ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋದಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರಯಾಣಿಕರ ಸಂಚಾರ!

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 12: ನಮ್ಮ ಮೆಟ್ರೋದಲ್ಲಿ ಒಂದೇ ದಿನದಲ್ಲಿ ಅತ್ಯಧಿಕ ಮಂದಿ ಪ್ರಯಾಣಿಸುವ ಮೂಲಕ ಹೊಸ ದಾಖಲೆಯನ್ನು ಬರೆಯಲಾಗಿದೆ. ಶುಕ್ರವಾರ(ಆಗಸ್ಟ್ 10)ದ ದಿನದಂದು ಸರಿ ಸುಮಾರು 4.23 ಲಕ್ಷ ಮಂದಿ ಪ್ರಯಾಣಿಸಿದ್ದಾರೆ ಎಂದು ಬಿಎಂಆರ್ ಸಿಎಲ್ ಪ್ರಕಟಿಸಿದೆ.

ನಮ್ಮ ಮೆಟ್ರೋದಲ್ಲಿ 6 ಬೋಗಿಗಳನ್ನು ಅಳವಡಿಸಲಾಗಿದ್ದು, ಮಳೆ ನಡುವೆ, ವೀಕೆಂಡ್ ಗೂ ಮುನ್ನವೇ ಪ್ರಯಾಣಿಕರು ಮೆಟ್ರೋಗಾಗಿ ಮುಗಿ ಬಿದ್ದಿದ್ದಾರೆ.

ಫ್ಲವರ್‌ ಶೋ ಪರಿಣಾಮ: ಮೆಟ್ರೋ ಪ್ರಯಾಣ ಮೂರು ದಿನ ತುಟ್ಟಿ ಫ್ಲವರ್‌ ಶೋ ಪರಿಣಾಮ: ಮೆಟ್ರೋ ಪ್ರಯಾಣ ಮೂರು ದಿನ ತುಟ್ಟಿ

ಇದಕ್ಕೂ ಮುನ್ನ ಜುಲೈ 2 ರಂದು 3.95 ಲಕ್ಷ ಮಂದಿ ಪ್ರಯಾಣಿಸುವ ಮೂಲಕ ಅತ್ಯಧಿಕ ಪ್ರಯಾಣದ ದಾಖಲೆ ಬರೆಯಲಾಗಿತ್ತು. ಪ್ರತಿ ದಿನ ಸರಾಸರಿ 3.60 ಲಕ್ಷ ಜನರು ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದಾರೆ.

Namma Metro has a ‘record’ ride 4.23 Lakh commuters

ಆಗಸ್ಟ್ 10ರಂದು 4,23,098 ಮಂದಿ ಪ್ರಯಾಣಿಸಿದ್ದು, 1,03,68,148 ರು ಸಂಗ್ರಹವಾಗಿದೆ. ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆ ನಡುವಿನ ನೇರಳೆ ಮಾರ್ಗದಲ್ಲಿ 2,30,993 ಮಂದಿ ಹಾಗೂ ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ 1,92,105 ಮಂದಿ ಪ್ರಯಾಣ ಮಾಡಿದ್ದಾರೆ. ಟಿಕೆಟ್‌ ಶುಲ್ಕದಿಂದ ನೇರಳೆ ಮಾರ್ಗದಲ್ಲಿ 50,85,711 ರೂ. ಹಾಗೂ ಹಸಿರು ಮಾರ್ಗದಲ್ಲಿ 52,82,437 ರೂ. ಆದಾಯ ಸಂಗ್ರಹವಾಗಿದೆ ಎಂದು ನಮ್ಮ ಮೆಟ್ರೋದ ಪಿಆರ್ ಒ ಯುಎಸ್ ವಸಂತರಾವ್ ಟ್ವೀಟ್ ಮಾಡಿದ್ದಾರೆ.

ಸ್ಮಾರ್ಟ್‌ ಕಾರ್ಡ್‌ ಖರೀದಿಗೆ ಒತ್ತು: ಬಿಎಂಆರ್‌ಸಿಎಲ್‌ ಸ್ಮಾರ್ಟ್‌ ಕಾರ್ಡ್‌ ಖರೀದಿಗೆ ಒತ್ತು ನೀಡಿರುವುದರಿಂದ ಜುಲೈನಲ್ಲಿ 94,734 ಸ್ಮಾರ್ಟ್‌ ಕಾರ್ಡ್‌ಗಳು ಮಾರಾಟವಾಗಿವೆ. ಜೂನ್‌ನಲ್ಲಿ 1.1 ಕೋಟಿ ಮಂದಿ ಮೆಟ್ರೊದಲ್ಲಿ ಪ್ರಯಾಣಿಸಿದ್ದರು. ಜುಲೈನಲ್ಲಿ 1.15 ಕೋಟಿ ಪ್ರಯಾಣಿಕರು ಮೆಟ್ರೊ ಬಳಸಿದ್ದು, 31.4 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

English summary
Over 4,23,098 passengers took Namma Metro ride on Friday (Aug 10) which is record ride per a day. BMRCL earned Rs 1,03,68,148 on that day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X