿಕ್ ಸರ್ಜರಿ ಮೂಲಕ ನಡೆಯಲಿದೆ. ಯಶಸ್ವಿನಿ ಯೋಜನೆಯಡಿ ಆ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ.

ನಾರಾಯಣ್ ಹೆಲ್ತ್ ಅಧ್ಯಕ್ಷ ಡಾ.ದೇವಿಶೆಟ್ಟಿ

ನಾರಾಯಣ್ ಹೆಲ್ತ್ ಅಧ್ಯಕ್ಷ ಡಾ.ದೇವಿಶೆಟ್ಟಿ

26 ವರ್ಷದ ಹಿಂದೆ ನಾನು ಮೊದಲ ಬಾರಿಗೆ ಹಾರ್ಟ್ ಆಪರೇಷನ್ ಮಾಡಿದಾಗ ಒಂದೂವರೆ ಲಕ್ಷ ಖರ್ಚಾಗಿತ್ತು. ಈಗ 95 ಸಾವಿರದಿಂದ 1 ಲಕ್ಷದೊಳಗೆ ಮುಗಿಯುತ್ತದೆ. ರೋಬೋಟಿಕ್ ಸರ್ಜರಿಯೂ ಅಷ್ಟೇ ಕ್ರಮೇಣ ಕಡಿಮೆ ಖರ್ಚಿನಲ್ಲಿ ಮುಗಿಯುತ್ತದೆ. ಈ ಎಕ್ವಿಪ್ ಮೆಂಟ್ ಬಳಕೆ ಹೆಚ್ಚಬೇಕು, ನಮ್ಮ ಡಾಕ್ಟರ್ ಗಳು ತರಬೇತಿ ಪಡೆಯಬೇಕು. ಆಗಷ್ಟೇ ಇದರ ವೆಚ್ಚವೂ ಕಡಿಮೆ ಆಗುತ್ತದೆ.

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ

ಈ ದೇಶದ ಬಡವರಿಗೂ ಅತ್ಯುತ್ತಮ ಚಿಕಿತ್ಸೆ ದೊರೆಯಬೇಕು. ಅದಕ್ಕಾಗಿ ಇಲ್ಲಿನ ವೈದ್ಯರು ಸಜ್ಜಾಗಬೇಕು ಎಂಬ ಕಾರಣಕ್ಕೆ ಇನ್ಫೋಸಿಸ್ ಪ್ರತಿಷ್ಠಾನ ಸಹಯೋಗ ವಹಿಸಿದೆ.

ಡಾ.ಅಶ್ವಿನಿಕುಮಾರ್ ಕುಂದರಿ

ಡಾ.ಅಶ್ವಿನಿಕುಮಾರ್ ಕುಂದರಿ

ನಾರಾಯಣ ಹೆಲ್ತ್ ಸಿಟಿ ಸರ್ಜಿಕಲ್ ಗ್ಯಾಸ್ಟ್ರೋಎಂಟೆರಾಲಜಿಸ್ಟ್, ಸೀನಿಯರ್ ಕನ್ಸಲ್ಟಂಟ್ ಡಾ.ಅಶ್ವಿನಿಕುಮಾರ್ ಕುಂದರಿ ಈ ಹಿಂದೆ ಆಪರೇಷನ್ ವೇಳೆ ರೋಗಿಗೆ ದೊಡ್ಡ ಗಾಯಗಳಾಗ್ತಿತ್ತು. ಜಾಸ್ತಿ ದಿನ ಆಸ್ಪತ್ರೆಯಲ್ಲಿ ಇರಬೇಕಾಗಿತ್ತು. ಕೆಲ ಸಲ ವೈದ್ಯರಿಗೆ ಇನ್ಫೆಕ್ಷನ್ ಆಗುತ್ತಿತ್ತು. ರೋಬೋಟಿಕ್ ಸರ್ಜರಿಯಿಂದ ಇಂಥ ಬಹಳ‍ಷ್ಟು ಸಮಸ್ಯೆಗಳು ನಿವಾರಣೆ ಆಗುತ್ತವೆ.

ಇನ್ಫೋಸಿಸ್ ಪ್ರತಿಷ್ಠಾನದ ಸಹಯೋಗ

ಇನ್ಫೋಸಿಸ್ ಪ್ರತಿಷ್ಠಾನದ ಸಹಯೋಗ

ರೋಬೋಟಿಕ್ ಸರ್ಜರಿಯ ಟ್ರೇನಿಂಗ್ ಸೆಂಟರ್ ಗಾಗಿ ಇನ್ಫೋಸಿಸ್ ಪ್ರತಿಷ್ಠಾನದ ಸಹಯೋಗ ಇದ್ದು, 8 ಕೋಟಿ ರುಪಾಯಿ ಹಣ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Narayana health launches Robotic surgery in Bengaluru with cooperation of Infosys foundation. ನಾರಾಯಣ ಹೆಲ್ತ್ ಸಿಟಿಯಲ್ಲಿ ಕಡಿಮೆ ಖರ್ಚಿನಲ್ಲಿ ರೋಬೋಟಿಕ್ ಸರ್ಜರಿ.
Please Wait while comments are loading...