ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ಗೆ ಬಂದ ಗೋದಾವರಿ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 19 : ಸಂಪಿಗೆ ರಸ್ತೆಯಿಂದ ಸುರಂಗ ಕೊರೆಯುತ್ತಾ ಹೊರಟಿದ್ದ 'ಗೋದಾವರಿ' ಮೆಜೆಸ್ಟಿಕ್‌ಗೆ ಬಂದು ತಲುಪಿದೆ. ಹಲವಾರು ಅಡೆ-ತಡೆಗಳ ನಡುವೆ ನಮ್ಮ ಮೆಟ್ರೋ ಟಿಬಿಎಂ ಯಂತ್ರ ಸಂಪಿಗೆ ರಸ್ತೆ-ಮೆಜೆಸ್ಟಿಕ್ ನಡುವೆ ಸಂಪರ್ಕ ಕಲ್ಪಿಸಿದೆ.

ಮಂಗಳವಾರ ಬೆಳಗ್ಗೆ 11.30ರ ಸುಮಾರಿಗೆ 'ಗೋದಾವರಿ' ಹೆಸರಿನ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ಮೆಜೆಸ್ಟಿಕ್‌ ನಿಲ್ದಾಣಕ್ಕೆ ಆಗಮಿಸಿತು. 2013ರ ಮೇ ನಲ್ಲಿ ಈ ಯಂತ್ರ ಸುರಂಗ ಕೊರೆಯಲು ಆರಂಭಿಸಿತ್ತು. 973 ಮೀಟರ್ ಸುರಂಗವನ್ನು ಗೋದಾವರಿ ಕೊರೆದಿದೆ. [ಕೆ.ಆರ್.ಮಾರುಕಟ್ಟೆಗೆ ಬಂದ ಕೃಷ್ಣಾ]

bmrcl

ಮೂರು ತಿಂಗಳಿನಲ್ಲಿ ಈ ಮಾರ್ಗದಲ್ಲಿ ಹಳಿ ಹಾಕುವ ಕಾರ್ಯ ಪೂರ್ಣಗೊಳ್ಳಲಿದ್ದು, ನಂತರ ನಾಗಂದ್ರದಿಂದ ಹೊರಡುವ ಮೆಟ್ರೋ ರೈಲು ಮೆಜೆಸ್ಟಿಕ್ ತಲುಪಬಹುದಾಗಿದೆ. ಸದ್ಯ, ಸಂಪಿಗೆ ರಸ್ತೆ-ನಾಗಸಂದ್ರ ನಡುವೆ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. [ಸಂಪಿಗೆ ರಸ್ತೆಗೆ ಬಂದ 'ಮಾರ್ಗರೀಟಾ']

2013ರಲ್ಲಿ ಕಾಮಗಾರಿ ಆರಂಭಿಸಿದರೂ ಗೋದಾವರಿ ವಿಳಂಬವಾಗಿ ಕಾಮಗಾರಿ ಮುಗಿಸಿದೆ. 2014ರ ಜೂನ್‌ನಲ್ಲಿ ಗೋದಾವರಿಯ ಕಟರ್ ಹೆಡ್ ಹಾಳಾಗಿತ್ತು. ಸುರಂಗ ಮಾರ್ಗದಲ್ಲಿಯೇ ಅದು ಸಿಕ್ಕಿಹಾಕಿಕೊಂಡಿತ್ತು. ಕಟರ್ ಹೆಡ್ ಬದಲಾವಣೆ ಮಾಡಿ ಪುನಃ ಕಾಮಗಾರಿ ಆರಂಭಿಸಲಾಗಿತ್ತು. [ಬೈಯಪ್ಪನಹಳ್ಳಿಯಿಂದ-ನಾಯಂಡಹಳ್ಳಿಗೆ 35 ನಿಮಿಷದ ಪ್ರಯಾಣ]

ಮೂರು ತಿಂಗಳು ಬೇಕು : 'ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್ ತನಕ ಸುರಂಗ ಮಾರ್ಗದಲ್ಲಿ ಹಳಿ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಲು ಮೂರು ತಿಂಗಳ ಕಾಲಾವಕಾಶ ಬೇಕು. ನಂತರ ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್ ತನಕ ರೈಲು ಸಂಚಾರ ಆರಂಭಿಸಲಾಗುತ್ತದೆ' ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ಪ್ರದೀಪ್ ಸಿಂಗ್ ಖರೋಲಾ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tunnel Boring Machine (TBM) Godavari reached Majestic on Tuesday, April 19, 2016. TBM Godavari drill the tunnel from Sampige road to Majestic.
Please Wait while comments are loading...