• search

ನಮ್ಮ ಬೆಂಗಳೂರು ಪ್ರಶಸ್ತಿ ಬಗ್ಗೆ ತನಿಖೆ ಆಗಲಿ: ರೂಪಾ ಮೌದ್ಗಿಲ್

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಮಾರ್ಚ್ 26: "ವೇದಿಕೆಯಲ್ಲಿ ಪ್ರಶಸ್ತಿ ನೀಡುವವರೆಗೆ ಪ್ರಶಸ್ತಿ ವಿಜೇತರು ಯಾರು ಅಂತ ಗೊತ್ತಾಗುವುದಿಲ್ಲ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದವರೇ ಹೇಳುತ್ತಾರೆ. ಆದರೆ ಪ್ರಶಸ್ತಿ ಬಂದಿಲ್ಲ ಅನ್ನೋದು ನನಗೆ ಹೇಗೆ ಗೊತ್ತಾಗುತ್ತದೆ? ಹಾಗೆ ಗೊತ್ತಾಗುತ್ತದೆ ಅಂದರೆ ಆ ತೀರ್ಪುಗಾರರ ಬಗ್ಗೆಯೇ ಅನುಮಾನ ಬರುವುದಿಲ್ಲವೆ?" ಎಂದು ಪ್ರಶ್ನಿಸಿದರು ಐಪಿಎಸ್ ಅಧಿಕಾರಿ ರೂಪಾ ಡಿ. ಮೌದ್ಗಿಲ್.

  ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

  ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಶಸ್ತಿಗಾಗಿ ಸರಕಾರಿ ಅಧಿಕಾರಿ ಕ್ಯಾಟಗರಿಯಲ್ಲಿ ಒಬ್ಬರು ಬಹಳ ಲಾಬಿ ಮಾಡಿದರು. ಪ್ರಶಸ್ತಿ ಸಿಗುವುದಿಲ್ಲ ಅಂತ ಖಾತ್ರಿಯಾದಾಗ ತಾವು ಪ್ರಶಸ್ತಿ ನಿರಾಕರಿಸಿದ್ದಾಗಿ ಪತ್ರ ಬರೆದಿದ್ದಾರೆ. ಮತ್ತು ಕೆಲ ಆರೋಪ ಮಾಡಿದ್ದಾರೆ. ಆ ಬಗ್ಗೆ ಸ್ಪಷ್ಟನೆ ನೀಡುತ್ತಿರುವುದಾಗಿ ಹಲವು ಅಂಶಗಳನ್ನು ಪ್ರತಿಷ್ಠಾನ ನೀಡಿತ್ತು. ಆ ಪತ್ರಕ್ಕೆ ರೂಪಾ ಅವರು ಪ್ರತಿಕ್ರಿಯಿಸಿದ್ದು ಹೀಗೆ.

  ಪ್ರಶಸ್ತಿ ನಾಮಾಂಕಿತರ ಅನುಚಿತ ವರ್ತನೆ, 'ನಮ್ಮ ಬೆಂಗಳೂರು' ಸ್ಪಷ್ಟನೆ

  "ಈ ವರೆಗೆ ರಾಜೀವ್ ಚಂದ್ರಶೇಖರ್ ಅವರು ಪಕ್ಷೇತರ ರಾಜ್ಯಸಭಾ ಸದಸ್ಯರಾಗಿದ್ದರು. ಈಚೆಗೆ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಕಳೆದ ಎರಡು ವರ್ಷದಿಂದ ರಾಜ್ಯ ಸರಕಾರದ ವಿರುದ್ಧ ನಮ್ಮ ಬೆಂಗಳೂರು ಪ್ರತಿಷ್ಠಾನ ಕೆಲವು ಹೋರಾಟ ನಡೆಸಿಕೊಂಡು ಬಂದಿದೆ. ಸ್ಟೀಲ್ ಸೇತುವೆ ಬೇಡ ಇರಬಹುದು ಅಥವಾ ಕಾವೇರಿ ನೀರಿನ ಜತೆ ಚರಂಡಿ ನೀರು ಸೇರುತ್ತಿದೆ ಎಂಬುದು ಇರಬಹುದು. ಅದರ ಸರಿ-ತಪ್ಪಿನ ಬಗ್ಗೆ ನಾನು ಮಾತನಾಡಲ್ಲ" ಎಂದು ರೂಪಾ ಡಿ ಮೌದ್ಗಿಲ್ ಹೇಳಿದ್ದಾರೆ.

  ಬೆಂಗಳೂರಿನ ಆರು ಸಾಧಕರಿಗೆ ನಮ್ಮ ಬೆಂಗಳೂರು ಪ್ರಶಸ್ತಿ

  Namma Bengaluru Foundation award criteria should be probed: Roopa Moudgil

  "ನಾವು ಅಂದರೆ ಅಧಿಕಾರಿಗಳೇ ಎಷ್ಟೋ ಪ್ರಕರಣದಲ್ಲಿ ಸರಕಾರವನ್ನು ಪ್ರತಿನಿಧಿಸುತ್ತೇವೆ. ಕಳೆದ ಎರಡು ವರ್ಷದಿಂದ ನಮ್ಮ ಬೆಂಗಳೂರು ಪ್ರತಿಷ್ಠಾನವು ಸರಕಾರಿ ಅಧಿಕಾರಿ ಕ್ಯಾಟಗರಿಯಲ್ಲಿ ಯಾರಿಗೆ ಪ್ರಶಸ್ತಿ ನೀಡಿದ್ದಾರೆ ಗಮನಿಸಿ. ಇದು ತಿಳಿದುಕೊಳ್ಳುವುದಕ್ಕೆ ರಾಕೆಟ್ ಸೈನ್ಸ್ ಬೇಡ. ಸರಕಾರದ ಪರ ಕೋರ್ಟ್ ಗೆ ತೆರಳುವ ಅಧಿಕಾರಿಗಳಿಗೇ ಪ್ರಶಸ್ತಿ ನೀಡುವ ಔಚಿತ್ಯ ಏನು? ಈ ಬಗ್ಗೆ ತನಿಖೆ ಆಗಬೇಕು" ಎಂದು ರೂಪಾ ಮೌದ್ಗಿಲ್ ಆಗ್ರಹಿಸಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Namma Bengaluru Foundation (NBF) award criteria for government employee category should be probed, urges IPS officer Roopa D Moudgil, while reacting to the allegation made by NBF against her.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more