ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಲವೇ ಕ್ಷಣಗಳಲ್ಲಿ ನಮ್ಮಮೆಟ್ರೋ ಉದ್ಘಾಟನೆ: ಇಲ್ಲಿವೆ ಸಂಭ್ರಮದ ಚಿತ್ರಗಳು

|
Google Oneindia Kannada News

ಬೆಂಗಳೂರು, ಜೂನ್ 17: ನಮ್ಮ ಮೆಟ್ರೋ ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ವರೆಗಿನ ಗ್ರೀನ್ ಲೈನ್ ಕಾರಿಡಾರ್ ಉದ್ಘಾಟನೆಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದ್ದು, ಇಂದು (ಜೂನ್ 17) ಸಂಜೆ 6 ಗಂಟೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮೆಟ್ರೋ ಗ್ರೀನ್ ಲೈನ್ ಉದ್ಘಾಟನೆ ಮಾಡಲಿದ್ದಾರೆ. ವಿಧಾನ ಸೌಧದಲ್ಲಿ ವಿಡಿಯೋ ಲಿಂಕ್ ಮೂಲಕ ಪ್ರಣಬ್ ಮುಖರ್ಜಿ ಉದ್ಘಾಟನೆ ಮಾಡಲಿದ್ದು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಜುಭಾಯ್ ವಾಲಾ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಅನಂತಕುಮಾರ್ ಸೇರಿದಂತೆ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಬೆಂಗಳೂರಿನ ಈ ಸಂಭ್ರಮದ ದಿನಕ್ಕೆ ಸಾಕ್ಷಿಯಾಗಲಿದ್ದಾರೆ.

ನಮ್ಮ ಮೆಟ್ರೋ ಟಿಕೆಟ್ ದರ ಜೂನ್ 19 ರಿಂದ ಹೆಚ್ಚಳ ನಮ್ಮ ಮೆಟ್ರೋ ಟಿಕೆಟ್ ದರ ಜೂನ್ 19 ರಿಂದ ಹೆಚ್ಚಳ

ಈಗಾಗಲೇ ಮೆಟ್ರೋ ನಿಲ್ದಾಣಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಭಾರತದ ಅತಿ ದೊಡ್ಡ ಮೆಟ್ರೋ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾದ ಕೆಂಪೇಗೌಡ ನಿಲ್ದಾಣ(ಮೆಜೆಸ್ಟಿಕ್) ಅಂದರೆ ಮೆಟ್ರೋ ಗ್ರೀನ್ ಲೈನ್ ಮತ್ತು ಪರ್ಪಲ್ ಲೈನ್ ಗಳು ಸಂಧಿಸುವ ಇಂಟರ್ ಚೇಂಜ್ ನಿಲ್ದಾಣದ ತುಂಬ ಜನರು ಸಂಭ್ರಮದಿಂದ ಓಡಾಡುತ್ತಿದ್ದಾರೆ. ಬೆಂಗಳೂರಿನ ಉತ್ತರದ ತುದಿಯಿಂದ ದಕ್ಷಿಣದ ತುದಿಯವರೆಗೆ ಕೇವಲ 45 ನಿಮಿಷಗಳಲ್ಲಿ ತಲುಪಬಹುದಾದ ಸಾಧ್ಯತೆಯನ್ನು ಸತ್ಯವಾಗಿಸಿದ ಮೆಟ್ರೋಗೆ ಬೆಂಗಳೂರಿಗರು ನಮನ ಸಲ್ಲಿಸುತ್ತಿದ್ದಾರೆ.

ಇನ್ನು ಕೆಲವೇ ಕ್ಷಣಗಳಲ್ಲಿ ಉದ್ಘಾಟನೆಗೊಂಡು, ನಾಳೆ (ಜೂನ್ 18) ಸಂಜೆ ಲೋಕಾರ್ಪಣೆಗೊಂಡು, ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳ್ಳುವ ನಮ್ಮ ಮೆಟ್ರೋ ಗ್ರೀನ್ ಲೈನ್ ಉದ್ಘಾಟನೆಯ ಸಂಭ್ರಮ ಕೆಂಪೇಗೌಡ ಸ್ಟೇಶನ್ನಿಗೆ ಕಳೆ ನೀಡಿದೆ. ಸಂಭ್ರಮವನ್ನು ಸೂಚಿಸುವ ಕೆಲವು ಚಿತ್ರಗಳು ನಿಮಗಾಗಿ ಇಲ್ಲಿದೆ.

ಸಂಭ್ರಮದಲ್ಲಿ ಜನತೆ

ಸಂಭ್ರಮದಲ್ಲಿ ಜನತೆ

ಮೆಟ್ರೋ ಉದ್ಘಾಟನೆಯ ದಿನದಂದು ಸಂಬ್ರಮದಲ್ಲಿರುವ ಜನತೆ. ಕೆಂಪೇಗೌಡ ಇಂಟರ್ ಚೇಂಜ್ ನಲ್ಲಿ ಹಬ್ಬದ ವಾತಾವರಣ

ಸಾಲು ಸಾಲು

ಸಾಲು ಸಾಲು

ಮೆಟ್ರೋ ಟಿಕೆಟ್ ಕೌಂಟರ್ ಮುಂದೆ ನಿಂತು ಮಾಹಿತಿ ಕಲೆ ಹಾಕುತ್ತಿರುವ ಜನರು

ತುರ್ತು ಹಾದಿ

ತುರ್ತು ಹಾದಿ

ಅವಘಡ ಸಂಭವಿಸಿದರೆ ತುರ್ತು ನಿರ್ಗಮನದ ಕುರಿತು ಮಾಹಿತಿ ನೀಡುವ ದೊಡ್ಡ ಬೋರ್ಡ್

ಸಿಸಿಟಿವಿ ಕಣ್ಗಾವಲು

ಸಿಸಿಟಿವಿ ಕಣ್ಗಾವಲು

ಅಹಿತರಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ಎಲ್ಲೆಲ್ಲೂ ಸಿಸಿಟಿವಿ ಕ್ಯಾಮರಾ ಕಣ್ಗಾಲು

English summary
The most awaited Bengaluru, Namma metro will be inaugurated by president of India, Pranab Mukherjee in Vidhan Soudha, Bengaluru, today(June 17th) at 6 pm. Chief minister of Karnataka Siddaramaiah, Governor of Karnataka Vajubhai Rudabhai Vala, Union minister Venkaiah Naidu will be presented in the programme. The few pictures of India's largest metro station Kempegowda interchange (majestic) station is here for you.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X