ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಕೆಟ್ ಕೈತಪ್ಪಲು ಸಚಿವ ಅನಂತಕುಮಾರ್ ಕಾರಣ: ಎನ್,ಆರ್. ರಮೇಶ್

|
Google Oneindia Kannada News

ಬೆಂಗಳೂರು, ಏಪ್ರಿಲ್ 09: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್.ಆರ್. ರಮೇಶ್, ಕೇಂದ್ರ ಸಚಿವ ಅನಂತಕುಮಾರ್ ಅವರಿಂದಲೇ ತಮಗೆ ಟಿಕೆಟ್ ಕೈತಪ್ಪಿದೆ ಎಂದು ಸೋಮವಾರ ಆರೋಪಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಭಾನುವಾರ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಉದ್ಯಮಿ ಉದಯ ಗರುಡಾಚಾರ್ ಅವರನ್ನು ಹೆಸರಿಸಲಾಗಿದೆ. ಇದು ಎನ್.ಆರ್, ರಮೇಶ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಕೈ ತಪ್ಪಿದ ಆರ್.ಆರ್.ನಗರದ ಟಿಕೆಟ್, ಜಿ.ಎಚ್.ರಾಮಚಂದ್ರ ಜೆಡಿಎಸ್‌ಗೆ?ಕೈ ತಪ್ಪಿದ ಆರ್.ಆರ್.ನಗರದ ಟಿಕೆಟ್, ಜಿ.ಎಚ್.ರಾಮಚಂದ್ರ ಜೆಡಿಎಸ್‌ಗೆ?

ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಮಗೆ ಟಿಕೆಟ್ ಸಿಗದಿರಲು ಅನಂತ್ ಕುಮಾರ್ ಅವರ ಹೊರತು ಬೇರಾರೂ ಕಾರಣರಲ್ಲ ಎಂದು ದೂರಿದರು.

ಎರಡು ಕೋಟಿ ರೂಪಾಯಿಗೆ ಟಿಕೆಟ್ ಮಾರಾಟವಾಗಿದೆ ಎಂದು ಅವರು ಆರೋಪಿಸಿದರು.

N.R. Ramesh blame ananth kumar for ticket loss

ಪಾಲಿಕೆ ಸದಸ್ಯನಾಗಿ ಸಾಕಷ್ಟು ಯೆಡಿಯೂರು ವಾರ್ಡ್‌ನಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಪಕ್ಷವನ್ನು ಬಲವಾಗಿ ಸಂಘಟಿಸಿದ್ದೇನೆ. ಪಕ್ಷ ನಡೆಸಿದ ಸಮೀಕ್ಷೆಯಲ್ಲಿ ನನ್ನ ಪರವಾಗಿ ಅಭಿಪ್ರಾಯ ವ್ಯಕ್ತವಾಗಿತ್ತು. ರಾಜ್ಯಾಧ್ಯಕ್ಷರು ಮತ್ತು ಮುಖಂಡರಲ್ಲಿ ನನ್ನ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಆದರೆ, ಅನಂತಕುಮಾರ್ ಟಿಕೆಟ್ ತಪ್ಪಿಸಿದ್ದಾರೆ. ಇದಕ್ಕೆ ಅವರೇ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಉದ್ಯಮಿ ಉದಯ ಗರುಡಾಚಾರ್ ಕಳೆದ ಬಾರಿ ಸ್ಪರ್ಧಿಸಿ ಸುಮಾರು 18,000 ಮತಗಳಿಂದ ಸೋತಿದ್ದಾರೆ. ಭ್ರಷ್ಟ ಉದ್ಯಮಿಯಾಗಿರುವ ಅವರಿಗೆ ಟಿಕೆಟ್ ನೀಡಿರುವುದು ಸರಿಯಲ್ಲ ಎಂದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ನಗರದಲ್ಲಿ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಲು ಅವಕಾಶ ಇದ್ದದ್ದು ಚಿಕ್ಕಪೇಟೆ ಮತ್ತು ಗೋವಿಂದರಾಜನಗರ ಕ್ಷೇತ್ರಗಳಲ್ಲಿ ಮಾತ್ರ. ಅವುಗಳನ್ನೂ ಅನಂತಕುಮಾರ್ ತಪ್ಪಿಸಿದ್ದಾರೆ. ಇದರ ಪರಿಣಾಮವನ್ನು ಮುಂದಿನ ಲೋಕಸಭೆ ಚುನಾವಣೆ ವೇಳೆ ಅನಂತಕುಮಾರ್ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

N.R. Ramesh blame ananth kumar for ticket loss

ಭ್ರಷ್ಟಾಚಾರಾದ ವಿರುದ್ಧದ ನನ್ನ ಹೋರಾಟಗಳನ್ನು ನೋಡಿರುವ ಶಾಸಕ ಆರ್. ಅಶೋಕ್ ಅವರು ನನ್ನ ಬೆಂಬಲಕ್ಕೆ ನಿಲ್ಲಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಕ್ತಾರ ಹುದ್ದೆಗೆ ರಾಜೀನಾಮೆ:
ಟಿಕೆಟ್ ಕೈತಪ್ಪಿದ ಬೆನ್ನಲೇ ಬೇಸರಗೊಂಡಿರುವ ರಮೇಶ್, ಬಿಜೆಪಿಯ ಬೆಂಗಳೂರು ನಗರ ಮತ್ತು ಬೆಂಗಳೂರು ನಗರ ಜಿಲ್ಲೆ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರಿನ ಪುರಾತನ ಬಡಾವಣೆ ಚಿಕ್ಕಪೇಟೆ ಪರಿಚಯ ಬೆಂಗಳೂರಿನ ಪುರಾತನ ಬಡಾವಣೆ ಚಿಕ್ಕಪೇಟೆ ಪರಿಚಯ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ 76ಕ್ಕೂ ಅಧಿಕ ಹಗರಣಗಳನ್ನು ದಾಖಲೆಗಳ ಸಹಿತ ಬಯಲಿಗೆಳೆದಿದ್ದೇನೆ. ಸಾವಿರಾರು ಯುವಕರ ಪಡೆಯನ್ನು ಕಟ್ಟಿ ಸಂಘಟನೆ, ಅಭಿವೃದ್ಧಿ ಮತ್ತು ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೇನೆ.

ಇತ್ತೀಚೆಗೆ ಪಕ್ಷ ಬಿಡುಗಡೆ ಮಾಡಿದ ಕಾಂಗ್ರೆಸ್‌ ಸರ್ಕಾರ ವಿರುದ್ಧದ 'ಚಾರ್ಜ್‌ ಷೀಟ್' ಪುಸ್ತಕದಲ್ಲಿ ನಾನು ಬಯಲಿಗೆ ಎಳೆದ ಹಗರಣಗಳ ಮಾಹಿತಿಯನ್ನೇ ನೀಡಲಾಗಿದೆ.

ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾಡಿರುವ ಸಂಚಿನಿಂದ ನನಗೆ ಅನ್ಯಾಯವಾಗಿದೆ. ಆದ್ದರಿಂದ ಬೆಂಗಳೂರು ನಗರ ಮತ್ತು ನಗರ ಜಿಲ್ಲೆಯ ವಕ್ತಾರನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಮುಂದಿನ ನಡೆಯೇನು?:
ಸದ್ಯ ಪಕ್ಷ ತೊರೆಯುವುದಿಲ್ಲ. ಪಕ್ಷದಲ್ಲಿ ನನಗೆ ಬೆಂಬಲ ನೀಡಿದ ಮುಖಂಡರೊಂದಿಗೆ ಮಾತುಕತೆ ನಡೆಸಲಾಗುವುದು. ವಿವಿಧ ಜಿಲ್ಲೆಗಳಿಂದ ಬರುವ ಬೆಂಬಲಿಗರೊಂದಿಗೆ ಸಭೆ ನಡೆಸಿ ಬುಧವಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ರಮೇಶ್ ತಿಳಿಸಿದರು.

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಈಗಾಗಲೇ ಸಂದೇಶ ನೀಡಿದ್ದೇನೆ. ನನ್ನ ಪರವಾಗಿ ಕೆಲವು ಮುಖಂಡರು ರಾಷ್ಟ್ರೀಯ ಮುಖಂಡರೊಂದಿಗೆ ಮಾತನಾಡಲಿದ್ದಾರೆ. ಇಲ್ಲಿಯೇ ಟಿಕೆಟ್ ಸಿಗುವ ಬಗ್ಗೆ ಆಶಾವಾದವಿದೆ ಎಂದು ಹೇಳಿದರು.

ಅನಂತಕುಮಾರ್ ವಿರುದ್ಧ ಆಕ್ರೋಶ:
ರಮೇಶ್ ಅವರ ಮನೆ ಮುಂದೆ ಬೆಳಿಗ್ಗೆಯಿಂದಲೂ ನೆರೆದಿದ್ದ ನೂರಾರು ಕಾರ್ಯಕರ್ತರು ಸಚಿವ ಅನಂತಕುಮಾರ್ ಮತ್ತು ಶಾಸಕ ಆರ್. ಅಶೋಕ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ಎನ್.ಆರ್. ರಮೇಶ್ ಅವರಿಗೆ ಅನ್ಯಾಯ ಮಾಡಲಾಗಿದೆ. ಅವರಿಗೇ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.

English summary
bjp bangalore city and bangalore district spokeperson N.R.ramesh blamed central minister ananth kumar for not getting chikpet assembly constituency
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X