ನಂದಿ ಬೆಟ್ಟದಡಿ 6 ಕಿಮೀ ಓಡಿ, ತಾಣ ಉಳಿವಿಗೆ ನೆರವು ನೀಡಿ

Written By:
Subscribe to Oneindia Kannada

ಬೆಂಗಳೂರು, ಮೇ 31: "ನಂದಿ ಹಿಲ್ಲಥಾನ್" ಆಯೋಜಿಸಿರುವ ಯುನೈಡೆಡ್ ವೇ ಬೆಂಗಳೂರು ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ ನಾಗರಿಕರಿಗೆ ಭಾಗವಹಿಸಲು ಮುಕ್ತ ಅವಕಾಶ ತೆರೆದಿಟ್ಟಿದ್ದು 'ನಂದಿ ಓಟ' ಆಯೋಜಿಸಿದೆ.

ನಂದಿ ಹಿಲ್ಲಥಾನ್ 21 ಕಿಮೀಯದ್ದಾಗಿದ್ದರೆ ನಂದಿ ಓಟ 6 ಕಿಲೋ ಮೀಟರ್ ನದ್ದು. ಇದಕ್ಕೆ ಕೇವಲ 100 ರು. ಶುಲ್ಕ ಇರಲಿದೆ. ನಂದಿ ಹಿಲ್ಲಥಾನ್ ಗೆ 500 ರು. ಶುಲ್ಕ ಇದೆ. ನಂದಿ ಬೆಟ್ಟದ ಸಹಜ ಸೌಂದರ್ಯ ಕಾಪಾಡುವುದಕ್ಕೂ ನೀವು ನೆರವು ನೀಡಬಹುದು. [ನಂದಿ ಹಿಲ್ಲಥಾನ್ : ಯಾಕಾಗಿ? ಏನಿದರ ಮಹತ್ವ?]

nandi

ಸುತ್ತಮುತ್ತಲ 14 ಹಳ್ಳಿಯ 200 ಯುವಕರು ಭಾಗವಹಿಸಲಿದ್ದಾರೆ. ಯುವತಿಯರಿಗೆ ನೋಂದಣಿ ಶುಲ್ಕ ಸಹ ಇಲ್ಲ. ನಂದಿ ಓಟ ಕಣಿವೆ ಬಸವೇಶ್ವರ ದೇವಾಲಯದಿಂದ ಆರಂಭವಾಗಲಿದ್ದು ಭೋಗನಂದೀಶ್ವರ ದೇವಾಲಯದವರೆಗೆ ಸಾಗಿ ಕೊನೆಯಾಗಲಿದೆ. ಒಟ್ಟು ಆರು ಕಿಮೀ ದೂರದ ಓಟ ನಡೆಯಲಿದೆ.[ಬುಗುರಿ, ಗೋಲಿ, ಗಿಲ್ಲಿದಾಂಡು ಆಡುತ್ತ ಮ್ಯಾರಥಾನ್ ಓಡಿ]

ಕರೇಹಳ್ಳಿ, ಕರೇಹಳ್ಳಿ ಕ್ರಾಸ್, ಹೆಗ್ಗಡೆಹಳ್ಳಿ, ಸರಹಳ್ಳಿ, ಕುಡುವತ್ತಿ, ಯಲ್ಲೇಹಳ್ಳಿ, ನಂದಿ, ಸುಲ್ತಾನ್ ಪೇಟ್, ಮಡಗೇನಹಳ್ಳಿ, ಸಿಂಗವಾರಾ, ಹೀರೇನಹಳ್ಳಿ ಮತ್ತು ಚಿಕ್ಕಬಳ್ಳಾಪುರ ನಗರದ ನಾಗರಿಕರು ನೋಂದಣಿ ಮಾಡಿಕೊಳ್ಳಲು ಸಾಧ್ಯವಿದೆ. ಹೆಚ್ಚಿನ ಮಾಹಿತಿಗೆ
www.nandihillathon.in ತಾಣಕ್ಕೆ ಭೇಟಿ ನೀಡಬಹುದು. ಸಂಪರ್ಕ: David Kumar-9449787912.

ಯಾವಾಗ ಮ್ಯಾರಥಾನ್:
"ನಂದಿ ಹಿಲ್ಲಥಾನ್ " ಜೂನ್ 12 ಭಾನುವಾರ ನಡೆಯಲಿದೆ. ಪರಿಸರ ಸಮತೋಲನ, ಜಾಗೃತಿ, ಕಸ ವಿಲೇವಾರಿ, ಸುಂದರ ರಸ್ತೆಗಳು ಎಂಬ ಪರಿಕಲ್ಪನೆ ಆಧಾರದಲ್ಲಿ ಮ್ಯಾರಥಾನ್ ನಡೆಯಲಿದೆ. [ನಂದಿ ಬೆಟ್ಟ ಉಳಿಸಲು ಮ್ಯಾರಥಾನ್ ನಲ್ಲಿ ಭಾಗವಹಿಸಿ]

ಜೂನ್ 12 ರಂದು 7 ಗಂಟೆಗೆ ಮ್ಯಾರಥಾನ್, 8 ಗಂಟೆಗೆ ವಾಕಥಾನ್ ಮತ್ತು 8 ರಿಂದ 11 ಗಂಟೆ ನಡುವೆ ಫ್ಯಾಮಿಲಿ ಫನ್ ಝೋನ್ ಕಾರ್ಯಕ್ರಮ ನಡೆಯಲಿದೆ. ಎರಡು ಓಟದ ಸ್ಪರ್ಧೆ ಮತ್ತು ಒಂದು ಫನ್ ರೇಸ್ ಮ್ಯಾರಥಾನ್ ನ ವಿಶೇಷ. ಸುಲ್ತಾನ ಪೇಟ್ ಸಮೀಪದ ಕಣಿವೆ ನಂದೀಶ್ವರ ದೇವಾಲಯದ ಸಮೀಪದ ಡಿಸ್ಕವರಿ ವಿಲೇಜ್ ಬಳಿಯಿಂದ ಮ್ಯಾರಥಾನ್ ಆರಂಭವಾಗಲಿದೆ. 21 ಕಿಮೀ ವ್ಯಾಪ್ತಿಯಲ್ಲಿ ಮ್ಯಾರಥಾನ್ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
More than 200 youth residing in 14 villages near Nandi Hills will be participating in Nandi Hillathon, a unique event organised by United Way Bengaluru to save Bengaluru's treasures. Unlike other Marathons, United Way Bengaluru has opened a new category called "Nandi Oata" for an inclusive participation of the local youth.
Please Wait while comments are loading...