ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೂರ್ಣಗೊಳ್ಳುವುದೇ ಡಿಸೆಂಬರೊಳಗೆ ನಮ್ಮ ಮೆಟ್ರೋ?

By Prasad
|
Google Oneindia Kannada News

ಬೆಂಗಳೂರು, ಮಾ. 26 : ಎರಡು ವರ್ಷ ವಿಳಂಬವಾಗಿದ್ದರೂ ನಮ್ಮ ಮೆಟ್ರೋದ ಫೇಸ್ 1 ಸಂಪೂರ್ಣವಾಗಿ 2015ರ ಡಿಸೆಂಬರ್‌ದೊಳಗೆ ರಾಷ್ಟ್ರಕ್ಕೆ ಅರ್ಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ಭರವಸೆ ನೀಡಿದೆ.

ರಾಜ್ಯದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ನಮ್ಮ ಮೆಟ್ರೋದ ಸದ್ಯದ ಸ್ಥಿತಿಗತಿ ಮತ್ತು ಮುಂದಿನ ಪ್ರಗತಿಯ ಬಗ್ಗೆ ನರೇಂದ್ರ ಮೋದಿ ಅವರಿಗೆ ಬುಧವಾರ ವಿವರಣೆ ನೀಡಿದರು. 'ಪ್ರಗತಿ' ಯೋಜನೆಯ ಭಾಗವಾಗಿ ಮೆಟ್ರೋದ ಕುರಿತು ಒಂಬತ್ತು ರಾಜ್ಯಗಳ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಪ್ರಗತಿಯ ಬಗ್ಗೆ ಮೋದಿ ತಿಳಿದುಕೊಂಡರು.

ನಮ್ಮ ಮೆಟ್ರೋದ 1ನೇ ಫೇಸ್ ಎರಡು ವರ್ಷ ವಿಳಂಬವಾಗಿದ್ದನ್ನು ಒಪ್ಪಿಕೊಂಡ ಮುಖರ್ಜಿ, ಈಗಾಗಲೆ 17 ಕಿ.ಮೀ.ನಷ್ಟು ರೈಲು ಸೇವೆ ಆರಂಭವಾಗಿದ್ದು, ಉಳಿದ ಕಾಮಗಾರಿಯನ್ನು ಡಿಸೆಂಬರ್ 31ರೊಳಗೆ ಸಂಪೂರ್ಣವಾಗಿ ಮುಗಿಸಿ ರಾಷ್ಟ್ರಕ್ಕೆ ಅರ್ಪಿಸಲಾಗುವುದು ಎಂದು ವರದಿ ಒಪ್ಪಿಸಿದ್ದಾರೆ. [ಚಿತ್ರಗಳು : ಸುರಂಗ ಮಾರ್ಗದಲ್ಲಿ ಓಡಿದ ನಮ್ಮ ಮೆಟ್ರೋ]

Namma Metro phase I to be ready by 2015 December

ಭೂಮಿಯ ಅಗತ್ಯದ ಬಗ್ಗೆ ತಪ್ಪು ಅಂದಾಜು ಮಾಡಿದ್ದು, ಅಂದುಕೊಂಡಿದ್ದಕ್ಕಿಂತ ಭೂಸ್ವಾಧೀನ ಹೆಚ್ಚಿನ ಸಮಯ ತೆಗೆದುಕೊಂಡಿದ್ದು, ಮೆಜೆಸ್ಟಿಕ್ ವಲಯದ ಒಪ್ಪಂದ ನೀಡಲು ವಿಳಂಬವಾಗಿದ್ದು ಮತ್ತು ಕೊನೆಯದಾಗಿ ತಾಂತ್ರಿಕ ಕಾರಣಗಳಿಂದಾಗಿ ಸುರಂಗ ಕೊರೆಯುವ ಕಾಮಗಾರಿ ಆಮೆ ವೇಗದಲ್ಲಿ ಸಾಗಿದ್ದು 1ನೇ ಫೇಸ್ ಮುಗಿಯಲು ತಡವಾಯಿತು ಎಂಬ ಕಾರಣವನ್ನು ಪ್ರಧಾನಿಗೆ ನೀಡಲಾಗಿದೆ.

ಇದೇ ಏಪ್ರಿಲ್‌ನಿಂದ ಫೇಸ್ 2 ಹಂತದ ಕಾಮಗಾರಿಗೆ ಭೂಸ್ವಾಧೀನ ಕಾರ್ಯ ಆರಂಭವಾಗಲಿದ್ದು, 2020ರ ಹೊತ್ತಿಗೆ ಆ ಕಾಮಗಾರಿ ಪೂರ್ಣವಾಗಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗುವುದು ಎಂದು ಮುಖರ್ಜಿ ಅವರು ತಿಳಿಸಿದ್ದಾರೆ. ಇದಕ್ಕೆ ಯಾವುದೇ ಅಗತ್ಯ ಸಹಾಯವನ್ನು ಕೇಂದ್ರ ಒದಗಿಸಲಿದೆ ಎಂದು ಮೋದಿ ಕೂಡ ರಾಜ್ಯಕ್ಕೆ ಹೇಳಿದ್ದಾರೆ.

ಫೇಸ್ 1 ಒಟ್ಟಾರೆ 42 ಕಿ.ಮೀ. ವಿಸ್ತಾರ ಹೊಂದಿದ್ದು, 6.7 ಕಿ.ಮೀ. ಉದ್ದದ ಬೈಯಪ್ಪನಹಳ್ಳಿ ಮತ್ತು ಎಂಜಿ ರಸ್ತೆ ನಡುವಿನ ಮಾರ್ಗವನ್ನು 2011ರ ಅಕ್ಟೋಬರ್‌ನಲ್ಲಿ ಅರ್ಪಣೆ ಮಾಡಲಾಗಿತ್ತು. ಪೀಣ್ಯದಿಂದ ಮಲ್ಲೇಶ್ವರದವರೆಗಿನ ಮಾರ್ಗವನ್ನು 2014ರ ಫೆಬ್ರವರಿಯಲ್ಲಿ ರಾಷ್ಟ್ರಕ್ಕೆ ಅರ್ಪಣೆ ಮಾಡಲಾಗಿದೆ.

English summary
Karnataka has assured prime minister Narendra Modi that Namma Metro phase I will be complete by December 2015. Chief Secretary Kaushik Mukherjee had a video conference with Modi as part of project 'Pragati'. Karnataka to start phase II by 2015 April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X