ನೀತಿ ಸಂಹಿತೆ: ನಾಗವಾರ-ಗೊಟ್ಟಿಗೆರೆ ಮೆಟ್ರೋ ಸುರಂಗ ಮಾರ್ಗ ವಿಳಂಬ

Posted By: Nayana
Subscribe to Oneindia Kannada

ಳೂರು, ಏಪ್ರಿಲ್ 07: ನಮ್ಮ ಮೆಟ್ರೋ ಎರಡನೇ ಹಂತದ ಗೊಟ್ಟಿಗೆರೆ-ನಾಗವಾರ ಮಾರ್ಗದ ಕಾಮಗಾರಿ ಆರಂಭಕ್ಕೆ ವಿಘ್ನ ಎದುರಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸುರಂಗ ಮಾರ್ಗಕ್ಕೆ 2ನೇ ಬಾರಿ ಟೆಂಡರ್ ಕರೆಯಲು ತಡವಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಗೊಟ್ಟಿಗೆರೆ -ನಾಗವಾರದ 21 ಕಿ.ಮೀ ಉದ್ದದ ಮಾರ್ಗದಲ್ಲಿ ಡೇರಿ ವೃತ್ತ ಮತ್ತು ನಾಗವಾರ ನಡುವಿನ 13ಕಿ.ಮೀ ಸುರಂಗ ಮಾರ್ಗಕ್ಕೆ 5,047ಕೋಟಿ ರೂ. ಅಂದಾಜು ಮೊತ್ತದ ಟೆಂಡರ್ ಕರೆಯಲಾಗಿತ್ತು. ಟೆಂಡರ್ ನಲ್ಲಿ ಭಾಗವಹಿಸಿದ್ದ ಕಂಪನಿಗಳು ಅಂದಾಜು ಮೊತ್ತಕ್ಕಿಂತ ಶೇ.60 ರಷ್ಟು ಅಧಿಕ ಮೊತ್ತವನ್ನು ಉಲ್ಲೇಖಿಸಿದ್ದವು. ಇದರಿಂದ ಅನಿವಾರ್ಯವಾಗಿ ಟೆಂಡರ್ ರದ್ದುಗೊಳಿಸಲಾಗಿತ್ತು.

ನಮ್ಮ ಮೆಟ್ರೋ:ಏ.15ರಿಂದ ಆರು ಬೋಗಿ ರೈಲು ಸಂಚಾರ ಆರಂಭ

ಆದರೆ ಈಗ ನೀತಿ ಸಂಹಿತೆ ಜಾರಿಯಲ್ಲಿರುವದಿಂದ ಮರು ಟೆಂಡರ್ ಕರೆಯುವುದು ತಡವಾಗಿದೆ. ಚುನಾವಣೆ ಬಳಿಕವೇ ಕರೆಯಲಾಗುವುದು ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಬಾರಿ ಕರೆದ ಟೆಂಡರ್ ನಲ್ಲಿ ಮಾಡಿದ್ದ ದೋಷಗಳನ್ನು ಸರಿಪಡಿಸಿಕೊಂಡಿದ್ದ ನಿಗಮ, ಯೋಜನಾ ವೆಚ್ಚಕ್ಕೆ ಕಡಿವಾಣ ಹಾಕಲು ಸಿದ್ಧತೆ ಮಾಡಿಕೊಂಡಿದೆ.

Nagavara-Gottigere metro tunnel lane work will delay

ಸುರಂಗ ಮಾರ್ಗದ ನಿರ್ಮಾಣಕ್ಕಿಂತ ಹೆಚ್ಚು ವೆಚ್ಚದಾಯಕ. ಹೀಗಾಗಿ ಸುರಂಗ ಮಾರ್ಗದ ಉದ್ದವನ್ನು ಕಡಿಮೆ ಮಾಡಿ ಎತ್ತರಿಸಿದ ಮಾರ್ಗದ ಉದ್ದವನ್ನು ಹೆಚ್ಚಿಸಲು ಯೋಜನೆಯನ್ನು ಪರಿಷ್ಕರಣೆಗೊಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nagavara -Gottigere metro tunnel work will delay, because of election code of conduct, BMRCL are not call the tender because of election code of conduct in the state.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ