ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್ ದರ ಪಟ್ಟಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 29 : ಉದ್ಯಾನ ನಗರಿ ಬೆಂಗಳೂರಿನ ನಮ್ಮ ಮೆಟ್ರೋ ಸುರಂಗ ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ. ಪೂರ್ವ-ಪಶ್ಚಿಮ ಕಾರಿಡಾರ್‌ನ ನೇರಳೆ ಮಾರ್ಗ ಇಂದು ಸಂಜೆ ಉದ್ಘಾಟನೆಗೊಳ್ಳಲಿದ್ದು, ಏ.30ರಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.

ನಮ್ಮ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್‌ನ 18 ಕಿ.ಮೀ ಮಾರ್ಗದ ಪೈಕಿ 5 ಕಿ.ಮೀ ಸುರಂಗ ಮಾರ್ಗ ಇಂದು ಉದ್ಘಾಟನೆಗೊಳ್ಳುತ್ತಿದೆ. ಬೈಯಪ್ಪನಹಳ್ಳಿ-ಎಂ.ಜಿ.ರಸ್ತೆ ಮತ್ತು ಮಾಗಡಿ ರಸ್ತೆ-ಮೈಸೂರು ರಸ್ತೆ ನಡುವೆ ಈಗಾಗಲೇ ರೈಲು ಸಂಚಾರ ನಡೆಸುತ್ತಿದೆ. [ನಮ್ಮ ಮೆಟ್ರೋ ಸುರಂಗ ಮಾರ್ಗದ ವಿಶೇಷತೆಗಳು]

namma metro

ಬೈಯಪ್ಪನಹಳ್ಳಿಯಿಂದ-ಮೈಸೂರು ರಸ್ತೆ (ನಾಯಂಡಹಳ್ಳಿ)ಗೆ ಸಂಪರ್ಕ ಕಲ್ಪಿಸುವ ಮಾರ್ಗ 18.10 ಕಿ.ಮೀ ದೂರವಿದ್ದು, 40 ರೂ. ಗರಿಷ್ಠ ಪ್ರಯಾಣದರ ನಿಗದಿಪಡಿಸಲಾಗಿದೆ. ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯ ತನಕ ಮಾರ್ಗದಲ್ಲಿ ರೈಲು ಸಂಚಾರ ನಡೆಸುತ್ತದೆ. [ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸಿಗುತ್ತೆ ಬಾಡಿಗೆ ಬೈಕ್]

ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ತಲುಪಲು 33 ನಿಮಿಷಗಳು ಸಾಕು. ರೈಲೈ ಸುರಕ್ಷತಾ ಆಯುಕ್ತರು 80 ಕಿ.ಮೀ ವೇಗದಲ್ಲಿ ರೈಲು ಸಂಚಾರ ನಡೆಸಲು ಅನುಮತಿ ಕೊಟ್ಟಿದ್ದಾರೆ. ಆದರೆ, ಕಡಿದಾದ ತಿರುವುಗಳು ಇರುವ ಕಾರಣ 30 ರಿಂದ 40 ಕಿ.ಮೀ ವೇಗದಲ್ಲಿ ರೈಲು ಸಂಚಾರ ನಡೆಸಲಿದೆ.

ನಮ್ಮ ಮೆಟ್ರೋ ದರ ಪಟ್ಟಿ (ನಾಯಂಡಹಳ್ಳಿಯಿಂದ)

ದೀಪಾಂಜಲಿ ನಗರ - 10 ರೂ.
ಅತ್ತಿಗುಪ್ಪೆ - 13
ವಿಜಯನಗರ - 14
ಹೊಸಹಳ್ಳಿ - 16
ಮಾಗಡಿ ರಸ್ತೆ - 17
ನಗರ ರೈಲು ನಿಲ್ದಾಣ - 19
ಮೆಜೆಸ್ಟಿಕ್ ನಿಲ್ದಾಣ - 22
ಸರ್‌.ಎಂ.ವಿಶ್ವೇಶ್ವರಯ್ಯ ನಿಲ್ದಾಣ - 24
ವಿಧಾನಸೌಧ - 26
ಕಬ್ಬನ್ ಉದ್ಯಾನ - 28
ಎಂ.ಜಿ.ರಸ್ತೆ - 30
ಟ್ರಿನಿಟಿ - 32
ಹಲಸೂರು - 34
ಇಂದಿರಾನಗರ - 36
ಸ್ವಾಮಿ ವಿವೇಕಾನಂದ ರಸ್ತೆ - 38
ಬೈಯಪ್ಪನಹಳ್ಳಿ - 40

ನಿಲ್ದಾಣಗಳು

metro
English summary
Union urban development minister Venkaiah Naidu will flag off for the service of 18 km East-West corridor Purple line of Namma Metro between Baiyappanahalli to Mysuru road on April 29, 2016. Here are the fare list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X