22 ನಮ್ಮ ಮೆಟ್ರೋ ನಿಲ್ದಾಣದಲ್ಲಿ ಶೀಘ್ರವೇ ಎಟಿಎಂ ಸೌಲಭ್ಯ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 07 : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮೆಟ್ರೋ ನಿಲ್ದಾಣದಲ್ಲಿಯೇ ಇನ್ನು ಮುಂದೆ ಎಟಿಎಂ ಸೌಲಭ್ಯ ಸಿಗಲಿದೆ. ಹೌದು, ಬೆಂಗಳೂರಿನ 22 ಮೆಟ್ರೋ ನಿಲ್ದಾಣಗಳಲ್ಲಿ ಎಟಿಎಂಯಂತ್ರ ಅಳವಡಿಸಲು ಟೆಂಡರ್ ಕರೆಯಲಾಗಿದೆ.

ಮೆಟ್ರೋ ರೈಲಿನ ಟಿಕೆಟ್ ಪಡೆಯಲು ಜನರು ಹೊರಗಿನಿಂದ ಹಣವನ್ನು ತೆಗೆದುಕೊಂಡು ಹೋಗಬೇಕು. ರೈಲು ನಿಲ್ದಾಣದಲ್ಲಿ ಎಟಿಎಂ ಸೌಲಭ್ಯವಿಲ್ಲ. ಮೆಟ್ರೋವನ್ನು ಮತ್ತಷ್ಟು ಜನಸ್ನೇಹಿಯಾಗಿ ಮಾಡಲು ಬಿಎಂಆರ್‌ಸಿಎಲ್ ನಿಲ್ದಾಣದಲ್ಲಿ ಎಟಿಎಂ ಆಳವಡಿಕೆಗೆ ಟೆಂಡರ್ ಕರೆದಿದೆ.[ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ]

Namma metro stations to get ATMs soon

ಕಬ್ಬನ್ ಪಾರ್ಕ್, ಕೆ೦ಪೇಗೌಡ, ವಿಶ್ವೇಶ್ವರಯ್ಯ, ಸಿಟಿ ರೈಲು ನಿಲ್ದಾಣ ಮತ್ತು ವಿಧಾನಸೌಧ ಹೀಗೆ ಸುರಂಗ ಮಾರ್ಗದ 5 ನಿಲ್ದಾಣಗಳೂ ಸೇರಿದಂತೆ ಒಟ್ಟು 22 ನಿಲ್ದಾಣಗಳಲ್ಲಿ ಎಟಿಎಂ ಸ್ಥಾಪನೆಯಾಗಲಿದೆ. ಪ್ರತಿ ನಿಲ್ದಾಣದಲ್ಲಿ ಎರಡು ಎಟಿಎಂ ಅನ್ನು ಸ್ಥಾಪನೆ ಮಾಡಲಾಗುತ್ತದೆ.[ನವೆಂಬರ್ ನಲ್ಲಿ ಮೆಟ್ರೋ ಪೂರ್ಣಗೊಳ್ಳುವುದಿಲ್ಲ]

ಎಂ.ಜಿ.ರಸ್ತೆ ನಿಲ್ದಾಣದಲ್ಲಿ 4 ಮತ್ತು ಮೈಸೂರು ರಸ್ತೆ (ನಾಯಂಡಹಳ್ಳಿ) ನಿಲ್ದಾಣದಲ್ಲಿ 3 ಎಟಿಎಂ ಸ್ಥಾಪನೆ ಮಾಡಲಾಗುತ್ತದೆ. ಅಂದಹಾಗೆ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮತ್ತು ಸಂಪಿಗೆ ರಸ್ತೆ-ನಾಗಸಂದ್ರ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
22 Namma metro stations in Bengaluru will soon have ATM facilities. Bangalore Metro Rail Corporation Limited (BMRCL) invites tenders for install ATM.
Please Wait while comments are loading...