ಅಂಗನವಾಡಿ ಕಾರ್ಯಕರ್ತೆಯರಿಗೆ ಬಾಯಿ, ಸ್ತನ ಕ್ಯಾನ್ಸರ್ ತಪಾಸಣೆ

Posted By:
Subscribe to Oneindia Kannada

ಆನೇಕಲ್, ಆಗಸ್ಟ್ 18: : ನಾರಾಯಣ ಹೆಲ್ತ್ ತನ್ನ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಲಿಟಿ(ಸಿಎಸ್‍ಆರ್) ವತಿಯಿಂದ ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತವಾಗಿ ಬಾಯಿ ಹಾಗೂ ಸ್ತನ ಕ್ಯಾನ್ಸರ್ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ, ಸಮಸ್ಯೆ ಬರದಂತೆ ತಡೆಗಟ್ಟುವ ಹಾಗೂ ಚಿಕಿತ್ಸಾ ಕ್ರಮಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿತ್ತು.

Narayana Health conducts free oral and breast cancer screening for Anganwadi workers

ತರಬೇತಿ ಪಡೆದ ಸಮುದಾಯ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರು, ಬಾಯಿ ಹಾಗೂ ಸ್ತನ ಕ್ಯಾನ್ಸರ್ ತಪಾಸಣೆಯನ್ನು ನಡೆಸಿದರು. ಸುಮಾರು 350 ಅಂಗನವಾಡಿ ಕಾರ್ಯಕರ್ತೆಯರು ತಪಾಸಣೆಗೆ ಒಳಗಾದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ನಾರಾಯಣ ಹೆಲ್ತ್‍ನ ಮೊಬೈಲ್ ಮ್ಯಾಮೊಗ್ರಫಿ ಸೇವೆಗೆ 55 ಅಂಗನವಾಡಿ ಕಾರ್ಯಕರ್ತೆಯರು ಒಳಪಟ್ಟರು. ತಪಾಸಣೆಗೆ ಒಳಗಾದ ಮಹಿಳೆಯರಲ್ಲಿ ಕೆಲವರಿಗೆ ಹೆಚ್ಚಿನ ರೋಗ ತಪಾಸಣೆ/ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು.

Narayana Health conducts free oral and breast cancer screening for Anganwadi workers

ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಹಮ್ಮಿಕೊಂಡಿದ್ದ ಈ ಜಾಗೃತಿ ಕಾರ್ಯಕ್ರಮವು, ಆನೇಕಲ್ ತಾಲ್ಲೂಕಿನ ಜನಸಾಮಾನ್ಯರಲ್ಲಿ ಪರಿಣಾಮಕಾರಿಯಾದ ತಿಳಿವಳಿಕೆ ಮೂಡಿಸಲು ನೆರವಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Narayana Health conducted an oral and breast cancer screening program for Anganwadi workers of Anekal Taluka, Bangalore. The program was aimed at increasing awareness and placing emphasis on prevention, early identification and awareness towards modalities of treatment.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ