ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಡಿಕೆ ಹುಟ್ಟುಹಬ್ಬದಂದು ಅಪ್ಪಾಜಿ ಕ್ಯಾಂಟೀನ್‌ ಆರಂಭ

|
Google Oneindia Kannada News

ಬೆಂಗಳೂರು, ಡಿಸೆಂಬರ್ 15 : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಶನಿವಾರ ಜೆಡಿಎಸ್‌ ಕಚೇರಿಯಲ್ಲಿ ಅಪ್ಪಾಜಿ ಕ್ಯಾಂಟೀನ್‌ ಆರಂಭವಾಗಲಿದೆ. ರಾಗಿ ಮುದ್ದೆಗೆ ತುಪ್ಪ ಹಾಕಿ ಕೊಡುವುದು ಕ್ಯಾಂಟೀನ್ ಉದ್ಘಾಟನೆಯ ವಿಶೇಷ ವಾಗಿದೆ.

ಮಂಡ್ಯದಲ್ಲಿ ಎರಡು ನಮ್ಮ ಅಪ್ಪಾಜಿ ಕ್ಯಾಂಟೀನ್ ಆರಂಭಮಂಡ್ಯದಲ್ಲಿ ಎರಡು ನಮ್ಮ ಅಪ್ಪಾಜಿ ಕ್ಯಾಂಟೀನ್ ಆರಂಭ

ಡಿ.16ರ ಶನಿವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 59ನೇ ಹುಟ್ಟುಹಬ್ಬ. ಹುಟ್ಟು ಹಬ್ಬದ ಪ್ರಯುಕ್ತ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್‌ ಆರಂಭವಾಗಲಿದೆ.

Namma appaji canteen to open in JP Bhavan Bengaluru

ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ಡಿ.16ರಂದು ನಮ್ಮ ಅಪ್ಪಾಜಿ ಕ್ಯಾಂಟೀನ್ ಅನ್ನು ಜೆಡಿಎಸ್ ಕಚೇರಿಯಲ್ಲಿ ಆರಂಭಿಸುವುದಾಗಿ ಹೇಳಿದ್ದರು.

ಟಿ.ಎ.ಶರವಣ ಸಂದರ್ಶನಟಿ.ಎ.ಶರವಣ ಸಂದರ್ಶನ

ಬೆಂಗಳೂರು ನಗರದಲ್ಲಿ ಉದ್ಘಾಟನೆಯಾಗುತ್ತಿರುವ 2ನೇ ನಮ್ಮ ಅಪ್ಪಾಜಿ ಕ್ಯಾಂಟೀನ್ ಇದಾಗಿದೆ. ಹನುಮಂತನಗರದಲ್ಲಿ ಮೊದಲ ಕ್ಯಾಂಟೀನ್ ದೇವೇಗೌಡರ ಹುಟ್ಟು ಹಬ್ಬದ ದಿನ ಉದ್ಘಾಟನೆಯಾಗಿತ್ತು.

ಬೆಂಗಳೂರು ನಗರ ಹೊರತು ಪಡಿಸಿ ಮಂಡ್ಯದಲ್ಲಿ ಎರಡು ಕ್ಯಾಂಟೀನ್‌ಗಳು ಆರಂಭವಾಗಿವೆ. '2018ರ ಜನವರಿಯಲ್ಲಿ ರಾಯಚೂರಿನಲ್ಲಿ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತದೆ' ಎಂದು ಟಿ.ಎ.ಶರವಣ ಹೇಳಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಜೆ.ಪಿ.ಭವನದಲ್ಲಿ ಶನಿವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ಹೊರವಲಯದಲ್ಲಿ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ.

ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮಗಳು

ಡಿಸೆಂಬರ್ 16ರಂದು ಎಚ್.ಡಿ.ಕುಮಾರಸ್ವಾಮಿ ಅವರ ಕಾರ್ಯಕ್ರಮಗಳು ಇಂತಿವೆ.

* ಬೆಳಗ್ಗೆ 6 ಗಂಟೆ ರಾಜರಾಜೇಶ್ವರಿ ದೇವಾಲಯಕ್ಕೆ ಭೇಟಿ
* 6.45ಕ್ಕೆ ದೇವೇಗೌಡರ ನಿವಾಸಕ್ಕೆ ಭೇಟಿ
* 7.45ಕ್ಕೆ ಆದಿ ಚುಂಚನಗಿರಿ ಮಠಕ್ಕೆ ಭೇಟಿ
* 8.45ಕ್ಕೆ ಪಕ್ಷದ ಕಚೇರಿ ಜೆ.ಪಿ.ಭವನಕ್ಕೆ ಆಗಮನ
* 9.45ಕ್ಕೆ ಜೆ.ಪಿ.ನಗರ ನಿವಾಸ ಭೇಟಿ
* 12 ಗಂಟೆ ಕುರುಕ್ಷೇತ್ರ ಸಿನಿಮಾ ಟೀಸರ್ ಬಿಡುಗಡೆ
* 3 ಗಂಟೆ ರಾಮನಗರ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ

English summary
On the occasion of JDS state president H.D.Kumaraswamy Namma appaji canteen to open in Jayaprakash Narayan (JP) Bhavan, JDS office in Seshadripuram, Bengaluru on December 16, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X