ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಅಕ್ಟೋಬರ್ 12 : ನಾಗವಾರ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪರ್ಕಿಸುವ ನಮ್ಮ ಮೆಟ್ರೋ ರೈಲು ಮಾರ್ಗದಲ್ಲಿ ಬದಲಾವಣೆಯಾಗಲಿದೆ. 29.62 ಕಿ.ಮೀ. ಉದ್ದದ ಮಾರ್ಗವಿದಾಗಿದೆ.

  ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮೂಲ ಯೋಜನೆಯ ಮಾರ್ಗವನ್ನು ಬದಲಾವಣೆ ಮಾಡಲು ಮುಂದಾಗಿದೆ. ಹೆಬ್ಬಾಳ ಮೂಲಕ ನೂತನ ಮಾರ್ಗ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ ಎಂದು ನಕ್ಷೆ ತಯಾರಿಸಲಾಗಿದೆ.

  ನಮ್ಮ ಮೆಟ್ರೋ ಟಿಕೆಟ್ ಶೀಘ್ರ ಮೊಬೈಲ್‌ ಫೋನ್‌ನಲ್ಲೇ ಲಭ್ಯ

  ಉದ್ದೇಶಿತ ಮಾರ್ಗದಲ್ಲಿ ಬೆಂಗಳೂರು-ಮಂಗಳೂರು ಪೆಟ್ರೋಲಿಯಂ ಪೈಪ್ ಲೈನ್ ಹಾದು ಹೋಗಿದೆ. ಆದ್ದರಿಂದ, ಬಿಎಂಆರ್‌ಸಿಎಲ್ ಮಾರ್ಗವನ್ನು ಬದಲಾವಣೆ ಮಾಡಲಿದೆ. ನಮ್ಮ ಮೆಟ್ರೋ ಫೇಸ್‌2ಬಿ 29.62 ಕಿ.ಮೀ. ಯೋಜನೆಗೆ 2017ರ ಡಿಸೆಂಬರ್ 11ರಂದು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ.

  ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಸಂಚಾರಕ್ಕೆ 2 ವರ್ಷ ಕಾಯ್ಬೇಕಂತೆ

  5,950 ಕೋಟಿ ವೆಚ್ಚದ ಈ ನಮ್ಮ ಮೆಟ್ರೋ ಮಾರ್ಗದಲ್ಲಿ 6 ನಿಲ್ದಾಣಗಳು ಬರಲಿವೆ. ಪ್ರಮುಖವಾಗಿ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸೇವೆಯನ್ನು ಈ ಮಾರ್ಗ ಒದಗಿಸುವುದರಿಂದ ಈ ಯೋಜನೆ ಬಹಳ ಮಹತ್ವ ಪಡೆದಿದೆ...

  ಪ್ರಯಾಣಿಕರ ಮತ್ತೊಂದು ದಾಖಲೆ ಬರೆದ ನಮ್ಮ ಮೆಟ್ರೋ

   ಯೋಜನೆಯ ಮೊದಲ ಹಂತ

  ಯೋಜನೆಯ ಮೊದಲ ಹಂತ

  ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಡುವಿನ 29.62 ಕಿ.ಮೀ.ಮಾರ್ಗ ನಾಗವಾರದಲ್ಲಿ ಆರಂಭವಾಗಲಿದೆ. ಮೊದಲ ನಕ್ಷೆಯಂತೆ ನಾಗವಾರ-ಆರ್.ಕೆ.ಹೆಗ್ಡೆ ನಗರ-ಥಣಿಸಂದ್ರ ಮುಖ್ಯರಸ್ತೆ-ಜಕ್ಕೂರು ಫ್ಲೈಯಿಂಗ್ ಸ್ಕೂಲ್-ಬಳ್ಳಾರಿ ರಸ್ತೆ ಮೂಲಕ ಮಾರ್ಗ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು.

  ಆದರೆ, ಈಗ ಬಿಎಂಆರ್‌ಸಿಎಲ್ ಮಾರ್ಗವನ್ನು ಬದಲಾವಣೆ ಮಾಡಲಿದೆ. ಮಾರ್ಗ ಬದಲಾವಣೆಯಾದರೂ ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣದ ನಡುವಿನ ದೂರ ಹೆಚ್ಚಾಗುವುದಿಲ್ಲ.

  ಮಾರ್ಗ ಬದಲಾವಣೆ ಹೇಗೆ?

  ಮಾರ್ಗ ಬದಲಾವಣೆ ಹೇಗೆ?

  ಬಿಎಂಆರ್‌ಸಿಎಲ್ ಹೇಳುವ ಪ್ರಕಾರ ಮಾರ್ಗ ಬದಲಾವಣೆ ಕೆಲವು ಭಾಗಗಳಲ್ಲಿ ಮಾತ್ರ ಆಗಲಿದೆ. ಹೊಸ ಮಾರ್ಗದ ನಕ್ಷೆ ಪ್ರಕಾರ ನಾಗವಾರ-ರಿಂಗ್‌ರೋಡ್-ಹೆಬ್ಬಾಳ-ಬಳ್ಳಾರಿ ಮುಖ್ಯ ರಸ್ತೆ-ಜಕ್ಕೂರು ಫ್ಲೈಯಿಂಗ್ ಸ್ಟೇಷನ್ ತನಕ ಮಾರ್ಗ ಬದಲಾಗಲಿದ್ದು, ಅಲ್ಲಿಂದ ಹಳೇ ನಕ್ಷೆಯ ಮೂಲಕವೇ ಮೆಟ್ರೋ ಮಾರ್ಗ ಸಾಗಲಿದೆ.

  ಒಟ್ಟು ಎಷ್ಟು ನಿಲ್ದಾಣಗಳು

  ಒಟ್ಟು ಎಷ್ಟು ನಿಲ್ದಾಣಗಳು

  ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣದ ನಡುವೆ ಆರು ನಮ್ಮ ಮೆಟ್ರೋ ನಿಲ್ದಾಣಗಳು ಬರಲಿವೆ. ಅವುಗಳಲ್ಲಿ ಎರಡು ನಿಲ್ದಾಣಗಳು ವಿಮಾನ ನಿಲ್ದಾಣದ ಆವರಣದಲ್ಲಿ ಇರಲಿವೆ. ಆರ್.ಕೆ.ಹೆಗಡೆ ನಗರ, ಜಕ್ಕೂರು, ಯಲಹಂಕ (ಕೋಗಿಲು ಕ್ರಾಸ್), ಚಿಕ್ಕಜಾಲ ನಿಲ್ದಾಣಗಳನ್ನು ಮಾರ್ಗ ಹೊಂದಿದೆ.

  ಮಾರ್ಗ ಬದಲಾವಣೆ ಏಕೆ?

  ಮಾರ್ಗ ಬದಲಾವಣೆ ಏಕೆ?

  ಬಿಎಂಆರ್‌ಸಿಎಲ್ ಮೊದಲು ತಯಾರಿಸಿದ ನಕ್ಷೆ ಪ್ರಕಾರ ಮಾರ್ಗ ನಿರ್ಮಿಸಲು ಅಡೆ-ತಡೆಗಳಿವೆ. ಬೆಂಗಳೂರು-ಮಂಗಳೂರು ಪೆಟ್ರೋಲಿಯಂ ಪೈಪ್ ಲೈನ್ ಹೆಗಡೆ ನಗರದ ಮೂಲಕ ಹಾದು ಹೋಗಲಿದೆ. ಆದ್ದರಿಂದ, ಅನಿವಾರ್ಯವಾಗಿ ಮಾರ್ಗ ಬದಲಾವಣೆ ಮಾಡಬೇಕಾಗಿದೆ. ಪೈಪ್ ಲೈನ್ 9 ಮೀಟರ್ ಅಕ್ಕಪಕ್ಕ ಯಾವುದೇ ಕಾಮಗಾರಿಯನ್ನು ಕೈಗೊಳ್ಳುವುದನ್ನ ನಿಷೇಧಿಸಲಾಗಿದೆ.

  ಈ ಮಾರ್ಗದಲ್ಲಿ ದೊಡ್ಡ ನೀರಿನ ಪೈಪ್‌ ಲೈನ್ ಸಹ ಇತ್ತು. ಅದನ್ನು ಸ್ಥಳಾಂತರ ಮಾಡಲು ಚಿಂತಿಸಲಾಗಿತ್ತು. ಆದರೆ, ಪೆಟ್ರೋಲಿಯಂ ಪೈಪ್ ಲೈನ್ ಸ್ಥಳಾಂತರ ಸಾಧ್ಯವಿರಲಿಲ್ಲ. ಆದ್ದರಿಂದ, ಮಾರ್ಗ ಬದಲಾವಣೆ ಮಾಡಲಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Namma Metro line proposed from Nagawara to Kempegowda International Airport (KIA) is likely to be realigned. Rs 5950 crore line was approved by the Karnataka government in 2017. The metro line have six stations.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more