ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದ್ಯದಲ್ಲೇ ಬೆಂಗಳೂರಿನ ರಸ್ತೆಗಿಳಿಯಲಿದೆ 'ನಮ್ಮ ಟೈಗರ್' ಕ್ಯಾಬ್ಸ್

By Sachhidananda Acharya
|
Google Oneindia Kannada News

ಬೆಂಗಳೂರು, ನವೆಂಬರ್ 13: 'ನಮ್ಮ ಟೈಗರ್‌' ಕ್ಯಾಬ್‌ ಗಳು ಶೀಘ್ರವೇ ರಸ್ತೆಗಿಳಿಯಲಿವೆ. ಓಲಾ, ಉಬರ್‌ ಕಂಪೆನಿಗಳಿಗೆ ಪರ್ಯಾಯವಾಗಿ ಚಾಲಕರು ಹಾಗೂ ಮಾಲೀಕರು ಹುಟ್ಟುಹಾಕಿರುವ 'ಹುಲಿ ಟೆಕ್ನಾಲಜೀಸ್‌' ಕಂಪನಿ ಕಡೆಯಿಂದ ಈ ಕ್ಯಾಬ್ ಗಳು ಕಾರ್ಯಾಚರಣೆ ಆರಂಭಿಸಲಿವೆ.

ಕುಮಾರಸ್ವಾಮಿಯಿಂದ ನವರಾತ್ರಿ ಗಿಫ್ಟ್, 'ನಮ್ಮ ಟೈಗರ್‌' ಆ್ಯಪ್‌ ಬಿಡುಗಡೆಕುಮಾರಸ್ವಾಮಿಯಿಂದ ನವರಾತ್ರಿ ಗಿಫ್ಟ್, 'ನಮ್ಮ ಟೈಗರ್‌' ಆ್ಯಪ್‌ ಬಿಡುಗಡೆ

ಚಾಲಕರ ನೋಂದಣಿಗಾಗಿ ಸೆಪ್ಟೆಂಬರ್ 21ರಂದು ಆ್ಯಪ್ ಬಿಡುಗಡೆ ಮಾಡಲಾಗಿತ್ತು. ಈ ಆ್ಯಪ್ ಮೂಲಕ ಈಗಾಗಲೇ 4,500 ಕ್ಯಾಬ್‌ ಚಾಲಕರು ಕಂಪನಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ತಾಂತ್ರಿಕ ಕೆಲಸಗಳಷ್ಟೇ ಬಾಕಿ ಉಳಿದಿದ್ದು ಶೀಘ್ರವೇ ಕ್ಯಾಬ್ ಗಳು ಸಾರ್ವಜನಿಕರ ಪ್ರಯಾಣಕ್ಕೆ ಲಭ್ಯವಾಗಲಿದೆ.

"Namma Tiger” cabs will soon be on Bengaluru roads

ಇನ್ನು ಹುಲಿ ಟೆಕ್ನಾಲಜೀಸ್ ಕಡೆಯಿಂದ ಸದ್ಯದಲ್ಲೇ ಪ್ರಯಾಣಿಕರಿಗಾಗಿ ಪ್ರತ್ಯೇಕ ಆ್ಯಪ್ ಬಿಡುಗಡೆಯಾಗಲಿದೆ. ಇದನ್ನು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಲಿದ್ದಾರೆ.

"Namma Tiger” cabs will soon be on Bengaluru roads

ಇನ್ನು ಶೇಕಡಾ 12ರಷ್ಟು ಕಮಿಷನ್‌ ಪಡೆಯಲು 'ನಮ್ಮ ಟೈಗರ್‌' ಆಡಳಿತ ಮಂಡಳಿ ತೀರ್ಮಾನಿಸಿದ್ದು, ಉಳಿದ ಕ್ಯಾಬ್ ಗಳ ದರಗಳಿಗೆ ಹೋಲಿಸಿದರೆ ಇದು ಕಡಿಮೆ ದರವಾಗಿದೆ.

English summary
Namma Tiger Cabs are on the road soon. These cabs will start operations on the part of the 'Tiger Technologies' company, driven by drivers and owners alternating to Ola and Uber companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X