ಮೆಟ್ರೋದಲ್ಲಿ ಲಗೇಜ್ 15 ಕೆಜಿ ಮೀರಿದರೆ 30 ರೂ. ಟಿಕೇಟ್ ಕಡ್ಡಾಯ

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 08 : ನಮ್ಮ ಮೆಟ್ರೋ ರೈಲಿನಲ್ಲಿ ಕೇವಲ ಪ್ರಯಾಣ ಮಾಡುವವರು ಮಾತ್ರ ಟಿಕೇಟ್ ಪಡೆಯುವುದಲ್ಲ ಇನ್ನುಮುಂದೆ ಲಗೇಜ್ ಗಳಿಗೂ ಕೂಡ ಹಣ ಪಾವತಿಸಬೇಕು.

ನಮ್ಮ ಮೆಟ್ರೋ ರೈಲಿನಲ್ಲಿ ಚ್ಯೂಯಿಂಗ್‌ ಗಮ್ ಅಗಿಯುವಂತಿಲ್ಲ!

ಹೌಡು ಪ್ರಯಾಣಿಕರು ತಮ್ಮ ಜತೆಯಲ್ಲಿ ತೆಗೆದುಕೊಂಡು ಹೋಗುವ ಬ್ಯಾಗ್ ಗಳಿಗೆ ಬಿಎಂಆರ್ ಸಿಎ ಎಲ್ ದರ ನಿಗದಿ ಮಾಡಿದೆ. ಈ ಹಿಂದೆ 15 ಕೆಜಿಗಿಂತ ಹೆಚ್ಚು ಭಾರವಿರುವ ಲಗೇಜ್ ತೆಗೆದುಕೊಂಡು ಹೋಗುವಂತಿರಲಿಲ್ಲ.

ನಮ್ಮ ಮೆಟ್ರೋದಲ್ಲಿ ವಿಕಲಚೇತನಿರಿಗೂ ಪ್ರತ್ಯೇಕ ಬೋಗಿ ಸಾಧ್ಯತೆ

ಅದಾದ ನಂತರ ಪ್ರಯಾಣಿಕರ ಒತ್ತಾಯದ ಮೇರೆಗೆ 15 ಕೆಜಿ ಭಾರತದ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು ಅದರೆ 10 ರೂ. ನೀಡಬೇಕಾಗಿತ್ತು. ಅದರೆ ಇದೀಗ ದರವನ್ನು ಏರಿಕೆ ಮಾಡಿದೆ. 15 ಕೆ.ಜಿಗಿಂತ ಹೆಚ್ಚು ಭಾರವಿರುವ ಲಗೇಜ್ ತೆಗೆದುಕೊಂಡು ಹೋಗಬಹುದು ಆದರೆ 30ರೂ. ತೆರಬೇಕಾಗುತ್ತದೆ.

ತೂಕಕ್ಕೆ ಸಮರ್ಪಕ ಯಂತ್ರವಿಲ್ಲ:

ತೂಕಕ್ಕೆ ಸಮರ್ಪಕ ಯಂತ್ರವಿಲ್ಲ:

ಲಗೇಜ್ ಹೊತ್ತು ಹೊರಗಡೆ ಹೋಗುವ ಮೊದಲು ಭದ್ರತಾ ಸಿಬ್ಬಂದಿಗಳು ಬ್ಯಾಗ್ ನ್ನು ಪರೀಕ್ಷಿಸುತ್ತಾರೆ. ಅವರು ತಮ್ಮ ಕೈಯಲ್ಲಿ ಬ್ಯಾಗ್ ಹಿಡಿದು ಅಂದಾಜಿನ ಮೇಲೆ ತೂಕವನ್ನು ಹೇಳುತ್ತಾರೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೊಮ್ಮೆ ಲಗೇಜ್ ಗೆ ಹಣ ತೆರುವುದಾದರೆ ಸಮರ್ಪಕ ತೂಕ ಯಂತ್ರವನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಮ್ಮ ಮೆಟ್ರೋ ರೈಲು 3 ನಿಮಿಷಕ್ಕೊಂದರಂತೆ ಸಂಚಾರ: ಜಾರ್ಜ್

ನಿಯಮ ಜಾರಿಯಾಗಿ ಒಂದು ವಾರ:

ನಿಯಮ ಜಾರಿಯಾಗಿ ಒಂದು ವಾರ:

ಲೇಗೇಜ್ ಗೆ ಹಣ ನೀಡುವ ನಿಯಮ ಜಾರಿಯಾಗಿ ಒಂದು ವಾರವಾಗಿದೆ. ಎಲ್ಲಾ ಮೆಟ್ರೋ ನಿಲ್ದಾಣದಲ್ಲಿಯೂ ಇನ್ನು ಪ್ರತ್ಯೇಕ ಟಿಕೇಟ್ ನೀಡುತ್ತಿಲ್ಲ. ಆದರೆ ಕೆಲವು ನಿಲ್ದಾಣಗಳಲ್ಲಿ ಮುನ್ಸೂಚನೆ ನೀಡದೆ ದಂಡ ವಿಧಿಸಿದ್ದಾರೆ. ಆದರೆ ತೂಕ ಯಂತ್ರ ಇಲ್ಲದಿರುವುದರಿಂದ ಕಡಿಮೆ ತೂಕದ ಬ್ಯಾಕಿಗೂ ಕೂಡ ಟಿಕೇಟ್ ನೀಡಬೇಕಾಗಿ ಬರಬಹುದು.

ಎಲ್ಲೂ ಇಲ್ಲದ ನಿಯಮ ಇಲ್ಲೇಕೆ ಎಂಬುದು ಪ್ರಾಯಣಿಕರ ಪ್ರಶ್ನೆ:

ಎಲ್ಲೂ ಇಲ್ಲದ ನಿಯಮ ಇಲ್ಲೇಕೆ ಎಂಬುದು ಪ್ರಾಯಣಿಕರ ಪ್ರಶ್ನೆ:

‘ಒತ್ತಾಯದಿಂದ ಬ್ಯಾಗ್‌ಗಳಿಗೆ ಹಣ ಪಡೆಯುವುದು ಸರಿಯಲ್ಲ. ದೆಹಲಿ ಮೆಟ್ರೊದಲ್ಲಿ ಇಲ್ಲದ ನಿಯಮ ಇಲ್ಲಿ ಏಕೆ' ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ರೈಲು, ಕೆಎಸ್ ಆರ್‌ಟಿಸಿ ಹಾಗೂ ಬಿಎಂಟಿಸಿಯಲ್ಲಿ ಬ್ಯಾಗ್‌ಗಳಿಗೆ ಪ್ರತ್ಯೇಕ ಟಿಕೆಟ್ ಇಲ್ಲ. ಕೆಲವೊಂದು ಕಡೆ ಮಾತ್ರ 25 ಕೆಜಿ ಮೀರಿದರೆ 10 ರೂ. ತೆಗೆದುಕೊಳ್ಳುತ್ತಾರೆ. ವಿಮಾನದಲ್ಲಿ 19 ಕೆ.ಜಿ ಗಿಂತ ಹೆಚ್ಚಿದ್ದರೆ ಮಾತ್ರ 20 ಸಂಗ್ರಹಿಸುತ್ತಾರೆ'

500ರೂ. ಬದಲಾಗಿ 200 ರೂ. ದಂಡ

500ರೂ. ಬದಲಾಗಿ 200 ರೂ. ದಂಡ

ಮೆಟ್ರೋದಲ್ಲಿ ಒಂದೊಮ್ಮೆ ಟೋಕನ್ ಕಳೆದುಕೊಂಡರೆ500 ರೂ. ದಂಡ ವಿಧಿಸುವುದಾಗಿ ಬಿಎಂಆರ್ ಸಿ ಎಲ್ ಒಂದು ವಾರದ ಹಿಂದೆ ಹೇಳಿತ್ತು. ಆದರೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ 500 ರೂ. ಇದ್ದ ದಂಡವನ್ನು200 ರೂ.ಗೆ ಇಳಿಕೆ ಮಾಡಲಾಗಿದೆ. ಆದರೆ ಅದರೊಂದಿಗೆ ಗರಿಷ್ಠ ಪ್ರಯಾಣ ದರ 60 ರೂ. 260ರೂ. ನೀಡಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The BMRCL has increased goods charges which was Rs.10 for 15kg.Now its Rs.30 for the same. The passengers have expressed displeasure for the charges which is not imposing the same in Delhi metro station.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ