ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಅಮೆರಿಕ-ಭಾರತ ವಹಿವಾಟು ಬಲವರ್ಧನೆಗೆ ಉದ್ಯಮಿಗಳ ಆಸಕ್ತಿ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ನವೆಂಬರ್‌ 8 : ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥ (ನಾನ್ ಎಕ್ಸಿಕ್ಯೂಟಿವ್) ನಂದನ್ ನಿಲೇಕಣಿ ಅವರು ಬೆಂಗಳೂರಿನಲ್ಲಿ 'ಯುಎಸ್-ಇಂಡಿಯಾ ಟ್ರೇಡ್‌ ಕಾಂಗ್ರೆಸ್‌ 2017' ಕ್ಕೆ ಚಾಲನೆ ನೀಡಿದ್ದಾರೆ. ಎರಡೂ ದೇಶಗಳ ನಡುವಿನ ವ್ಯಾಪಾರ ವಹಿವಾಟು ವೃದ್ಧಿಗೆ ಇದು ವೇದಿಕೆಯಾಗಿದೆ.

  ಮಂಗಳವಾರ ಬೆಂಗಳೂರಿನಲ್ಲಿ ನಂದನ್ ನಿಲೇಕಣಿ ಅವರು ಯುಎಸ್-ಇಂಡಿಯಾ ಟ್ರೇಡ್ ಕಾಂಗ್ರೆಸ್ ಉದ್ಘಾಟಿಸಿದರು. ಭಾರತ ಮತ್ತು ಅಮೆರಿಕ ರಾಷ್ಟ್ರಗಳು ಪರಸ್ಪರ ವಹಿವಾಟಿನಲ್ಲಿ ತೊಡಗಿಸಿಕೊಳ್ಳಲು ವಿಫುಲ ಅವಕಾಶಗಳಿವೆ ಎಂದರು.

  Nandan Nilekani inaugurates India-US Trade congress 2017

  'ಇಂಡೋ ಸ್ಪೆಸಿಫಿಕ್ ವಲಯದಲ್ಲಿ ವಲಯವಾರು ವಹಿವಾಟುಗಳ ಬಲವರ್ಧನೆ ಹಾಗೂ ಕ್ಷಿಪ್ರಗತಿ ಬೆಳವಣಿಗೆಗೆ ಭಾರತ ಮುಂದಾಳತ್ವ ವಹಿಸಬೇಕು. ಇದರಿಂದ ಭಾರತದ ಆರ್ಥಿಕ ಬೆಳವಣಿಗೆಯ ಕಾರ್ಯತಂತ್ರ ಪರಿಣಾಮಕಾರಿಯಾಗಿದೆ ಎಂಬುದು ಸಾಬೀತಾಗುತ್ತದೆ' ಎಂದು ಅಮೆರಿಕದ ಸ್ಟೆನ್ ಗ್ರೂಪ್‌ ಅಧ್ಯಕ್ಷೆ ಪೌಲಾ ಸ್ಟೆರ್ನ್ ಹೇಳಿದರು.

  'ಜಾಗತಿಕ, ಆರ್ಥಿಕತೆಯ ನೇತಾರನಾಗಿರುವ ಅಮೆರಿಕದ ಜತೆ ಬಾಂಧವ್ಯ ಬಲವರ್ದನೆಗೊಳ್ಳುತ್ತದೆ. ಈ ದಿಸೆಯಲ್ಲಿ ಭಾರತ ತಂತ್ರಜ್ಞಾನ, ಇ ಕಾಮರ್ಸ್, ಸೈಬರ್ ನಂತಹ ವಲಯಗಳಲ್ಲಿ ಹೆಚ್ಚು ಏಕಾಗ್ರತೆ ಸಾಧಿಸಿದಲ್ಲಿ ಉಭಯ ರಾಷ್ಟ್ರಗಳ ನಡುವೆ ಬಾಂಧವ್ಯ ಇನ್ನಷ್ಟು ಹತ್ತಿರವಾಗಲಿದೆ' ಎಂದು ಹೇಳಿದರು.

  'ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ಒಪ್ಪಂದಗಳು ಐಟಿ, ರಕ್ಷಣಾ ಕ್ಷೇತ್ರಕ್ಕೆ ಪೂರಕವಾಗಿದೆ. ಆರ್ಥಿಕ, ಬ್ಯಾಂಕಿಂಗ್, ವೈಮಾನಿಕ, ಬಾಹ್ಯಾಕಾಶ, ಮೂಲ ಸೌಕರ್ಯ ಸೇರಿದಂತೆ ಮತ್ತಿತರೆ ಕ್ಷೇತ್ರಗಳಲ್ಲಿ ಪ್ರಗತಿಗೆ ಪೂರಕವಾಗಲಿದೆ' ಎಂದು ತಿಳಿಸಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Infosys Non-executive Chairman Nandan Nilekani inaugurated the India-US Trade Congress 2017 at Bengaluru on November 7, 2017. The Event focus on strengthening business partnership between two countries.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more