ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಗಡಿ ರಸ್ತೆ-ಮೈಸೂರು ರಸ್ತೆ ನಮ್ಮ ಮೆಟ್ರೋ ದರ ಪಟ್ಟಿ

|
Google Oneindia Kannada News

ಬೆಂಗಳೂರು, ನವೆಂಬರ್ 16 : ಮಾಗಡಿ ರಸ್ತೆ-ಮೈಸೂರು ರಸ್ತೆ (ರೀಚ್ - 2) ನಡುವೆ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಸೋಮವಾರ ಅಧಿಕೃತ ಚಾಲನೆ ದೊರೆಯಲಿದೆ. ಒಟ್ಟು 6.4 ಕಿ.ಮೀ ಉದ್ದದ ಮಾರ್ಗದ ನಡುವಿನ ಎಲ್ಲಾ 6 ನಿಲ್ದಾಣಗಳು ಪ್ರಯಾಣಿಕರನ್ನು ಸ್ವಾಗತಿಸಲು ಸಿದ್ಧವಾಗಿವೆ.

ಸೋಮವಾರ ಸಂಜೆ 4 ಗಂಟೆಗೆ ಮಾಗಡಿ ರಸ್ತೆ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಮೆಟ್ರೋ ರೈಲಿಗೆ ಚಾಲನೆ ನೀಡಲಿದ್ದಾರೆ. ನಂತರ ಮೈಸೂರು ರಸ್ತೆ ನಿಲ್ದಾಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. [ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ವಿವರಗಳು]

namma metro

ಇಂದು ಮಾರ್ಗ ಉದ್ಘಾಟನೆಗೊಂಡರೂ ಸಾರ್ವನಿಕ ಸಂಚಾರ ಸಾಧ್ಯವಿಲ್ಲ. ಜನರ ಓಡಾಟಕ್ಕೆ ಮಾರ್ಗ ಎಂದು ಮುಕ್ತವಾಗಲಿದೆ? ಎಂಬುದು ಇಂದಿನ ಸಮಾರಂಭದಲ್ಲಿ ಘೋಷಣೆಯಾಗಲಿದೆ. ನಮ್ಮ ಮೆಟ್ರೋ ಮೊದಲ ಹಂತದ ಮಾರ್ಗದ ಒಟ್ಟು 42.3 ಕಿ.ಮೀ. ಈ ಮಾರ್ಗ ಉದ್ಘಾಟನೆಗೊಂಡರೆ ಒಟ್ಟು 25.5 ಕಿ.ಮೀ.ನಲ್ಲಿ ಮೆಟ್ರೋ ಸಂಚಾರ ಆರಂಭವಾದಂತಾಗುತ್ತದೆ. [ಪೂರ್ಣಗೊಳ್ಳುವುದೇ ಡಿಸೆಂಬರೊಳಗೆ ನಮ್ಮ ಮೆಟ್ರೋ?]

ಎಲ್ಲಾ ವ್ಯವಸ್ಥೆ : ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರತಿ ನಿಲ್ದಾಣದಲ್ಲಿ 60 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಉಚಿತ ಶೌಚಾಲಯ, ಟೋಕನ್ ಕೌಂಟರ್ ಸೇರಿದಂತೆ ಎಲ್ಲಾ ವ್ಯವಸ್ಥೆಯಾಗಿದೆ. [BMRCL ವೆಬ್ ಸೈಟ್]

6 ನಿಲ್ದಾಣಗಳು : 6.4 ಕಿ.ಮೀ.ಉದ್ದದ (ನೇರಳೆ ಮಾರ್ಗ)ಮಾಗಡಿ ರಸ್ತೆ-ಮೈಸೂರು ರಸ್ತೆ ಮಾರ್ಗದಲ್ಲಿ ಮಾಗಡಿ ರಸ್ತೆ, ಹೊಸಹಳ್ಳಿ, ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿ ನಗರ ಮತ್ತು ಮೈಸೂರು ರಸ್ತೆ ಸೇರಿ ಆರು ನಿಲ್ದಾಣಗಳಿವೆ.

ಈಗಾಗಲೇ ನಮ್ಮ ಮೆಟ್ರೋ ರೈಲು ಎಂ.ಜಿ.ರಸ್ತೆ ಬೈಯಪ್ಪನಹಳ್ಳಿ ಮತ್ತು ಸಂಪಿಗೆ ರಸ್ತೆ ನಾಗಸಂದ್ರ ನಡುವೆ ಸಂಚಾರ ನಡೆಸುತ್ತಿದೆ. ಈ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದರೆ ಮೆಟ್ರೋ ಯೋಜನೆಯ ಮೂರನೇ ಮಾರ್ಗ ಉದ್ಘಾಟನೆಯಾದಂತಾಗುತ್ತದೆ.

ದರ ಪಟ್ಟಿ
* ಮಾಗಡಿ ರಸ್ತೆ - ಹೊಸಹಳ್ಳಿ 10 ರೂ.
* ಮಾಗಡಿ ರಸ್ತೆ - ವಿಜಯನಗರ 13
* ಮಾಗಡಿ ರಸ್ತೆ -ಅತ್ತಿಗುಪ್ಪೆ 14
* ಮಾಗಡಿ ರಸ್ತೆ - ದೀಪಾಂಜಲಿ ನಗರ 16
* ಮಾಗಡಿ ರಸ್ತೆ - ಮೈಸೂರು ರಸ್ತೆ 17

English summary
6.4 km Namma metro Magadi road-Mysuru road stretch will be inaugurated on November 16. Bangalore Metro Rail Corporation (BMRCL) announced fare list of the stretch. Maximum charge is Rs 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X