ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಜೆಸ್ಟಿಕ್‌ನಿಂದ ಸಂಪಿಗೆ ರಸ್ತೆಗೆ ಬಂದ 'ಮಾರ್ಗರೀಟಾ'

|
Google Oneindia Kannada News

ಬೆಂಗಳೂರು, ನವೆಂಬರ್ 08 : ಮೆಜೆಸ್ಟಿಕ್‌ನಿಂದ ಸುರಂಗ ಕೊರೆಯುತ್ತಾ ಹೊರಟಿದ್ದ 'ಮಾರ್ಗರೀಟಾ' ಟಿಬಿಎಂ ಯಂತ್ರ ಸಂಪಿಗೆ ರಸ್ತೆಯನ್ನು ಯಶಸ್ವಿಯಾಗಿ ತಲುಪಿದೆ. ನಮ್ಮ ಮೆಟ್ರೋ ಇತರ ಯೋಜನೆಗಳ ದೃಷ್ಟಿಯಿಂದ ಈ ಮಾರ್ಗ ಮಹತ್ವದ್ದಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ಸೇರಿದಂತೆ ಹಲವು ಅಧಿಕಾರಿಗಳು ಶನಿವಾರ ಸಂಜೆ ಸಂಪಿಗೆ ರಸ್ತೆಯ ಬಳಿ 'ಮಾರ್ಗರೀಟಾ' ಯಂತ್ರವನ್ನು ಬರಮಾಡಿಕೊಂಡರು. [ಕೆ.ಆರ್.ಮಾರ್ಕೆಟ್ ನಿಂದ ಚಿಕ್ಕಪೇಟೆಗೆ ಬಂದ ಕೃಷ್ಣಾ!]

namma metro

ಸಂಪಿಗೆ ರಸ್ತೆ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಶ್ ಸಿಂಗ್ ಕರೋಲಾ ಅವರು, 'ಮಾರ್ಗರೀಟಾ ಟಿಬಿಎಂ ಯಂತ್ರ ಸುರಂಗ ಮಾರ್ಗ ಪೂರ್ಣಗೊಳಿಸಿರುವುದು ಇತರ ಯೋಜನೆಗೆಳಿಗೆ ಸಹಾಯಕವಾಗಲಿದೆ' ಎಂದರು. [ಮೆಟ್ರೋದಲ್ಲಿ ಹಿಂದಿ : ಪ್ರತಿಭಟನೆಯ ದನಿಗೆ ಕಿವಿಯಾಗಬನ್ನಿ]

'ಈ ಸುರಂಗ ಮಾರ್ಗದ ನಿರ್ಮಾಣದಿಂದ ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ ತನಕ ಹಳಿ ಹಾಕಲು ಸಾಧ್ಯವಾಗುತ್ತದೆ. 2016ರ ಫೆಬ್ರುವರಿ ಅಥವಾ ಮಾರ್ಚ್‌ ಒಳಗೆ ಹಳಿ ಹಾಕುವ ಕೆಲಸ ಪೂರ್ಣಗೊಳ್ಳಲಿದೆ. ನಂತರ ಪೀಣ್ಯದಿಂದ ಮೆಜೆಸ್ಟಿಕ್‌ ತನಕ ಪರೀಕ್ಷಾರ್ಥ ರೈಲು ಸಂಚಾರ ಆರಂಭಿಸಲಾಗುತ್ತದೆ' ಎಂದು ತಿಳಿಸಿದರು.

ಜನವರಿಯಲ್ಲಿ ಸಂಚಾರ : 2016ರ ಜನವರಿಯಲ್ಲಿ ಬೈಯಪ್ಪನಹಳ್ಳಿ-ಮೈಸೂರು ರಸ್ತೆ (ಪೂರ್ವ-ಪಶ್ಚಿಮ ಕಾರಿಡಾರ್‌) ಸಂಚಾರ ಆರಂಭಿಸಲಾಗುತ್ತದೆ ಎಂದು ಪ್ರದೀಪ್ ಸಿಂಗ್ ಖರೋಲಾ ಹೇಳಿದರು. ಸದ್ಯ, 'ಮಿನ್ಸ್ಕ್ ಚೌಕದಿಂದ ಮಾಗಡಿ ರಸ್ತೆವರೆಗೆ ಪರೀಕ್ಷಾರ್ಥವಾಗಿ ರೈಲು ಸಂಚಾರ ನಡೆಸಲಾಗುತ್ತಿದೆ' ಎಂದ ಅವರು ಮಾಹಿತಿ ನೀಡಿದರು. [ಪಿಟಿಐ ಚಿತ್ರ]

English summary
Tunnel Boring Machine (TBM) Margarita reached Sampige road (Mantri Square) station on Saturday. TBM Margarita drill the tunnel from Majestic to Sampige road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X