ಕನಕಪುರ ರಸ್ತೆಯಿಂದ ನಾಗವಾರಕ್ಕೆ ಮೆಟ್ರೋ ಮಾರ್ಗ?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 11: ಬೆಂಗಳೂರಿನಗ ಮೆಚ್ಚಿನ ಸಾರ್ವಜನಿಕ ಸಾರಿಗೆ ನಮ್ಮ ಮೆಟ್ರೋ ಮೊದಲ ಹಂತ ಮುಕ್ತಾಯವಾಗಿ ಈಗಾಗಲೇ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತೊಂದು ಸಿಹಿ ಸುದ್ದಿ ಬಿಎಂಆರ್ ಸಿಎಲ್ (ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೋರೇಶನ್ ಲಿ.) ಕಡೆಯಿಂದ ಬಂದಿದೆ.

50 ದಿನ, 1.5 ಕೋಟಿ ಜನ: ಇದು 'ನಮ್ಮ ಮೆಟ್ರೋ' ಮೈಲಿಗಲ್ಲು!

ಕನಕಪುರ ರಸ್ತೆಯಿಂದ ನಾಗವಾರದವರೆಗಿನ ಹೊರವರ್ತುಲ ರಸ್ತೆಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಕುರಿತು ಬಿಎಂಆರ್ ಸಿಎಲ್ ಚಿಂತನೆ ನಡೆಸುತ್ತಿದೆ.

Namma metro in Kanakapur road to Nagawara: BMRCL's New project?

ಇದಕ್ಕೂ ಮೊದಲು ಈ ಮಾರ್ಗದಲ್ಲಿ ಬನ್ನೇರುಘಟ್ಟ ರಸ್ತೆ, ಜೆಪಿ ನಗರ ಮತ್ತು ಹೆಬ್ಬಾಳಗಳ ಸಮಪರ್ಕಕ್ಕೆ ಲೈಟ್ ರೈಲ್ ಟ್ರಾನ್ಸಿಟ್ (ಎಲ್ ಆರ್ ಟಿ) ನಿರ್ಮಿಸುವ ಯೋಚನೆಯನ್ನು ಸರ್ಕಾರ ಹೊಂದಿತ್ತು. ಆದರೆ ನಮ್ಮ ಮೆಟ್ರೋ ಹಯಶಸ್ಸಿನ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿಯೂ ನಮ್ಮ ಮೆಟ್ರೋ ಮಾರ್ಗ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದ್ದು, ಈ ಯೋಜನೆಯ ಹೊಣೆಯನ್ನು ಬಿಎಂಆರ್ ಸಿಎಲ್ ಗೆ ನೀಡಲಾಗಿದೆ.

ಆದರೆ ಈ ಯೋಜನೆ ಸಂಪೂರ್ಣವಾಗಿ ಮುಗಿಯಲು 2025-2026 ವರೆಗೂ ಕಾಯಬೇಕಿದೆ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After huge success of Bengaluru Namma Metro, BMRCL is now getting a new project, in which it would be constructing metro line from Kanakapur road to Nagawara.
Please Wait while comments are loading...