ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾನುವಾರ 1 ಗಂಟೆ ಮುಂಚಿತವಾಗಿ ಮೆಟ್ರೋ ರೈಲು ಸಂಚಾರ ಆರಂಭ

|
Google Oneindia Kannada News

Recommended Video

Namma Metro : ನಮ್ಮ ಮೆಟ್ರೋ ಸಿಬ್ಬಂದಿಯಿಂದ ತಡರಾತ್ರಿ ಪ್ರತಿಭಟನೆ | ಭಾನುವಾರದ ವೇಳಾಪಟ್ಟಿ ಬದಲು|Oneindia Kannada

ಬೆಂಗಳೂರು, ಜನವರಿ 12: ನಾಳೆಯಿಂದಲೇ ಒಂದು ಗಂಟೆ ಮುಂಚಿತವಾಗಿ ಮೆಟ್ರೋ ರೈಲು ಸೇವೆ ಆರಂಭವಾಗಲಿದೆ. ಇನ್ನುಮುಂದೆ ಪ್ರತಿ ಭಾನುವಾರ ಮೆಟ್ರೋ ರೈಲು ಬೆಳಗ್ಗೆ 7 ಗಂಟೆಗೆ ಸಂಚಾರ ಆರಂಭಿಸಲಿದೆ.

ತಡರಾತ್ರಿ ನಮ್ಮ ಮೆಟ್ರೋ ನೌಕರರಿಂದ ದಿಢೀರ್ ಪ್ರತಿಭಟನೆ ತಡರಾತ್ರಿ ನಮ್ಮ ಮೆಟ್ರೋ ನೌಕರರಿಂದ ದಿಢೀರ್ ಪ್ರತಿಭಟನೆ

ಜನವರಿ 13ರಿಂದ ಪ್ರತಿ ಭಾನುವಾರ ಬೆಳಗ್ಗೆ 8 ಗಂಟೆ ಬದಲು 7 ಗಂಟೆಗೆ ಮೆಟ್ರೋ ಆರಂಭವಾಗಲಿದೆ.ವಾರದ ದಿನಗಳಲ್ಲಿ ಬೆಳಗ್ಗೆ 5ರಿಂದ ಮೆಟ್ರೋ ಸೇವೆ ಲಭ್ಯವಾಗುತ್ತದೆ. ಕಬ್ಬನ್ ಪಾರ್ಕ್ ಹಾಗೂ ಲಾಲ್‌ಬಾಗ್ ಇನ್ನಿತರೆ ಪ್ರದೇಶಗಳಿಗೆ ವಾಯುವಿಹಾರಕ್ಕೆ ತೆರಳುವವರಿಗೆ , ಭಾನುವಾರವೂ ಸಾಮಾನ್ಯ ದಿನಗಳಂತೆ ಸೇವೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು.

ನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ

ಈ ಒತ್ತಾಯಕ್ಕೆ ಸ್ಪಂದಿಸಿರುವ ಬಿಎಂಆರ್‌ಸಿಎಲ್ ಒಂದು ಗಂಟೆ ಮುಂಚಿತವಾಗಿ ಸೇವೆ ಆರಂಭಿಸುತ್ತಿದೆ. ಆರು ದಿನ ರೈಲು ಓಡಿಸಿದ ನಂತರ ಡಿಪೋದಲ್ಲಿ ರೈಲುಗಳ ಪೂರ್ಣ ನಿರ್ವಹಣೆ ಕಾರ್ಯ ನಡೆಸಲಾಗುತ್ತದೆ. ಆದರೆ ಇದಕ್ಕಾಗಿ ಭಾನುವಾರ ತಡವಾಗಿ ರೈಲು ಸೇವೆ ಆರಂಭಿಸಲಾಗುತ್ತಿತ್ತು. ಆದರೆ ಇದು ಐಟಿ, ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ಸೀಮಿತವಾದ ಕ್ರಮ ಎಂಬ ಟೀಕೆ ವ್ಯಕ್ತವಾಗುತ್ತಿತ್ತು.

Namma metro to start at 7 am on Sundays

ಉದ್ಯಾನದ ಒಳಗಿನ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗುತ್ತದೆ. ಹೀಗಾಗಿ ಕಬ್ಬನ್ ಉದ್ಯಾನಕ್ಕೆ ಮುಂಜಾನೆ ಬರಲು ಮೆಟ್ರೋ ಸೇವೆಯ ಅಗತ್ಯವಿತ್ತು. ಇಲ್ಲಿ ಬೆಳಗ್ಗೆ ವಾಕಥಾನ್, ಸೈಕಲ್ ಜಾಥಾ ಮೊದಲಾದ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ.

English summary
Bengalureans could have a Metro ride as early as 7am even on Sundays. The BMRCL plans to commence Sunday operations earlier that its present timing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X