ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೋಜನ ಪ್ರಿಯರಿಗೆ ಬಾಯಿ ಚಪ್ಪರಿಸುವ ಸುದ್ದಿ: ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಊಟದ ಸ್ಪರ್ಧೆ

|
Google Oneindia Kannada News

Recommended Video

ಅಪ್ಪಾಜಿ ಕ್ಯಾಂಟೀನ್ ಗೆ ಒಂದು ವರ್ಷ ತುಂಬಿದ ಸಂಭ್ರಮಾಚರಣೆ | ಭೋಜನ ಪ್ರಿಯರಿಗೆ ಸಿಹಿ ಸುದ್ದಿ | Oneindia Kannada

ಬೆಂಗಳೂರು, ಆಗಸ್ಟ್ 1: ಉತ್ತರ ಕರ್ನಾಟಕದ ಜೋಳದ ರೊಟ್ಟಿ, ದಕ್ಷಿಣ ಕರ್ನಾಟಕದ ಮುದ್ದೆ... ಯಾವುದು ಬೇಕು? ಎಷ್ಟು ಬೇಕು? ನಿಮ್ಮಿಂದ ಎಷ್ಟು ತಿನ್ನಲು ಸಾಧ್ಯವೋ ತಿಂದು ತೋರಿಸಿ. ಗೆದ್ದರೆ ಸಿಗುವ ಬಹುಮಾನ ಕೂಡ ಸಣ್ಣದ್ದೇನಲ್ಲ.

ಭೋಜನ ಪ್ರಿಯರಿಗೆ ಹೀಗೊಂದು ಅಪೂರ್ವ ಸ್ಪರ್ಧೆಯ ಆಹ್ವಾನವನ್ನು 'ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್' ನೀಡಿದೆ.

ನಾಟಿ ಕೋಳಿ ಸಾಂಬಾರ್ ನಲ್ಲಿ ಮುದ್ದೆ ನುಂಗಿ ಗೆದ್ದ ಮೀಸೆ ಈರೇಗೌಡ ನಾಟಿ ಕೋಳಿ ಸಾಂಬಾರ್ ನಲ್ಲಿ ಮುದ್ದೆ ನುಂಗಿ ಗೆದ್ದ ಮೀಸೆ ಈರೇಗೌಡ

ಅಪ್ಪಾಜಿ ಕ್ಯಾಂಟೀನ್‌ಗೆ ಒಂದು ವರ್ಷ ತುಂಬಿದ ಸಂಭ್ರಮಾಚರಣೆಗಾಗಿ ಆಗಸ್ಟ್ 4ರ ಶನಿವಾರ ಈ ಊಟದ ಸ್ಪರ್ಧೆ ಆಯೋಜಿಸಲಾಗಿದೆ.

namma appaji canteen food eating competition anniversary

ಬೆಂಗಳೂರಿನ ಹನುಮಂತನಗರದ 50 ಅಡಿ ರಸ್ತೆಯಲ್ಲಿರುವ 'ನಮ್ಮ ಅಪ್ಪಾಜಿ ಕ್ಯಾಂಟೀನ್‌'ನಲ್ಲಿ ಸ್ಪರ್ಧೆ ನಡೆಯಲಿದ್ದು, ರಾಗಿಮುದ್ದೆ, ಬಸ್ಸಾರು, ಜೋಳದ ರೊಟ್ಟಿ ಮತ್ತು ಎಣ್ಣೆಗಾಯಿ ಜೋಡಿಯ ಭರ್ಜರಿ ಊಟದ ಪೈಪೋಟಿ ನಡೆಯಲಿದೆ.

ಗೆದ್ದವರಿಗೆ ಇಲ್ಲಿ ಭರ್ಜರಿ ಬಹುಮಾನವನ್ನೂ ನೀಡುವುದಾಗಿ ಘೋಷಿಸಲಾಗಿದೆ.

ಆಯೋಜಕರು ನೀಡುವ ಸಮಯದ ಮಿತಿಯೊಳಗೆ ಎಷ್ಟು ಮುದ್ದೆ ಅಥವಾ ರೊಟ್ಟಿ ತಿನ್ನುತ್ತಾರೆ ಎನ್ನುವುದರ ಮೇಲೆ ವಿಜೇತರ ನಿರ್ಧಾರವಾಗುತ್ತದೆ.

ಹೀಗೆ ಗೆದ್ದವರಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ಅಪ್ಪಾಜಿ ಕ್ಯಾಂಟೀನ್‌ನಲ್ಲಿ 30 ದಿನಗಳ ಕಾಲ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟ ಉಚಿತವಾಗಿ ಸಿಗಲಿದೆ.

ಪೌರಕಾರ್ಮಿಕರಿಗೆ ಇಸ್ಕಾನ್‌ ಬದಲಾಗಿ ಇಂದಿರಾ ಕ್ಯಾಂಟೀನ್‌ ಊಟಪೌರಕಾರ್ಮಿಕರಿಗೆ ಇಸ್ಕಾನ್‌ ಬದಲಾಗಿ ಇಂದಿರಾ ಕ್ಯಾಂಟೀನ್‌ ಊಟ

ಎರಡನೆಯ ಬಹುಮಾನ ಪಡೆದವರಿಗೆ 20 ಹಾಗೂ ಮೂರನೇ ಬಹುಮಾನ ಪಡೆದವರಿಗೆ 10 ದಿನ ಉಪಾಹಾರ ಮತ್ತು ಮಧ್ಯಾಹ್ನದ ಭೋಜನ ಉಚಿತವಾಗಿ ಸಿಗಲಿದೆ.

ಹಾಗೆಂದು ಎಲ್ಲರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. ಮೊದಲು ನೋಂದಾಯಿಸಿದ 10 ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

English summary
Namma Deve Gowda Appaji Canteen is celebrating its one year success on this Saturday (August 4) at Hanumantha Nagar's canteen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X