ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಸುರಕ್ಷಿತವಾಗಿದೆ, ಯಾವುದೇ ಅಪಾಯವಾಗಿಲ್ಲ: ಅಜಯ್ ಸೇಠ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ನಮ್ಮ ಮೆಟ್ರೋ ಸುರಕ್ಷಿತವಾಗಿದೆ, ಯಾವುದೇ ಭಯವಿಲ್ಲದೆ ಮೆಟ್ರೋದಲ್ಲಿ ಸಂಚರಿಸಬಹುದು ಎಂದು ಬಿಎಂಆರ್‌ಸಿಎಲ್ ಎಂಡಿ ಅಜಯ್ ಸೇಠ್ ಭರವಸೆ ನೀಡಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಟ್ರೋ ಅಪಾಯದಲ್ಲಿದೆ, ಪಿಲ್ಲರ್‌ನಲ್ಲಿ ಬಿರುಕು ಬಿಟ್ಟಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ, ಆದರೆ ಎಲ್ಲೂ ಗಂಭೀರ ಸಮಸ್ಯೆಯಾಗಿಲ್ಲ, ಎರಡು ದಿನಗಳ ಕಾಲ ತಪಾಸಣೆ ನಡೆಸಲಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ ಎಂದರು.

 ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ

ಟ್ರಿನಿಟಿ ವೃತ್ತದ ಬಳಿ 155ನೇ ಪಿಲ್ಲರ್‌ನಲ್ಲಿ ಬಿರುಕು ಬಿಟ್ಟಿದೆ, ಅದರಿಂದ ಮೆಟ್ರೋಗೆ ಅಪಾಯವಾಗುತ್ತದೆ ಎಂಬ ವದಂತಿಗಳು ಹರಿದಾಡಿತ್ತು, ಅದ್ಯಾವುದಕ್ಕೂ ಕಿವಿಗೊಡಬೇಡಿ, ಸೆಗ್ಮೆಂಟ್, ಪಿಲ್ಲರ್ ಸಮಸ್ಯೆ ಎಂದು ಹೇಳಲಾಗಿದೆ.

Namma metro is completely safe: Ajay Seth

ಪಿಲ್ಲರ್‌ನಲ್ಲಿ ಗ್ಯಾಪ್ ಇರುವುದೇ ಹಾಗೆ, 2 ಸೆಗ್ಮೆಂಟ್ ನಡುವೆ ಗ್ಯಾಪ್ ಇಲ್ಲವೆಂದರೆ ಸಮಸ್ಯೆಯಾಗುತ್ತದೆ, ಮೆಟ್ರೋ ವೇಗವನ್ನು ಕಡಿಮೆ ಮಾಡಿರುವುದು ಯಾವುದೋ ಅಪಾಯವಾಗುತ್ತೆ ಎಂದಲ್ಲ ತಪಾಸಣೆ ನಡೆಸುತ್ತಿದ್ದ ಕಾರಣ , ಮೆಟ್ರೋ ವೇಗವನ್ನು ಕಡಿಮೆ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಿದರು.

 ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ? ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ?

ನಾಯಂಡಹಳ್ಳಿ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗದ ಟ್ರಿನಿಟಿ ವೃತ್ತ ಮೆಟ್ರೋ ನಿಲ್ದಾಣದ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು.

ಗುರುವಾರ ತಡರಾತ್ರಿವರೆಗೂ ಟೆಸ್ಟಿಂಗ್ ಆಗಿದೆ, ಅಲ್ಟ್ರಾ ಸೋನಿಕ್ ಟೆಸ್ಟ್ ನಡೆಸಲಾಗಿದೆ, ನಾಲ್ಕೈದು ದಿನದಲ್ಲಿ ಪ್ಲಾನ್ ಆಫ್ ಆಕ್ಷನ್ ತಯಾರಿಸಲಾಗುತ್ತದೆ ಎಂದು ಹೇಳಿದರು.

English summary
BMRCL MD Ajay Seth clarified that there is no problem in Namma metro train, There ware some reports that near mg road station there was break in metro pillar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X