ವೈರಲ್ ಆಯ್ತು ಮುಂಗಾರು ಮಳೆಯೇ ಧಾಟಿಯ ನಮ್ಮ ಮೆಟ್ರೋ ಹಾಡು

Posted By:
Subscribe to Oneindia Kannada

ಬೆಂಗಳೂರು, ಜೂನ್ 19: ನಮ್ಮ ಮೆಟ್ರೋ ರೈಲೆ... ಏನು ನಿನ್ನ ಹಳಿಗಳ ಲೀಲೆ...ಜನರ ಒಲುಮೆ ಮಾಲೆ...
ಹರೆಯ ಸಿರಿಯ ಪ್ರೇಮದ ಲೀಲೆ... ಹರಿವ ಗೆಲುಮೆ ಪ್ರೀತಿ ಮೋಡಿಗೆ
ಜೀವ ಮಿಡಿದಿದೆ...

ಮುಂಗಾರುಮಳೆ ಚಿತ್ರದ, ಯೋಗರಾಜ್ ಭಟ್ ಬರೆದ ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ... ಧಾಟಿಯ ಈ ಹಾಡು ಸದ್ಯಕ್ಕೆ ಎಲ್ಲೆಡೆ ವೈರಲ್ ಆಗಿದೆ.

ಬೆಂಗಳೂರಿಗರ ಅಚ್ಚು ಮೆಚ್ಚಿನ ಮೆಟ್ರೋದ ಹಿಮೆಯನ್ನು ಜನಪ್ರಿಯ ಹಾಡಿನ ಧಾಟಿಯಲ್ಲಿ ಸಂಯೋಜಿಸಿ ಅದರ ಹಿರಿಮೆ-ಗರಿಮೆಯನ್ನು ಮನತಟ್ಟುವಂತೆ ತೋರಿಸಿದ ಈ ವಿಡಿಯೋ ಸೃಷ್ಟಿಕರ್ತರಿಗೆ ಸಲಾಂ.

ನಮ್ಮ ಮೆಟ್ರೋ ಹಸಿರು ಲೈನ್ ರಾಷ್ಟ್ರಪತಿಯಿಂದ ಲೋಕಾರ್ಪಣೆ

ಬೆಂಗಳೂರಿನ ನಮ್ಮ ಮೆಟ್ರೋ ಉದ್ಘಾಟನೆಗೊಳ್ಳುತ್ತಿದ್ದಂತೆಯೇ ಅದರ ಅನುಕೂಲತೆ, ಕಾರ್ಯದಕ್ಷತೆ, ವೇಗ ಎಲ್ಲವುಗಳ ಬಗ್ಗೆ ಮೆಚ್ಚುಗೆ ಸೂಚಿಸುವ ಉದ್ದೇಶದಿಂದ ಕೊಪ್ಪಳ ವಾರ್ತೆ ಫೇಸ್ ಬುಕ್ ಪುಟದಲ್ಲಿ ಕಾಣಿಸಿಕೊಂಡ ಈ ವಿಡಿಯೋವನ್ನು 150 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ನೀವೂ ವಿಡಿಯೋ ನೋಡಬೇಕಂದ್ರೆ, ಇಲ್ಲಿದೆ ವಿಡಿಯೋ.

ಹೀಗೇ ಸಾಗುತ್ತದೆ ಹಾಡು. ಉದ್ಯಾನ ನಗರಿ ಬೆಂಗಳೂರಿನ ಪಾಲಿಗೆ ಜೂನ್ 17, ಒಂದು ಐತಿಹಾಸಿಕ ಕ್ಷಣ. ಬೆಂಗಳೂರಿನ ಲಕ್ಷಾಂತರ ಜನರಿಗೆ ಅನುಕೂಲವಾಗುವಂಥ ನಮ್ಮ ಮೆಟ್ರೋ ಉದ್ಘಾಟನೆಗೊಂಡು, ಇದೀಗ ಸಾರ್ವಜನಿಕರ ಉಪಯೋಗಕ್ಕೆ ದಕ್ಕುತ್ತಿದೆ. ಈ ಹಿನ್ನೆಲೆಯಲ್ಲಿ ಸೃಷ್ಟಿಸಿದ ಈ ವಿಡಿಯೋ ಸದ್ಯಕ್ಕೆ ವೈರಲ್ ಆಗಿದೆ.

ಮೆಟ್ರೋ ಗರಿಮೆಯನ್ನು ಮುಂಗಾರು ಮಳೆ... ಸೂಪರ್ ಹಿಟ್ ಹಾಡಿನೊಂದಿಗೆ ಜೋಡಿಸಿ ಸುಂದರ ವಿಡಿಯೋ ತಯಾರಿಸಿದ ಕರ್ನಾಟಕ ವಾರ್ತೆಗೆ ನಮ್ಮ ಮೆಚ್ಚುಗೆ ಇರಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The vedio which praises work style of Namma metro has uploaded in facebook became viral now. Koppal varthe has posted the vedio. The vedio is uploaded after President of India Pranab Mukerjee inaugurated Namma metro green line.
Please Wait while comments are loading...