ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿ ಬೆಟ್ಟದಲ್ಲಿ 25 ಸಾವಿರ ಸಸಿ ನೆಡುವ ಅಭಿಯಾನ

By Prasad
|
Google Oneindia Kannada News

ಬೆಂಗಳೂರು, ಜೂನ್ 19 : ಜೂನ್ 12ರಂದು ನಂದಿ ಬೆಟ್ಟದಲ್ಲಿ ಪರಿಸರ ಜಾಗೃತಿಗೆ ನಾಂದಿ ಹಾಡಿದ 'ನಂದಿ ಹಿಲ್ಲಥಾನ್'ನ ಮುಂದುವರಿದ ಭಾಗವಾಗಿ ನಂದಿ ಬೆಟ್ಟದ ಪ್ರದೇಶದಲ್ಲಿ 25 ಸಾವಿರ ಸಸಿಗಳನ್ನು ನೆಡುವ ಅಭಿಯಾನವನ್ನು ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ಜೂನ್ 25ರಂದು ಆಯೋಜಿಸಿದೆ.

ಕರ್ನಾಟಕ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಜೂನ್ 25ರ ಶನಿವಾರ 'ನಂದಿ ಅಭಿಯಾನ'ಕ್ಕೆ ಚಾಲನೆ ನೀಡಲಾಗುತ್ತಿದೆ. ಅಂದು ಮಧ್ಯಾಹ್ನ 2ರಿಂದ 5 ಗಂಟೆಯ ಸಮಯದಲ್ಲಿ 25 ಸಾವಿರ ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಂದಿ ಬೆಟ್ಟದ ಹಸಿರು ಪರಿಸರವನ್ನು ಉಳಿಸಬೇಕು ಮತ್ತು ಗತಕಾಲದ ವೈಭವ ಮರುಕಳಿಸಬೇಕು ಎಂಬ ಉದ್ದೇಶದಿಂದ ನಂದಿ ಹಿಲ್ಲಥಾನ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಎಲ್ಲ ವರ್ಗದವರಿಂದ ಭರ್ಜರಿ ಪ್ರತಿಸ್ಪಂದನೆ ದೊರಕಿತ್ತು. ಕಾಲಾಂತರದಲ್ಲಿ ನಶಿಸಿಹೋಗಿರುವ ಹಸಿರು ಹೊದಿಕೆ ಮರಳಿ ಬರಬೇಕಾಗಿದೆ. [ಪರಿಸರ ಜಾಗೃತಿ ಸಾರಿದ ನಂದಿ ಹಿಲ್ಲಥಾನ್]

Nandi campaign to plant 25000 saplings at Nandi Hills

ನಂದಿ ಬೆಟ್ಟ ಮತ್ತು ಪರಿಸರದ ಬಗ್ಗೆ ಕಾಳಜಿ ಇರುವವರು ವೈಯಕ್ತಿಕವಾಗಿ ಅಥವಾ ಸಂಸ್ಥೆಗಳ ಮುಖಾಂತರ ಈ ಸಸಿ ನೆಡುವ ಅಭಿಯಾನದಲ್ಲಿ ಭಾಗಿಯಾಗಬಹುದು. ಇದಕ್ಕಾಗಿ ಮುಂಚಿತವಾಗಿ ನೋಂದಾಯಿಸಿಕೊಳ್ಳಬಹುದು. ಸಸಿ ನೆಡುವ ಕಾರ್ಯಕ್ರಮಕ್ಕೆ ಇಲ್ಲಿ ನೋಂದಾಯಿಸಿ.

ಇನ್ನು ಕಾರ್ಪೊರೇಟ್ ಸಂಸ್ಥೆಗಳು ಪರಿಸರ ಉಳಿಸುವ ಅಭಿಯಾನದಲ್ಲಿ ಭಾಗವಹಿಸಬೇಕೆಂದಿದ್ದರೆ ಕಾರ್ತಿಕಾ ಪ್ರಕಾಶ್ ಅವರನ್ನು ಸಂಪರ್ಕಿಸಿ : [email protected]

ಹೆಚ್ಚಿನ ಮಾಹಿತಿಗಾಗಿ : [email protected]ಗೆ ಈಮೇಲ್ ಕಳಿಸಿ ಅಥವಾ 91- 080 - 4090 6345 / 2525 8363 ಸಂಖ್ಯೆಗೆ ಕರೆ ಮಾಡಿ. [ಪರಿಸರ ಜಾಗೃತಿ ಬಗ್ಗೆ ಜಾವಗಲ್ ಶ್ರೀನಾಥ್ ಏನಂತಾರೆ?]

English summary
United Way Bengaluru is initiating 'Nandi Campaign' with planting 25,000 saplings in the Nandi Hill Ranges in partnership with Horticulture Department, Govt. of Karnataka. The first phase of planting is scheduled for Saturday, 25th June, 2016, between 02.00 pm – 05.00 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X