ನಮ್ಮ ಮೆಟ್ರೋ: ಟಾಪ್ ಅಪ್ ಕಾರ್ಡ್ ಗರಿಷ್ಟ ಮಿತಿ ಹೆಚ್ಚಳ

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 09 : ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರಿಗೆ ತಮ್ಮ ಸ್ಮಾರ್ಟ್ ಕಾರ್ಡುಗಳ ಟಾಪ್ ಅಪ್ ನ್ನು3 ಸಾವಿರ ರೂ ಗೆ ಹೆಚ್ಚಳ ಮಾಡಲು ಮೆಟ್ರೋ ರೈಲು ನಿಗಮ ನಿರ್ಧರಿಸಿದೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ನೀಡಲಾಗುತ್ತಿರುವ ಸ್ಮಾರ್ಟ್ ಕಾರ್ಡ್ ನಲ್ಲಿ ಇ್ಉವರೆಗೆ ಒಂದು ಬಾರಿಗೆ ಗರಿಷ್ಠ 1,500 ಪಾವತಿಸಿ ವಾರ್ಷಿಕ ಕಾರ್ಡ್ ಪಡೆಯಬೇಕಾಗುತ್ತಿತ್ತು ಒಂದು ವರ್ಷದವರೆಗೆ ಅದರ ಮೌಲ್ಯವಿರುತ್ತದೆ. ಇದರಡಿ ಮೆಟ್ರೋ ಪ್ರಯಾಣಿಕರಿಗೆ ಪ್ರಯಾಣ ದರದ ಮೇಲೆ ಶಢ.೧೫ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅದನ್ನು ಇದೀಗ 3 ಸಾವಿರ ರೂಗೆ ಹೆಚ್ಚಳ ಮಾಡಲು ಮೆಟ್ರೋ ನಿಗಮ ನಿರ್ಧರಿಸಿದೆ.

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಎಸ್ಕಲೇಟರ್ ಗಳು

ಮೆಟ್ರೋದ ವಾರ್ಷಿಕ ಟಾಪ್ ಅಪ್ ಕಾರ್ಡಿನ ರೀಚಾರ್ಜ್ ಮೌಲ್ಯವನ್ನು 1500 ರೂನಿಂದ 3 ಸಾವಿರ ರೂ ಗೆ ಹೆಚ್ಚಿಸಲಿದ್ದೇವೆ, ಮೆಟ್ರೋ ನಿಲ್ದಾಣಗಳಲ್ಲಿ ನಗದು ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ಟಾಪ್ ಅಪ್ ಮಾಡುವವರಿಗೆ3 ಸಾವಿರ ರೂ ಹಾಗೂ ಆನ್ ಲೈನ್ ಮೂಲಕ ಮಾಡುವವರಿಗೆ 2500 ರೂ. ನಿಗದಿಪಡಿಸಲಾಗಿದೆ ಎಂದು ತ ಬಿಎಂಆರ್ ಸಿ ಎಲ್ ನಿರ್ವಹಣೆಯ ಕಾರ್ಯಕಾರಿ ನಿರ್ದೇಶಕ ಶಂಕರ್ ತಿಳಿಸಿದ್ದಾರೆ.

Namma Metro commuters smart card top up increase to 3k

ಮೆಟ್ರೋ ಸಂಚಾರ ವ್ಯಾಪ್ತಿಯ ವಿಸ್ತರಣೆಯನ್ನು ನೋಡಿಕೊಂಡು ಸ್ಮಾರ್ಟ್ ಕಾರ್ಡ್ ಟಾಪ್ ಅಪ್ ಮೌಲ್ಯವನ್ನು ಹೆಚ್ಚಳ ಮಾಡಲಾಗುತ್ತದೆ. 2011 ರಲ್ಲಿ ಎಂಜಿ ರಸ್ತೆ ಮತ್ತು ಬೈಯ್ಯಪ್ಪನಹಳ್ಳಿ ಮಧ್ಯೆ ಮೆಟ್ರೋ ರೈಲು ಸಂಚಾರ ಆರಂಭಗೊಂಡಾಗ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಮೆಟ್ರೋದಲ್ಲಿ ಪ್ರತಿನಿತ್ಯ ಸಂಚರಿಸುವವರು ತಿಂಗಳಲ್ಲಿ ಎರಡು ಬಾರಿ ಸರದಿ ಸಾಲಿನಲ್ಲಿ ನಿಂತು ಕಾರ್ಡುಗಳಿಗೆ ರಿಚಾರ್ಜ್ ಮಾಡಿಸಿಕೊಳ್ಳಲು ಹರಸಾಹಸ ಮಾಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BMRCL increased its smart cards top up limit upto 3 thousand to facilitate commuters. Earlier it was Rs.1,500 and now online top up too increase to Rs.2,500

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ