ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಟ್ಟದಾಸನಪುರದಲ್ಲಿ ನಾರಾಯಣ ಹೆಲ್ತ್ ಸಂಸ್ಥೆಯ ಇ-ಹೆಲ್ತ್ ಕೇಂದ್ರ

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 21: ನಾರಾಯಣ ಹೆಲ್ತ್ ಸಂಸ್ಥೆಯು ಎಲ್ಲರಿಗೂ ಗುಣಮಟ್ಟದ ಆರೋಗ್ಯ ನೀಡುವ ಸಲುವಾಗಿ ನಗರದ ದೊಡ್ಡ ತೋಗೂರು ಗ್ರಾಮ ಪಂಚಾಯಿತಿಯ ಬೆಟ್ಟದಾಸನಪುರದಲ್ಲಿ ಇ-ಹೆಲ್ತ್ ಕೇಂದ್ರ ಆರಂಭಿಸಿದೆ.

ಸಿಸ್ಕೋ ಸಿಸ್ಟಮ್ಸ್, ಎಲ್ಸಿಯ ಟ್ರಸ್ಟ್ (ELCIA) ಮತ್ತು ದೊಡ್ಡ ತೋಗೂರು ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ತನ್ನ ಇ-ಹೆಲ್ತ್ ಸೆಂಟರ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

Narayana Health inaugurates e-Health Centre at Bettadasanapura Bengaluru

ಸಿಸ್ಕೋ ಸಿಸ್ಟಮ್ಸ್ ನಿರ್ದೇಶಕರು ಶ್ಯಾಮ್ ಕಲುವೆ, ದೊಡ್ಡ ತೋಗೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಅನಿಲ್ ಕುಮಾರ್ ಅವರು ಮತ್ತು ಬಾಬು ರಂಗಸ್ವಾಮಿ- ಅಧ್ಯಕ್ಷರು ಎಲ್ಸಿಯ ಟ್ರಸ್ಟ್ (ELCIA) ಅವರೊಂದಿಗೆ ಬೆಟ್ಟದಾಸನಪುರದಲ್ಲಿ ಈ ಕೇಂದ್ರವನ್ನು ಉದ್ಘಾಟಿಸಿದರು.

ನಾರಾಯಣ ಹೆಲ್ತ್ ಸಿಟಿ: ನಾರಾಯಣ ಹೆಲ್ತ್ ಸಿಟಿ ಬೆಂಗಳೂರಿನ ಬೊಮ್ಮಸಂದ್ರದಲ್ಲಿದೆ. ಇಲ್ಲಿ ನಾರಾಯಣ ಇನ್‍ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸ್ (ಎನ್‍ಐಸಿಎಸ್), ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‍ಗಳು ಹೃದ್ರೋಗ ಮತ್ತು ಹೃದ್ರೋಗ ಶಸ್ತ್ರಚಿಕಿತ್ಸೆಗೆ ಪೂರಕವಾಗಿ ನಡೆಸಲಾಗುತ್ತಿದೆ. ಇಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಆರೈಕೆ ಮಾಡುವ ಮಜುಂದಾರ್ ಶಾ ಮೆಡಿಕಲ್ ಸೆಂಟರ್ ಕೂಡಾ ಇದ್ದು, ಭಾರತದ ಅತಿದೊಡ್ಡ ಬೋನ್ ಮಾರೊ ಕಸಿ ಘಟಕವು ಕೂಡಾ ಇಲ್ಲಿಯೇ ಇದೆ. ಎನ್‍ಎಚ್ ಹೆಲ್ತ್ ಸಿಟಿಯಲ್ಲಿ ಸ್ಟೆಮ್ ಸೆಲ್ ಬ್ಯಾಂಕ್ ಕೂಡಾ ಇದೆ.

English summary
Narayana Health launched a technology enabled e-health centre. The centre is located in Bettadasanapura in collaboration with CISCO, ELCIA Trust and Doddathogur Panchayat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X