• search

ವಿಶ್ವ ಹೃದಯ ದಿನಾಚರಣೆಗಾಗಿ ಚೇಂಜ್ ಆಫ್ ಹಾರ್ಟ್ ಅಭಿಯಾನ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಸೆಪ್ಟೆಂಬರ್ 28: ನಾರಾಯಣ ಹೆಲ್ತ್, ವಿಶ್ವ ಹೃದಯ ದಿನದ ಅಂಗವಾಗಿ ಚೇಂಜ್ ಆಫ್ ಹಾರ್ಟ್ ಎಂಬ ಒಂದು ವಾರದ ಅಭಿಯಾನ ಹಮ್ಮಿಕೊಂಡಿದೆ.

  ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ 29ರಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಈ ಅಭಿಯಾನದಲ್ಲಿ ಬೆಂಗಳೂರಿನ ಉದ್ದಗಲಕ್ಕೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

  ಇದರಲ್ಲಿ ಆಕಾಂಕ್ಷ ಆರ್ಟ್ ಗ್ರೂಪ್ ಸಹಯೋಗದಲ್ಲಿ ನಿಧಿ ಸಂಗ್ರಹ ಚಿತ್ರಕಲಾ ಪ್ರದರ್ಶನ, ಸಾರ್ವಜನಿಕ ವೇದಿಕೆಗಳಲ್ಲಿ ಹಾರ್ಟ್ ಅಂಡ್ ಸೈಕಲ್ ಪ್ರತಿಷ್ಠಾಪನೆ, ಪ್ರಮುಖ ಸ್ಥಳಗಳಲ್ಲಿ ವಾಕಥಾನ್ ಮತ್ತು ವೈಟ್‍ಫೀಲ್ಡ್ ನರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ಪುನಶ್ಚೇತನ ಶಿಬಿರ ಒಳಗೊಂಡಿದೆ.

  ಭಾರತದಲ್ಲಿ ಶೇ.50ರಷ್ಟು ಹೃದ್ರೋಗ ಹೆಚ್ಚಳ, ಇಲ್ಲಿವೆ ಪ್ರಮುಖ ಕಾರಣ

  ಈ ವಿಶಿಷ್ಟ ಅಭಿಯಾನದ ಬಗ್ಗೆ ಮಾತನಾಡಿದ ನಾರಾಯಣ ಹೆಲ್ತ್ ಸಿಟಿ ಹೃದ್ರೋಗ ವಿಭಾಗದ ಹಿರಿಯ ಸಲಹಾತಜ್ಞ ಡಾ.ಸಂಜಯ್ ಮೆಹೋತ್ರಾ, "ಭಾರತದಲ್ಲಿ ಹೃದಯ ಕಾಯಿಲೆ ದಿನದಿಂದ ದಿನಕ್ಕೆ ಯುವಜನರಲ್ಲಿ ಹೆಚ್ಚುತ್ತಿದೆ. ಎಳೆ ವಯಸ್ಸಿನಲ್ಲೇ ಹೃದಯ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಮುಖ್ಯ ಕಾರಣ ಜೀವನಶೈಲಿ. ಇದರಲ್ಲಿ ಜಂಕ್ ಫುಡ್ ಸೇವನೆ, ದೈಹಿಕ ವ್ಯಾಯಾಮಗಳು ಕಡಿಮೆಯಾಗಿರುವುದು, ಒತ್ತಡದ ಮಟ್ಟ ಅಧಿಕವಾಗುತ್ತಿರುವುದು, ಧೂಮಪಾನ ಮತ್ತು ಮದ್ಯಪಾನ ಚಟ ಹೆಚ್ಚುತ್ತಿರುವುದು.

  Narayana Health Change of Heart’ to commemorate World Heart Day

  ಒಟ್ಟು ಪ್ರಕರಣಗಳ ಪೈಕಿ ಶೇಕಡ 80ರಷ್ಟು ಪ್ರಕರಣಗಳನ್ನು ತಂಬಾಕು ಬಳಕೆ ಮಾಡದಿರುವುದು, ಅನಾರೋಗ್ಯಕರ ಆಹಾರ ಪದ್ಧತಿ ಕೈಬಿಡುವುದು, ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸುವುದು, ಆಲ್ಕೋಹಾಲ್‍ನ ಅಪಾಯಕಾರಿ ಬಳಕೆಯನ್ನು ನಿಯಂತ್ರಿಸುವುದರಿಂದ ತಡೆಯಲು ಸಾಧ್ಯವಿದೆ.

  ನಿಯತವಾಗಿ ಸ್ಕ್ರೀನಿಂಗ್ ನಡೆಸುವುದು, ಜಡ ಜೀವನಶೈಲಿಯನ್ನು ಅನುಸರಿಸದಿರುವುದು ಮತ್ತಿತರ ವಿಧಾನಗಳಿಂದಷ್ಟೇ ಹೃದ್ರೋಗ ಸಮಸ್ಯೆಯನ್ನು ತಡೆಗಟ್ಟಲು ಸಾಧ್ಯ. ನಮ್ಮ ಆಹಾರದ ಹವ್ಯಾಸದಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳುವುದು, ನಿಯತವಾಗಿ ದೈಹಿಕ ವ್ಯಾಯಾಮಗಳನ್ನು ಮಾಡುವಂಥ ರೋಗ ತಡೆ ವಿಧಾನಗಳನ್ನು ಅನುಸರಿಸಿ, ವೈದ್ಯರ ಸಲಹೆ ಪಡೆಯುವುದು ಉತ್ತಮ.

  ಆಂಧ್ರದ ವ್ಯಕ್ತಿಗೆ ಮರು ಜೀವ ನೀಡಿದ ಹಾಸನದ ವ್ಯಕ್ತಿಯ ಹೃದಯ

  ಚಿತ್ರಕಲಾ ಪ್ರದರ್ಶನ : ಆಕಾಂಕ್ಷ ಆರ್ಟ್ ಗ್ರೂಪ್ ಸಹಯೋಗದಲ್ಲಿ ನಿಧಿಸಂಗ್ರಹ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ, 56 ಮಂದಿ ಉದಯೋನ್ಮುಖ ಕಲಾವಿದರ 100ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಈ ಕಲಾಕೃತಿಗಳಿಗೆ 3000 ರೂಪಾಯಿನಿಂದ 80 ಸಾವಿರ ರೂಪಾಯಿವಗಿನ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಈ ಚಿತ್ರಗಳನ್ನು ಒಂದು ವಾರ ಕಾಲ ಪ್ರರ್ಶಿಸಲಾಗುತ್ತದೆ.

  ಈ ಕಲಾಕೃತಿಗಳ ಮಾರಾಟದಿಂದ ಬಂದ ಹಣದ ಶೇಕಡ 50ರಷ್ಟನ್ನು ನಾರಾಯಣ ಹೃದಯಾಲಯದ ಲಾಭರಹಿತ ಘಟಕವಾದ ನಾರಾಯಣ ಹೃದಯಾಲಯ ಚಾರಿಟಬಲ್ ಟ್ರಸ್ಟ್ ಗೆ ಸಮರ್ಪಿಸಲಾಗುವುದು. ಇದರ ವತಿಯಿಂದ ದುರ್ಬಲ ವರ್ಗದವರಿಗೆ ಉಚಿತವಾಗಿ ಹೃದಯ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ.

  Narayana Health Change of Heart’ to commemorate World Heart Day

  ಇನ್ನೊಂದು ಆಸಕ್ತಿದಾಯಕ ಹೃದಯ ಮತ್ತು ಸೈಕಲ್ ಅಳವಡಿಕೆ ಸಮಾರಂಭವನ್ನು ಹಳೆ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್ ಮತ್ತು ವೈಟ್‍ಫೀಲ್ಡ್‍ನ ಗ್ಲೋಬಲ್ ಟೆಕ್‍ಪಾರ್ಕ್ ಅವರಣದಲ್ಲಿ ನಡೆಸಲಾಗುವುದು. ಇದರ ಮುಖ್ಯವಾದ ಉದ್ದೇಶವೆಂದರೆ, ಹೃದಯಪೂರ್ವಕ ಹೃದಯ ಮತ್ತು ಆರೋಗ್ಯಕರ ನಡವಳಿಕೆಯ ನಡುವಿನ ಸಂಬಂಧವನ್ನು ತಿಳಿಸುವುದು.

  ಗರ್ಭಿಣಿಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಏನು ಹೇಳತ್ತೆ ಅಧ್ಯಯನ?

  ಇದರಲ್ಲಿ ಪಾಲ್ಗೊಳ್ಳುವ ರೋಗಿಗಳು ಸೈಕಲ್ ಪೆಡಲ್ ತುಳಿದುಕೊಂಡು, ಅಳವಡಿಸಿರುವ ಹೃದಯ ಚಿತ್ರದ ಬಳಿಗೆ ಬರಬೇಕು. ಇದೇ ವೇಳೆ ಹಳೆ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್‍ನಲ್ಲಿ, ವಾಕಾಥಾನ್ ಕೂಡಾ ಆಯೋಜಿಸಲಾಗಿದೆ. ಈ ವಾಕಥಾನ್, ಸೆಪ್ಟೆಂಬರ್ 30ರಂದು ಬೆಳಿಗ್ಗೆ 6ಕ್ಕೆ ಆರಂಭವಾಗಲಿದೆ. ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಇದನ್ನು ಆಯೋಜಿಸಲಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Narayana Health, Bengaluru announces the launch of its week long campaign ‘Change of Heart’ to commemorate World Heart Day which is observed on 29 September 2018. The campaign comprises of several activities that will be conducted across regions in Bengaluru

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more