ಏಪ್ರಿಲ್ ವೇಳೆಗೆ ಉತ್ತರ, ದಕ್ಷಿಣ ಬೆಂಗಳೂರು ನಡುವೆ ಮೆಟ್ರೋ ಸಂಪರ್ಕ ?

Posted By: Chethan
Subscribe to Oneindia Kannada

ಬೆಂಗಳೂರು, ಜ. 10: ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಅಂದುಕೊಂಡಂತೆ ಎಲ್ಲವೂ ಸಲೀಸಾಗಿ ನಡೆದರೆ, ಬರುವ ಏಪ್ರಿಲ್ ವೇಳೆಗೆ ಉದ್ಯಾನ ನಗರಿಯ ಉತ್ತರ ಹಾಗೂ ದಕ್ಷಿಣ ಭಾಗಗಳ ನಡುವಿನ ಒಟ್ಟಾರೆ 42 ಕಿ.ಮೀ. ದೂರದ ಮೆಟ್ರೋ ಸಂಪರ್ಕ ಸಾಧ್ಯವಾಗಲಿದೆ.

ಮೂಲಗಳ ಪ್ರಕಾರ, ಸದ್ಯಕ್ಕೀಗ, ನ್ಯಾಷನಲ್ ಕಾಲೇಜು ಹಾಗೂ ಯಲಚೇನ ಹಳ್ಳಿಯ ನಡುವಿನ ಮೆಟ್ರೋ ಮಾರ್ಗ ಸಿದ್ಧಗೊಂಡಿದ್ದು ಈ ಎಂಟು ಕಿ.ಮೀ. ದೂರದ ಹಾದಿಯಲ್ಲಿ ಬಿಎಂಆರ್ ಸಿಎಲ್ ಈಗಾಗಲೇ ಪ್ರಯೋಗಾರ್ಥ ಸಂಚಾರ ಆರಂಭಿಸಿದೆ.

Namma Metro link between Bengaluru north and south may get ready by april

ಆದರೆ, ಉತ್ತರ ಹಾಗೂ ದಕ್ಷಿಣ ಭಾಗಗಳನ್ನು ಬೆಸೆಯುವ ಯೋಜನೆ ನನಸಾಗಬೇಕಾದಲ್ಲಿ ಮಲ್ಲೇಶ್ವರಂನ ಸಂಪಿಗೆ ರಸ್ತೆಯಿಂದ (ಮಂತ್ರಿ ಮಾಲ್ ಬಳಿ) ನ್ಯಾಷನಲ್ ಕಾಲೇಜು ನಡುವಿನ ಮೆಟ್ರೋ ಹಾದಿ ಸಂಪೂರ್ಣವಾಗಿ ಸಿದ್ಧವಾಗಬೇಕಿದೆ. ಈ ಕಾಮಗಾರಿಯೂ ಆಗಲೇ ಅಂತಿಮ ತಲುಪಿದೆ ಎನ್ನಲಾಗುತ್ತಿದೆ.

ಬಿಎಂಆರ್ ಸಿಎಲ್ ತಾನೇ ಹಾಕಿಕೊಂಡಿದ್ದ ಡೆಡ್ ಲೈನ್ ಪ್ರಕಾರ, ಇದೇ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಈ ಹಾದಿ ಸಿದ್ಧಗೊಳ್ಳಬೇಕು. ಆದರೆ, ದೀರ್ಘಾವಧಿಯಿಂದಲೂ ಆಮೆಗತಿಯಲ್ಲಿ ಸಾಗುತ್ತಿರುವ ಅಲ್ಲಿನ ಕಾಮಗಾರಿ ನೋಡಿದರೆ ಅದು ಮಾರ್ಚ್ ಒಳಗೇ ಸಿದ್ಧಗೊಳ್ಳುವುದು ಅಸಾಧ್ಯ ಎನ್ನಲಾಗುತ್ತಿದೆ.

ಆದರೆ, ಇದನ್ನು ಬಿಎಂಆರ್ ಸಿಎಲ್ ಒಪ್ಪುತ್ತಿಲ್ಲ. ಸಂಸ್ಥೆ ಹೇಳುವ ಪ್ರಕಾರ, ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್ ಮೂಲಕ ನ್ಯಾಷನಲ್ ಕಾಲೇಜು ನಿಲ್ದಾಣದ ನಡುವಿನ ರಸ್ತೆ ಬಹುತೇಕ ಪೂರ್ಣಗೊಂಡಿದೆ. ಮುಂದಿನ ವಾರದಲ್ಲಿ ಈ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ.

ಒಟ್ಟಾರೆಯಾಗಿ , ಮುಂದಿನ ಏಪ್ರಿಲ್ ವೇಳೆಗೆ ಈ ಹಾದಿ ಸಿದ್ಧಗೊಳಿಸುವುದೇ ನಮ್ಮ ಗುರಿ ಎಂದಿದೆ ಸಂಸ್ಥೆ. ಬಿಎಂಆರ್ ಸಿಎಲ್ ನ ಈ ಆಶ್ವಾಸನೆ ನಿಗದಿತ ಸಮಯದಲ್ಲಿ ಸಾಕಾರವಾದರೆ, ಇದು ಬೆಂಗಳೂರಿಗರಿಗೆ ಯುಗಾದಿ ಹಬ್ಬದ ವೇಳೆಗೆ ಸಿಹಿ ಸುದ್ದಿ ಸಿಗಲಿದೆ ಎಂದು ನಿರೀಕ್ಷಿಸಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
work to connect Bengaluru north to south via namma metro is expected to ready by April this year.
Please Wait while comments are loading...