ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ: ಪ್ರಯಾಣಿಕರ ಸೇವೆಯಲ್ಲಿ ಹೊಸ ದಾಖಲೆ

|
Google Oneindia Kannada News

ಬೆಂಗಳೂರು, ಜನವರಿ 08: ಬೆಂಗಳೂರಿನ ನಮ್ಮ ಮೆಟ್ರೋ ಸೋಮವಾರ ಬೆಳಗ್ಗೆ 9.30 ರಿಂದ 10.30 ನಡುವಿನ ಅವಧಿಯಲ್ಲಿ 44,356 ಪ್ರಯಾಣಿಕರಿಗೆ ಸೇವೆ ಒದಗಿಸುವ ಮೂಲಕ ಗರಿಷ್ಠ ದಾಖಲೆಯ ಪ್ರಯಾಣಿಕರ ಸಾಗಾಟದ ದಾಖಲೆಯನ್ನು ನಿರ್ಮಿಸಿದೆ.

ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವ ಕಾರಣ ಬಿಎಂಆರ್ ಸಿಎಲ್ ಮೆಟ್ರೋ ಟ್ರಿಪ್ ಗಳನ್ನು ಹೆಚ್ಚಳ ಮಾಡಿತ್ತು, ಆದರೆ ನೇರಳೆ ಮೆಟ್ರೋ ಮಾರ್ಗದಲ್ಲಿ ಏಕಾಏಕಿ 10 ರೈಲುಗಳ ಸಂಚಾರ ಹೆಚ್ಚಿಸಿದ್ದು ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಸಮಸ್ಯೆಗೆ ಕಾರಣ ಎಂದು ಅರಿವಾದ ಹಿನ್ನೆಲೆಯಲ್ಲಿ ಹಳೆ ವೇಳಾಪಟ್ಟಿ ರೈಲುಗಳ ಸಂಚಾರ ನಿರ್ವಹಿಸಲು ಬಿಎಂಆರ್ ಸಿಎಲ್ ನಿರ್ಧರಿಸಿತ್ತು. ದಟ್ಟಣೆ ಅವಧಿಯಲ್ಲಿ ಪ್ರತಿ ಮೂರೂವರೆ ನಿಮಿಷಕ್ಕೆ ಸಂಚಾರ ವ್ಯವಸ್ಥೆ ಮಾಡಲಾಗಿತ್ತು.

ಹೆಚ್ಚುವರಿ ಟ್ರಿಪ್ ಕಡಿತ: ಹಿಂದಿನ ವೇಳಾಪಟ್ಟಿಯಂತೆ ಮೆಟ್ರೋ ಸಂಚಾರಹೆಚ್ಚುವರಿ ಟ್ರಿಪ್ ಕಡಿತ: ಹಿಂದಿನ ವೇಳಾಪಟ್ಟಿಯಂತೆ ಮೆಟ್ರೋ ಸಂಚಾರ

ಇದರಿಂದಾಗಿ ಜ.2 ರ ಬೆಳಗ್ಗೆ10.02 ರಿಂದ 10.28 ರವರೆಗೆ ಮತ್ತು ಸಂಜೆ 6 ನಿಮಿಷ ಸಂಚಾರ ಸ್ಥಗಿತವಾಗಿತ್ತುನೇರಳೆ ಮಾರ್ಗದಲ್ಲಿ ಪ್ರತಿದಿನ 27 ರೈಲುಗಳು ಮಾಡುತ್ತಿದ್ದ 127 ಟ್ರಿಪ್ ಗಳನ್ನು 167 ಕ್ಕೆ ಹೆಚ್ಚಿಸಲಾಗಿತ್ತು. ಇದರಿಂದ ರೈಲುಗಳಲ್ಲಿ ವಿದ್ಯುತ್ ಸ್ಥಗಿತ ಉಂಟಾಗಿತ್ತು. ಹಾಗಾಗಿ ಹಳೇ ವೇಳಾಪಟ್ಟಿಯಂತೆ ರೈಲು ಸಂಚಾರವನ್ನು ಪ್ರಾರಂಭಿಸಲಾಗಿದೆ.

Namma metro records highest ridership by 44k

ಅಂತೆಯೇ ಮೆಟ್ರೋ ಇನ್ನೊಂದು ಮೈಲಿಗಲ್ಲು ದಾಟಿದ್ದು ಜನವರಿ 26 ರಿಂದ ಮಹಿಳೆಯರಿಗೆ ಪ್ರತ್ಯೇಕ ಬೋಗಿಗಳ ಜತೆಗೆ ಆರು ಬೋಗಿಗಳನ್ನು ಹೆಚ್ಚಿಸಲಾಗುತ್ತಿದೆ. ಈ ಹಿಂದೆ ಸಾಮಾನ್ಯವಾಗಿ ಮೆಜೆಸ್ಟಿಕ್ ನಿಂದ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಕಡಿಮೆ ಅವಧಿಯಲ್ಲಿ 13 ರೈಲು ಗಳು ಸಂಚರಿಸಿ ಆ ಸಮಯದಲ್ಲಿ 40 ಸಾವಿರ ಪ್ರಯಾಣಿಕರು ಸಂಚರಿಸಿದ್ದರು.

English summary
Namma Metro has set a new record of ridership by 44,356 commuters on Monday morning between 9.30 to 10.30. Earlier 40,000 ridership was the highest in the category of service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X