ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾರಾಯಣ ಸಂಸ್ಥಾನದಿಂದ ಅಂಗವಿಕಲರಿಗೆ ಉಚಿತ ಕೃತಕ ಕಾಲು

By Mahesh
|
Google Oneindia Kannada News

ಬೆಂಗಳೂರು, ಜುಲೈ 29: ನಾರಾಯಣ ಸೇವಾ ಸಂಸ್ಥಾನ ಸ್ವಯಂಸೇವಾ ಸಂಸ್ಥೆ ವತಿಯಿಂದ ನಗರದಲ್ಲಿ ಅಂಗವಿಕಲರಿಗಾಗಿ ಕೃತಕ ಕಾಲು ಮಾಪನ ಶಿಬಿರವನ್ನು ಆಯೋಜಿಸಲಾಗಿತ್ತು. ಕೃತಕ ಕಾಲುಗಳ ಗಾತ್ರವನ್ನು ನಿರ್ಧರಿಸಲು ಈ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಇದರ ಆಧಾರದಲ್ಲಿ ಆಯಾ ವ್ಯಕ್ತಿಗಳಿಗೆ ಹೊಂದಿಕೆಯಾಗುವ ಕೃತಕ ಕಾಲುಗಳನ್ನು ತಯಾರಿಸಿ ಉಚಿತವಾಗಿ ಫಲಾನುಭವಿಗಳಿಗೆ ಅಳವಡಿಸಲಾಗುತ್ತದೆ. 40ಕ್ಕೂ ಅಧಿಕ ಮಂದಿ ಅಂಗವಿಕಲರು ಶಿಬಿರದಲ್ಲಿ ಭಾಗವಹಿಸಿದ್ದರು ಹಾಗೂ ಇವರಿಗೆ ಕೃತಕ ಕಾಲುಗಳನ್ನು ತಯಾರಿಸಲು ಅಳತೆ ಮಾಡಲಾಯಿತು. 5 ಮಂದಿ ವೈದ್ಯರ ತಂಡ ಈ ಶಿಬಿರವನ್ನು ನಡೆಸಿಕೊಟ್ಟಿತು.

ಮೊದಲು ತಪಾಸಣೆ ನಡೆಸಿ ಕೃತಕ ಕಾಲುಗಳನ್ನು ಅಳವಡಿಸುವ ಸಾಧ್ಯತೆಯ ಪರಿಶೀಲನೆ ನಡೆಸಲಾಯಿತು. ಬಳಿಕ ಆಯಾ ವ್ಯಕ್ತಿಗಳಿಗೆ ಹೊಂದಿಕೆಯಾಗುವ ಕೃತಕ ಕಾಲು ತಯಾರಿಸಲು ಅಳತೆ ಪಡೆಯಲಾಯಿತು.

ಬಹಳಷ್ಟು ಮಂದಿ ವಿವಿಧ ಕಾರಣಗಳಿಂದ ಕಾಲುಗಳನ್ನು ಕಳೆದುಕೊಳ್ಳುತ್ತಿದ್ದು, ಕೆಲವರು ಅಪಘಾತಗಳಲ್ಲಿ ಕಾಲು ಕಳೆದುಕೊಂಡರೆ ಮತ್ತೆ ಕೆಲವರು ಕೆಲ ರೋಗಗಳಿಂದ ಕಾಲು ಕಳೆದುಕೊಳ್ಳುವ ಮೂಲಕ ಇತರರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ.

ಕೃತಕ ಕಾಲು ಜೋಡಣೆಯು ಇಂಥ ವ್ಯಕ್ತಿಗಳ ಚಲನೆಯನ್ನು ಸುಧಾರಿಸುವುದು ಮಾತ್ರವಲ್ಲದೇ ಅವರನ್ನು ಸ್ವತಂತ್ರರನ್ನಾಗಿ ಮಾಡುವ ಮೂಲಕ ಹೊಸ ಆತ್ಮವಿಶ್ವಾಸವನ್ನು ಅವರಲ್ಲಿ ತುಂಬುತ್ತದೆ. ಕೃತಕ ಕಾಲು ಜೋಡಣೆಯಿಂದ ದೈನಂದಿನ ಕಾರ್ಯಚಟುವಟಿಕೆಗಳನ್ನು ಅವರು ಯಾವುದೇ ಕಷ್ಟ ಇಲ್ಲದೇ ನಿರ್ವಹಿಸಬಹುದಾಗಿದೆ. ಹೆಚ್ಚುವರಿ ಕೃತಕ ಕಾಲು ಜೋಡಣೆಯಿಂದಾಗಿ, ಅಂಗವಿಕಲರಿಗೆ ಸವಾಲು ಎನಿಸಿದ ಅಥವಾ ಕಷ್ಟಕರ ಚಟುವಟಿಕೆಗಳನ್ನು ಕೂಡಾ ಸುಲಭವಾಗಿ ಮಾಡಬಹುದಾಗಿದೆ.

ನಾರಾಯಣ ಸೇವಾ ಸಂಸ್ಥಾನದ ಅಧ್ಯಕ್ಷ ಪ್ರಶಾಂತ್ ಅಗರ್‍ವಾಲ್

ನಾರಾಯಣ ಸೇವಾ ಸಂಸ್ಥಾನದ ಅಧ್ಯಕ್ಷ ಪ್ರಶಾಂತ್ ಅಗರ್‍ವಾಲ್

ಈ ಬಗ್ಗೆ ಮಾಹಿತಿ ಹಂಚಿಕೊಂಡ ನಾರಾಯಣ ಸೇವಾ ಸಂಸ್ಥಾನದ ಅಧ್ಯಕ್ಷ ಪ್ರಶಾಂತ್ ಅಗರ್‍ವಾಲ್ ಅವರು, "ನಾರಾಯಣ ಸೇವಾ ಸಂಸ್ಥಾನದಲ್ಲಿ ನಾವು ವಿಕಲ ಚೇತನರ ಮತ್ತು ಸೌಲಭ್ಯವಂಚಿತರ ಪುನಶ್ಚೇತನದ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಬಹಳಷ್ಟು ಪ್ರಕರಣಗಲಲ್ಲಿ, ಅಂಗವಿಕಲರು ಪರಿಪೂರ್ಣವಾಗಿ ಹೊಂದಾಣಿಕೆಯಾಗುವ ಕೃತಕ ಕಾಲುಗಳನ್ನು ಅಳವಡಿಸಿದಲ್ಲಿ ಸಾಮಾನ್ಯ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ದೈಹಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಭಿನ್ನ ಸಾಮಥ್ರ್ಯದ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದ್ದಾರೆ.

ನಾರಾಯಣ ಸೇವಾ ಸಂಸ್ಥಾನ, ರಾಜಸ್ಥಾನದ ಉದಯಪುರ ಮೂಲದ ಸಂಸ್ಥೆಯಾಗಿದ್ದು, ಇದುವರೆಗೆ 3.5 ಲಕ್ಷಕ್ಕೂ ಹೆಚ್ಚು ಅಂಗವಿಕಲರನ್ನು ಕಳೆದ 30 ವರ್ಷಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡಿದೆ. ಸಂಸ್ಥೆಯು 1100 ಹಾಸಿಗಗಳ ಆಸ್ಪತ್ರೆ ಸೌಲಭ್ಯ ಹೊಂದಿದ್ದು, ಇದು ಕೇವಲ ಅಂಗವಿಕಲರನ್ನು ಗುಣಪಡಿಸುವುದು ಮಾತ್ರವಲ್ಲದೇ, ಅವರಿಗೆ ಸಾಮಾಜಿಕ ಮತ್ತು ಆರ್ಥಿಕ ಪುನರ್ವಸತಿಯನ್ನೂ ಕಲ್ಪಿಸುತ್ತದೆ.

ನಾರಾಯಣ ಸೇವಾ ಸಂಸ್ಥಾನದ ಬಗ್ಗೆ:

ನಾರಾಯಣ ಸೇವಾ ಸಂಸ್ಥಾನದ ಬಗ್ಗೆ:

ನಾರಾಯಣ ಸೇವಾ ಸಂಸ್ಥಾನವು ಪೋಲಿಯೊ, ಸೆಲೆಬ್ರಲ್ ಪಾಲ್ಸಿ, ಲಿಂಪಥೆಟಿಕ್ ಫೈಲಾರಿಯಾಸಿಸ್ ರೋಗಿಗಳಿಗೆ ಆಶಾಕಿರಣವಾಗಿದ್ದು, ಭಾರತ, ಅಪ್ಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಉಕ್ರೇನ್, ಅಮೆರಿಕ ಹಾಗೂ ಇಂಗ್ಲೆಂಡ್‍ಗಳ ರೋಗಿಗಳಿಗೂ ಸೇವೆ ಒದಗಿಸುತ್ತಿದೆ. ರಾಜಸ್ಥಾನದ ಉದಯಪುರದಲ್ಲಿರುವ ಬಾಡಿ ಎಂಬ ಸ್ಮಾರ್ಟ್ ಗ್ರಾಮದಲ್ಲಿ ಪ್ರತಿದಿನ ಸಾವಿರಾರು ರೋಗಿಗಳಿಗೆ ಸೇವೆ ಒದಗಿಸುತ್ತಿದೆ. ಯಾವುದೇ ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಪುನರ್ವಸತಿ ಬಯಸಿ ಬರುವ ರೋಗಿಗಳಿಗೆ ಇಲ್ಲಿ ಯಾವುದೇ ಕ್ಯಾಷ್ ಕೌಂಟರ್ ಅಥವಾ ಪೇಮೆಂಟ್ ಗೇಟ್‍ವೇ ಇಲ್ಲದಿರುವುದು ಇಲ್ಲಿನ ವಿಶೇಷ.

ನಾರಾಯಣ ಸೇವಾ ಸಂಸ್ಥಾನದ ಬಗ್ಗೆ: ನಾರಾಯಣ ಸೇವಾ ಸಂಸ್ಥಾನವು ವಿಶ್ವದ ಅಂಗವಿಕಲ ಮತ್ತು ಸೌಲಭ್ಯ ವಂಚಿತರಿಗೆ ವರದಾನ ಎನಿಸಿದ ಸ್ವರ್ಗವಾಗಿದೆ. 1985ರಲ್ಲಿ ಪದ್ಮಶ್ರೀ ಕೈಲಾಶಸ್ ಮಾನವ ಅಗರ್‍ವಾಲ್ ಅವರಿಂದ ಸಂಸ್ಥಾಪಿಸಲ್ಪಟ್ಟ ನಾರಾಯಣ ಸೇವಾ ಸಂಸ್ಥಾನವು ಒಂದು ದತ್ತಿ ಸಂಸ್ಥೆಯಾಗಿದ್ದು, ಅಂಗವಿಕಲ ಸಮುದಾಯದ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಅವರ ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಸಬಲೀಕರಣದ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸುತ್ತಿದೆ. ರಾಜಸ್ಥಾನದ ಸರೋವರ ನಗರಿ ಉದಯಪುರದಲ್ಲಿರುವ ಬಾಡಿ ಎಂಬ ಸ್ಮಾರ್ಟ್ ಗ್ರಾಮದಲ್ಲಿರುವ ನಾರಾಯಣ ಸೇವಾ ಸಂಸ್ಥಾನ, ಅರವಲಿ ಬೆಟ್ಟಶ್ರೇಣಿಯಿಂದ ಸುತ್ತುವರಿದಿದ್ದು, ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುತ್ತಿದೆ.

ನಾರಾಯಣ ಸೇವಾ ಸಂಸ್ಥಾನ ಅಂಗವಿಕಲರಿಗೆ ಸ್ಮಾರ್ಟ್ ಕ್ಯಾಂಪಸ್

ನಾರಾಯಣ ಸೇವಾ ಸಂಸ್ಥಾನ ಅಂಗವಿಕಲರಿಗೆ ಸ್ಮಾರ್ಟ್ ಕ್ಯಾಂಪಸ್

ನಾರಾಯಣ ಸೇವಾ ಸಂಸ್ಥಾನ ಅಂಗವಿಕಲರಿಗೆ ಸ್ಮಾರ್ಟ್ ಕ್ಯಾಂಪಸ್ ಆಗಿದ್ದು, ಸೌಲಭ್ಯವಂಚಿತರಾಗಿದ್ದೇವೆ ಎನಿಸುವ ದೈಹಿಕವಾಗಿ ನ್ಯೂನತೆ ಇರುವ ಎಲ್ಲ ಬಗೆಯ ವ್ಯಕ್ತಿಗಳಿಗೆ, ಬದುಕಿನ ಯಾವುದೇ ಹಂತದಲ್ಲಿ ಸೇವೆ ಒದಗಿಸಲು ಸಿದ್ಧವಾಗಿದೆ. ಸಂಸ್ಥಾನವು ದೇಶಾದ್ಯಂತ 480 ಶಾಖೆಗಳಲ್ಲಿ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದು, ಅಂಗವೈಕಲ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಿದೇಶಗಳಲ್ಲಿ ಕೂಡಾ 86 ಶಾಖೆಗಳನ್ನು ಹೊಂದಿದೆ. ದೈನಂದಿನ ಕಾರ್ಯಚಟುವಟಿಕೆಯಾಗಿ ಉಚಿತ ವಾಹನವು ರೋಗಿಗಳನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು ಉದಯಪುರ ರೈಲು ನಿಲ್ದಾಣದಿಂದ ಕರೆತಂದು, ಅವರಿಗೆ ಉಚಿತ ವಸತಿ ಮತ್ತು ಆಹಾರ ಸೌಲಭ್ಯವನ್ನು ಅತಿಥಿಗೃಹದಲ್ಲಿ ಒದಗಿಸುತ್ತದೆ.

ನಾರಾಯಣ ಸೇವಾ ಸಂಸ್ಥಾನ ಆಶಾಕಿರಣ

ನಾರಾಯಣ ಸೇವಾ ಸಂಸ್ಥಾನ ಆಶಾಕಿರಣ

ಪೋಲಿಯೊ, ಸೆರೆಬ್ರಲ್ ಪ್ಲಾಸಿ ಮತ್ತು ಇತರ ಜನ್ಮದತ್ತ ಅಂಗವೈಕಲ್ಯದಿಂದ ಬಳಲುವ ದೈಹಿಕ ಅಂಗವಿಕಲರಿಗೆ ನಾರಾಯಣ ಸೇವಾ ಸಂಸ್ಥಾನ ಆಶಾಕಿರಣವಾಗಿದ್ದು, ಭಾರತ, ಅಪ್ಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಉಕ್ರೇನ್, ಅಮೆರಿಕ ಹಾಗೂ ಇಂಗ್ಲೆಂಡ್‍ಗಳ ರೋಗಿಗಳಿಗೂ ಸೇವೆ ಒದಗಿಸುತ್ತಿದೆ. ಕಳೆದ 30 ವರ್ಷಗಳಲ್ಲಿ 3.5 ಲಕ್ಷ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು, ಲಭ್ಯವಿರುವ ಅತ್ಯುತ್ತಮ ವೈದ್ಯಕೀಯ ಸೇವಾಸೌಲಭ್ಯ, ಔಷಧ ಮತ್ತು ತಂತ್ರಜ್ಞಾನದ ನೆರವನ್ನು ಉಚಿತವಾಗಿ ಒದಗಿಸುವ ಮೂಲಕ ಅವರಿಗೆ ಸಾಮಾಜಿಕ- ಆರ್ಥಿಕ ಬೆಂಬಲವನ್ನು ಒದಗಿಸಿದೆ. ಇದು ಯಾವುದೇ ಅಗತ್ಯ ವಸ್ತುಗಳನ್ನು ಪಡೆಯಲು ಕ್ಯಾಶ್‍ಕೌಂಟರ್ ಇಲ್ಲದ ಸ್ಥಳವಾಗಿದೆ. 1100 ಹಾಸಿಗೆಗಳ ಆಸ್ಪತ್ರೆ ಇಲ್ಲಿದ್ದು, 125 ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ಪ್ರತಿದಿನ 95 ರೋಗಿಗಳ ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ಮನುಕುಲದ ಸೇವೆ ಮಾಡುತ್ತಿದೆ.

English summary
Narayan Seva Sansthan - a non- profit organization organized an Artificial Limb Measurement camp for differently-abled individuals at Bangalore. The camp was organized to measure size of the artificial limbs, which will be developed after customization and will be installed on the individual differently-abled beneficiaries. Over 40 differently-abled individuals participants were measured for the artificial limbs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X