ನಂದಿ ಬೆಟ್ಟಕ್ಕೆ ಸಿಗಲಿದೆ ವಿಶೇಷ ಮಾನ್ಯತೆ: ಅಧ್ಯಯನ ಆರಂಭ

Posted By: Nayana
Subscribe to Oneindia Kannada

ಚಿಕ್ಕಬಳ್ಳಾಪುರ, ಏಪ್ರಿಲ್ 17: ಪ್ರಕೃತಿ ಸೊಬಗಿನ ವಿಶ್ವ ಪ್ರಸಿದ್ಧ ನಂದಿಗಿರಿಧಾಮಕ್ಕೆ ವಿಶೇಷ ಮಾನ್ಯತೆ ದೊರೆಯುತ್ತಿದೆ.

ನಂದಿ ಬೆಟ್ಟ: 32 ವರ್ಷಗಳ ನಂತರ ರೋಪ್ ವೇ ಯೋಜನೆಗೆ ಮರುಜೀವ

ತೋಟಗಾರಿಕೆ ಇಲಾಖೆಯ ಅಧೀನದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮಕ್ಕೆ ವಿಶೇಷ ಮಾನ್ಯತೆ ಕಲ್ಪಿಸಲು ಮುಂದಾಗಿರುವ ಬೆಂಗಳೂರು ಎನ್ವಿರಾನ್ ಮೆಂಟ್ ಟ್ರಸ್ಟ್, ರಾಷ್ಟ್ರೀಯ ಕಾನೂನು ಶಾಲೆ ನೇತೃತ್ವದಲ್ಲಿ ನಂದಿಬೆಟ್ಟದ ಅಧ್ಯಯನ ಆರಂಭಿಸಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ನಂದಿ ಗಿರಿಧಾಮವು ಊಟಿಯಂತೆ ಅತಿ ಮಹತ್ವದ, ಆಕರ್ಷಕ ತಾಣ, ಶುದ್ಧ ಆಮ್ಲಜನಕ ಹಾಗೂ ನಾನಾ ನದಿಗಳ ಉಗಮ ಸ್ಥಳವಿದು. ಆದರೆ ಇಲ್ಲಿ ಒಂದು ದಶಕದಿಂದೀಚೆಗೆ ಪ್ರವಾಸೋದ್ಯಮ, ಗಣಿ ಮತ್ತು ಅರಣ್ಯ ಸೇರಿ ನಾನಾ ಇಲಾಖೆಗಳಿಂದ ಗೊತ್ತುಗುರಿಯಿಲ್ಲದಂತೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.

Nandi hills will get special status soon!

ಸುಂದರವಾದ ಕಲಾಕೃತಿಗಳನ್ನು ಚೋಳರು, ಕಂಬಗಳ ಮೇಲೆ ಕೆತ್ತನೆ ಮಾಡಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಇದರೊಂದಿಗೆ ವಿಜಯನಗರ ರಾಜರುಗಳು ನಿರ್ಮಿಸಿರುವ ಕಲ್ಯಾಣ ಮಂಟಪ ಮತ್ತು ತುಲಾಭಾರ ಮಂಟಪಗಳಿವೆ.

ಭೋಗ ನಂದೀಶ್ವರ ದೇವಾಲಯಕ್ಕೆ ಹೋಗುವುದು ಹೇಗೆ? ಇದು ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ,ಹೋಟೆಲ್, ರೆಸಾರ್ಟ್ ಹೆಚ್ಚಾಗಿವೆ. ಡ್ರಿಂಕ್ಸ್-ಡ್ರಗ್ಸ್ ನೊಂದಿಗೆ ಮೋಜು-ಮಸ್ತಿ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರವಾಸಿಗರು ಹಾಗೂ ಟ್ರಕ್ಕಿಂಗ್ ಹೋಗುವವರಿಂದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಹೆಚ್ಚಾಗುತ್ತಿದೆ. ಇವೆಲ್ಲದರ ಪರಿಣಾಮ ಈ ಹಿಂದೆ 3 ಬಾರಿ ಬೆಂಕಿಯೂ ಕಾಣಿಸಿಕೊಂಡಿತ್ತು.

ನಂದಿಗಿರಿಧಾಮದ ಕೆಲವೇ ಕಿ.ಮೀ ದೂರದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಸುಮಾರು 450-500 ವಿಮಾನಗಳು ಇಲ್ಲಿಂದ ಹಾರುತ್ತದೆ. ನಿತ್ಯ ವಿಮಾನಗಳು ಉಗುಳುವ ಹೊಗೆಯಿಂದ ಸುತ್ತಮುತ್ತಲ ಪರಿಸರ ಮಲಿನಗೊಂಡಿದೆ. ಹೀಗಾಗಿ ನಂದಿಬೆಟ್ಟಕ್ಕೆ ವಿಶೇಷ ಮಾನ್ಯತೆ ದೊರಕಿಸಿಕೊಟ್ಟು ಅದನ್ನು ಕಾಪಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಹಲವು ಯೋಜನೆಗಳು: ನಂದಿಬೆಟ್ಟದಲ್ಲಿ ಹಸಿರು ಪಟ್ಟಿ ತಯಾರಿಸುವುದು, ನದಿಗಳನ್ನು ಪುನರುಜ್ಜೀವನಗೊಳಿಸಿ ಪ್ರಾಣವಾಯುವನ್ನು ಸಂರಕ್ಷಿಸಲು ಯೋಜನೆಗಳನ್ನು ರೂಪಿಸಲಾಗಿದೆ. ಈ ಸಂಬಂಧ ಕಳೆದ ಮೂರು ವರ್ಷಗಳಿಂದ ಕೆಲಸಗಳೂ ನಡೆಯುತ್ತಿದೆ. ಗಿರಿಧಾಮದಲ್ಲಿ ಒಂದು ಲಕ್ಷ ಸ್ಥಳೀಯ ಸಸ್ಯಗಳನ್ನು ನಡೆವುದು, 14 ಕಲ್ಯಾಣಿಗಳ ಪುನರುಜ್ಜೀವನ ಕಾರ್ಯ ನಡೆಯುತ್ತಿದೆ. ನಂದಿಬೆಟ್ಟವು ಚಿಕ್ಕಬಳ್ಳಾಪುರದಿಂದ 10 ಕಿ.ಮೀ ಹಾಗೂ ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bangalore Environmental Trust is conducting a study in association with National School of Law about historical and botanical importance of Nandi hills in Chikkaballapur to give special status in environmental map of the country.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ