ಮೆಟ್ರೋ ನಿಲ್ದಾಣದಲ್ಲೂ ಇನ್ನುಮುಂದೆ ಶಾಂಪಿಂಗ್ ಮಾಡಬಹುದು!

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 13: ಶಾಪಿಂಗ್ ಅಂದ ತಕ್ಷಣ ನೆನಪಾಗುವುದು ಆಕರ್ಷಕ ಮಾಲ್ ಗಳು, ಆದರೆ ಇನ್ನು ಮುಂದೆ ಶಾಂಪಿಂಗ್ ಗೆ ಮಾಲ್ ಗಳಿಗೆ ಹೋಗಬೇಕೆಂದೇನಿಲ್ಲ ಮೆಟ್ರೋ ನಿಲ್ದಾಣಗಳಲ್ಲೇ ಶಾಪಿಂಗ್ ಮಾಡಬಹುದು.

ಮೆಟ್ರೋ ನಿಲ್ದಾಣಗಳೆಂದರೆ ರೈಲು ನಿಲ್ಲುವ ಸ್ಥಳ ಎಂದು ಮಾತ್ರ ಪರಿಗಣಿಸಲಾಗಿದೆ. ಆದರೆ ಈ ನಿಲ್ದಾಣಗಳನ್ನು ಸುಂದರವಾದ ಶಾಪಿಂಗ್ ತಾಣವಾಗಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ. ಸಣ್ಣ ಸಣ್ಣ ಮಳಿಗೆಗಳಿಗೆ ಅವಕಾಶ ನೀಡುವ ಮೂಲಕ ಆಲ್ ಮಾದರಿಯನ್ನು ಸನುಸರಿಸಲು ಮುಂದಾಗಿದೆ.

ಐಪಿಎಲ್ ದಿನ ಮೆಟ್ರೋ ಅವಧಿ ವಿಸ್ತರಣೆ: ಪ್ರಯಾಣ ದುಬಾರಿ

ಕೆಲವೊಂದು ನಿಲ್ದಾಣಗಳಲ್ಲಿ ಈಗಾಗಲೇ ಹೋಟೆಲ್ ಗಳು, ಪುಸ್ತಕ ಮಳಿಗೆಗಳು, ಹೇರ್ ಸಲೂನ್ ಗಳು ಆರಂಭವಾಗಿದೆ. ನಗರದ ಯಾವುದೇ ಮಾಲ್ ಗೆ ಹೋದರೆ ಪ್ರವೇಶ ದ್ವಾರದಲ್ಲಿ ಪೆಟ್ಟಿ ಅಂಗಡಿಯಂತಿರುವ ಕಿಯೋಸ್ಕ್ ಮಳಿಗೆಗಳು ಕಂಡುಬರುತ್ತವೆ. ಇವುಗಳಲ್ಲಿ ಆಭರಣ, ಕರಕುಶಲ ವಸ್ತುಗಳು, ಮೊಬೈಲ್ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳು, ಉಡುಪು, ಬ್ಯಾಗ್, ಪರ್ಸ್, ಕೈಗಡಿಯಾರ ಮಾರಾಟವಾಗುತ್ತಿರುವುದನ್ನು ಕಾಣಬಹುದು.

ಇದೇ ರೀತಿಯ ಆಕರ್ಷಕ ಶಾಪಿಂಗ್ ವಾತಾವರಣವನ್ನು ಮೆಟ್ರೋ ನಿಲ್ದಾಣದೊಳಗೆ ತರಲು ಕಿಯೋಸ್ಕ್ ಮಳಿಗೆಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಮೆಟ್ರೋ ನಿಲ್ದಾಣಗಳಲ್ಲಿ ಬೃಹತ್ ಮಳಿಗೆಗಳಿಗೆ ಬೇಡಿಕರ ಕಡಿಮೆಯಾಗಿರುವುದರಿಂದ ಕಿಯೋಸ್ಕ್ ಮಾದರಿಯ ಮಳಿಗೆಗಳನ್ನು ಹಾಕಿಕೊಳ್ಳಲು ಈ ಯೋಜನೆ ರೂಪಿಸಲಾಗಿದೆ.

ನಮ್ಮ ಮೆಟ್ರೋ: 38 ನಿಲ್ದಾಣಗಳಲ್ಲಿ 66 ಎಸ್‌ಬಿಐ ಎಟಿಎಂ ಅಳವಡಿಕೆ

ಕೇವಲ ಶಾಶ್ವತ ಮಳಿಗೆ ಮಾತ್ರವಲ್ಲ 1 ದಿನ ಮಳಿಗೆಗೂ ಅವಕಾಶ

ಕೇವಲ ಶಾಶ್ವತ ಮಳಿಗೆ ಮಾತ್ರವಲ್ಲ 1 ದಿನ ಮಳಿಗೆಗೂ ಅವಕಾಶ

10/10 ಅಡಿ, 8/6 ಅಡಿ ವಿಸ್ತೀರ್ಣದಲ್ಲಿ ಸಣ್ಣ ಮಳಿಗೆ ನಿರ್ಮಿಸಿಕೊಂಡು ವ್ಯಾಪಾರ ಮಾಡಬಹುದಾಗಿದೆ. ವ್ಯಾಪಾರಿಗಳು ಅತಿ ಕಡಿಮೆ ಜಾಗದಲ್ಲಿ ಮಳಿಗೆ ನಿರ್ಮಿಸುವುದರಿಂದ ಕಡಿಮೆ ಬಾಡಿಗೆ ಪಾವತಿ ಮಾಡಬಹುದು. ನಗರದಲ್ಲಿ ಈ ಮಾದರಿಯ ಮಳಿಗೆಗಳಿಗೆ ಹೆಚ್ಚು ಬೇಸಿಕೆ ಇದೆ.ಒಂದು ದಿನ, 7 ದಿನ, 15 ದಿನ ಹಾಗೂ 30 ದಿನ ಬಾಡಿಗೆ ನೀಡುವ ಆಯ್ಕೆಯನ್ನು ಪರಿಚಯಿಸಲಾಗಿದೆ. ಇದರಿಂದ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.

ಮೆಟ್ರೋದಲ್ಲಿ ಸಿಗುತ್ತಿರುವ ಸೌಲಭ್ಯಗಳು

ಮೆಟ್ರೋದಲ್ಲಿ ಸಿಗುತ್ತಿರುವ ಸೌಲಭ್ಯಗಳು

ಮೆಟ್ರೋ ನಿಲ್ದಾಣಗಳಲ್ಲಿ ಸದ್ಯಕ್ಕೆ ಕೆಫೆ, ಬೇಕರಿ, ಹೇರ್ ಕಟಿಂಗ್ ಸೇರಿದಂತೆ ವಿವಿಧ ಬಗೆಯ ಮಳಿಗೆಗಳನ್ನು ಹಾಕಿಕೊಳ್ಳಲು ಅವಕಾಸ ನೀಡಲಾಗುತ್ತಿದೆ. ಇದು ವಾಣಿಜ್ಯ ಸಮುಚ್ಚಯಗಳಲ್ಲಿರುವಂತೆ ಹೆಚ್ಚು ವಿಸ್ತೀಣಘ ಹೊಂದಿರುವ ಮಳಿಗೆಗಳಾಗಿದೆ. ಬಾಡಿಗೆ ದರ ಹೆಚ್ಚಿರುವುದರಿಂದ ಇಂತಹ ಮಳಿಗೆಗಳನ್ನು ಬಾಡಿಗೆ ಪಡೆಯಲು ಬರುವವರು ಕಡಿಮೆಯಾಗಿದ್ದಾರೆ. ಹೀಗಾಗಿ ಸಣ್ಣ ಮಟ್ಟದ ಕಿಯೋಸ್ಕ್ ಗಳನ್ನು ಹಾಕಿಕೊಳ್ಳಲು ಅವಕಾಶ ನೀಡಲಾಗುತ್ತಿದೆ.

ಟ್ರಿನಿಟಿ ವೃತ್ತ ಮೆಟ್ರೋ ನಿಲ್ದಾಣದಲ್ಲಿ ಯೂನಿಸೆಕ್ಸ್ ಹೇರ್ ಸಲೂನ್ ಆರಂಭ

ನಿಲ್ದಾಣಗಳ ವರ್ಗೀಕರಣ

ನಿಲ್ದಾಣಗಳ ವರ್ಗೀಕರಣ

ಮೆಟ್ರೋ ನಿಲ್ದಾಣಗಳನ್ನು ಎ ಪ್ಲಸ್, ಎ, ಬಿ, ಸಿ,ಡಿ,ಇ ಎಂದು ವರ್ಗೀಕರಣ ಮಾಡಲಾಗಿದೆ. ಪ್ರತಿ ವರ್ಗದ ನಿಲ್ದಾಣಗಳಲ್ಲಿ ಬಾಡಿಗೆ ದರವು 5 ಸಾವಿರ ರೂ. ನಿಂದ 10 ಸಾವಿರ ರೂ. ವರೆಗೆ ವ್ಯತ್ಯಾಸವಾಗುತ್ತದೆ. ಎಪ್ಲಸ್ ವರ್ಗದಲ್ಲಿ ಬರುವ ಮೆಜೆಸ್ಇಕ್ ನಿಲ್ದಾಣದಲ್ಲಿ 10/10 ವಿಸ್ತೀರ್ಣದ ಕಿಯೋಸ್ಕ್ ದಿನಕ್ಕೆ 20ಸಾವಿರ ರೂ. ಬಾಡಿಗೆ ಇದೆ. ಎ ವರ್ಗದಲ್ಲಿ ಬರುವ ಇಂದಿರಾನಗರ ನಿಲ್ದಾಣದಲ್ಲಿ ಇದೇ ವಿಸ್ತೀರ್ಣಕ್ಕೆ 15 ಸಾವಿರ ರೂ, ಬಿ ವರ್ಗಕ್ಕೆ ಬರುವ ಯಲಚೇನಹಳ್ಳಿ ನಿಲ್ದಾಣದಲ್ಲಿ ಇದೇ ವಿಸ್ತೀರ್ಣದ ಮಳಿಗೆ ಹಾಕಲು ದಿನಕ್ಕೆ 10ಸಾವಿರ ರೂ. ಸಿ ವರ್ಗದಲ್ಲಿ ಬರುವ ರಾಜಾಜಿನಗರ ನಿಲ್ದಾಣದಲ್ಲಿ ಕಿಯೋಸ್ಕ್ ಹಾಕಿಕೊಳ್ಳಲು ದಿನಕ್ಕೆ 8 ಸಾವಿರ ಬಾಡಿಗೆ ವಿಧಿಸಲಾಗುತ್ತದೆ.

ಮೆಟ್ರೋ ನಿಲ್ದಾಣದಲ್ಲಿ ಬೃಹತ್ ಮಳಿಗೆಗಳಿಗಿಲ್ಲ ಬೇಡಿಕೆ

ಮೆಟ್ರೋ ನಿಲ್ದಾಣದಲ್ಲಿ ಬೃಹತ್ ಮಳಿಗೆಗಳಿಗಿಲ್ಲ ಬೇಡಿಕೆ

ಈ ಹಿಂದೆ ಬಾಡಿಗೆ ವಿಧಿಸುವಾಗ ಒಂದು ತಿಂಗಳು ಅಥವಾ ಒಂದು ವರ್ಷದರೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿತ್ತು. ಒಂದು ದಿನ, 7 ದಿನ, 15 ದಿನ ಹಾಗೂ 30 ದಿನ ಬಾಡಿಗೆ ನೀಡುವ ಆಯ್ಕೆಯನ್ನು ಪರಿಚಯಿಸಲಾಗಿದೆ. ಇದರಿಂದ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಒಂದು ದಿನದ ಮಳಿಗೆ ಹಾಕಿಕೊಳ್ಳುವವರು, ಲಾಭವಾದರೆ ಒಪ್ಪಂದವನ್ನು ನವೀಕರಣ ಮಾಡಿಕೊಂಡು ಒಂದು ತಿಂಗಳವರೆಗೆ ಮುಂದುವರೆಸಬಹುದು. ನಷ್ಟವಾದರೆ ಒಂದೇ ದಿನದಲ್ಲಿ ಮಳಿಗೆಯನ್ನು ಬಿಟ್ಟು ಒಪ್ಪಂದ ರದ್ದು ಮಾಡಿಕೊಳ್ಳುವ ಆಯ್ಕೆ ಇದೆ. ಅಂತೆಯೇ ಮೆಟ್ರೋದಲ್ಲಿ ದೊಡ್ಡ ದೊಡ್ಡ ಮಳಿಗೆಗಳ ಬದಲಾಗಿ ಸಣ್ಣ ಮಳಿಗೆಗಳಿಗೆ ಹೆಚ್ಚು ಬೇಡಿಕೆ ಇದೆ.

ಏಳೂವರೆ ಲಕ್ಷ ಆದಾಯ ನಿರೀಕ್ಷೆ

ಏಳೂವರೆ ಲಕ್ಷ ಆದಾಯ ನಿರೀಕ್ಷೆ

ಮೆಜೆಸ್ಟಿಕ್ ನಿಲ್ದಾಣವು ನಗರದ ಕೇಂದ್ರ ಭಾಗದಲ್ಲಿರುವುದರಿಂದ ಬಾಡಿಗೆ ದರ ಅಧಿಕವಾಗಿದೆ. 10/10 ವಿಸ್ತೀರ್ಣದಲ್ಲಿ ಒಂದು ತಿಂಗಳವರೆಗೆ ಮಳಿಗೆ ಹಾಕಿದರೆ 5,10,000 ರೂ. ಪಾವತಿಸಬೇಕು. ಈ ನಿಲ್ದಾಣದಲ್ಲಿ ಎರಡು ಕಿಯೋಸ್ಕ್ ಮಳಿಗೆಗಳು ಒಂದು ತಿಂಗಳ ಮಟ್ಟಿಗೆ ವ್ಯಾಪಾರ ಮಾಡಿದರೆ ಬಿಎಂ ಆರ್ ಸಿಎಲ್ ಗೆ 7.65 ಲಕ್ಷ ರೂ. ಆದಾಯ ದೊರೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BMRCL had prepared a plan to set up kiosk shop of various things in Namma metro stations to provide more service to commuters and improve its own income. The BMRCL has its own space in these metro stations and taken initiative to utilise it.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ