ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಫೋಸಿಸ್ ಗೆ ಮರಳುವ ಪ್ರಶ್ನೆಯೇ ಇಲ್ಲ: ನಂದನ್

By Mahesh
|
Google Oneindia Kannada News

ಬೆಂಗಳೂರು, ಸೆ. 16: ದೇಶದ ಪ್ರಮುಖ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಹ ಸ್ಥಾಪಕ ನಂದನ್ ನಿಲೇಕಣಿ ಅವರು ಮತ್ತೊಮ್ಮೆ ಇನ್ಫೋಸಿಸ್ ಗೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದಿ ಹಿಂದೂ ಬಿಸಿನೆಸ್ ಲೈನ್ ಜೊತೆ ಮಾತನಾಡಿದ ನಂದನ್ ನಿಲೇಕಣಿ ಅವರು ಮತ್ತೊಮ್ಮೆ ಇನ್ಫೋಸಿಸ್ ಸೇರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಯೋಜನೆ ಸಾಕಾರಗೊಳಿಸಲಿಕ್ಕೆ ನಾನು ಸಾಫ್ಟ್ ವೇರ್ ಸಂಸ್ಥೆ ಉದ್ಯೋಗ ತೊರೆದಿದ್ದು ನಿಜ. ಇದು ವಿಶ್ವದ ಅತಿದೊಡ್ಡ ಡಾಟಾಬೇಸ್ ಆಗಿದೆ. ಭಾರತೀಯರಿಗೆ ಈ ರೀತಿಯ ಒಂದು ವಿಶಿಷ್ಟ ಗುರುತಿನ ಚೀಟಿ ನೀಡಿದ ಹೆಮ್ಮೆಯಿದೆ ಎಂದರು.

ಇನ್ಫೋಸಿಸ್ ನಲ್ಲಿದ್ದ ನಂದನ್ ನಿಲೇಕಣಿ ಅವರನ್ನು ಅಂದಿನ ಯುಪಿಎ ಸರ್ಕಾರ ದೆಹಲಿಗೆ ಕರೆಸಿಕೊಂಡು ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿತ್ತು. ನಂತರ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿತ್ತು. [ನಿಲೇಕಣಿಗೆ ಪ್ರತಿಷ್ಠಿತ ವಿ ಕೃಷ್ಣಮೂರ್ತಿ ಎಕ್ಸೆಲೆನ್ಸ್ ಪ್ರಶಸ್ತಿ]

ಈ ಸಂದರ್ಭದಲ್ಲಿ ಜನಸಾಮಾನ್ಯರೊಂದಿಗೆ ಕಲೆತು ಬೆರೆತ ನಂದನ್ ನಿಲೇಕಣಿ ಅವರು ಚುನಾವಣೆ ಗೆಲ್ಲಲಾಗಲಿಲ್ಲ. ಎಚ್ .ಎನ್ ಅನಂತ್ ಕುಮಾರ್ ಅವರು ಡಬ್ಬಲ್ ಹ್ಯಾಟ್ರಿಕ್ ಬಾರಿಸಿ ಜಯ ಗಳಿಸಿದ್ದು ಈಗ ಇತಿಹಾಸ.

Nilekani: No question of returning to Infosys

ಇನ್ಫೋಸಿಸ್ ಯಾಕೆ ಸೇರುತ್ತಿಲ್ಲ?: ಸಂಕಷ್ಟದಲ್ಲಿದ್ದ ಇನ್ಫೋಸಿಸ್ ಸಂಸ್ಥೆ ಮೇಲಕ್ಕೆತ್ತಲು ಸಹ ಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಅವರು ಇನ್ಫೋಸಿಸ್ ಗೆ ಮರಳಿದ್ದಲ್ಲದೆ ಸಾಕಷ್ಟು ಬದಲಾವಣೆ ತಂದಿದ್ದರು. ಇದೇ ರೀತಿ ನಿಲೇಕಣಿ ಅವರು ಇನ್ಫೋಸಿಸ್ ಗೆ ಮರಳುತ್ತಾರೆ ಎಂಬ ಸುದ್ದಿ ಹಬ್ಬಿತ್ತು.

ಇನ್ಫೋಸಿಸ್ ಹೊಸ ಸಿಇಒ ಹುಡುಕಾಟದಲ್ಲಿದ್ದಾಗ ಈ ಸುದ್ದಿ ಇನ್ನಷ್ಟು ಬಲವಾಗಿತ್ತು. ಮಾಜಿ ಸಿಎಫ್ ಒ ಬಿಪ್ಯಾಕ್ ನ ಮೋಹನ್ ದಾಸ್ ಪೈ ಅವರು ಕೂಡಾ ನಂದನ್ ಮತ್ತೊಮ್ಮೆ ಸಿಇಒ ಆಗಲಿ ಎಂದು ಬೆಂಬಲ ವ್ಯಕ್ತಪಡಿಸಿದ್ದರು ಅದರೆ, ನಂದನ್ ಅವರು ಇನ್ಫೋಸಿಸ್ ಗೆ ವಾಪಸ್ ತೆರಳದಿರಲು ನಿರ್ಧರಿಸಿದ್ದರು.

ಇನ್ಫೋಸಿಸ್ ನಲ್ಲಿ ಈಗ ಯುವಕರ ತಂಡ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ನಾನು ಈಗ ಕಂಪನಿ ಸೇರಿ ಮಾಡುವಂಥದ್ದೇನಿಲ್ಲ ಎಂದಿದ್ದಾರೆ.[ನಂದನ್ ನಿಲೇಕಣಿ ವ್ಯಕ್ತಿಚಿತ್ರ]

ಈಗೇನು ಮಾಡುತ್ತಿದ್ದಾರೆ?: 2010ರಲ್ಲಿ Imagining India: The Idea of a Renewed Nation ಎಂಬ ಕೃತಿ ರಚಿಸಿ ಭರ್ಜರಿ ಯಶಸ್ಸು ಗಳಿಸಿದ ನಂದನ್ ನಿಲೇಕಣಿ ಅವರು ಮತ್ತೊಮ್ಮೆ ಬರವಣಿಗೆಯತ್ತ ಹೊರಳಿದ್ದಾರೆ.

ಆಡಳಿತದಲ್ಲಿ ತಂತ್ರಜ್ಞಾನದ ಮಹತ್ವವನ್ನು ಕುರಿತು ಪುಸ್ತಕ ರಚಿಸುತ್ತಿದ್ದೇನೆ. ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದಿದ್ದಾರೆ. ವಿಶ್ವದ ಟಾಪ್ ತಂತ್ರಜ್ಞರ ಪೈಕಿ ಒಬ್ಬರಾದ ಕರ್ನಾಟಕದ ನಂದನ್ ನಿಲೇಕಣಿ ಅವರ ಬೌದ್ಧಿಕ ಜ್ಞಾನದ ಬಳಕೆ ಮಾಡಿಕೊಂಡರೆ ಕರ್ನಾಟಕಕ್ಕೆ ಲಾಭ. ಏನಂತೀರಿ @srpatilbagalkot.

English summary
Infosys co-founder and former Chief Executive Officer Nandan Nilekani has categorically stated that there is no question of him going back to the IT major.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X