ರಸ್ತೆ ವಿಸ್ತರಣೆಗಾಗಿ ಬೆಂಗಳೂರು ಅರಮನೆ ಭೂಮಿ ವಶಕ್ಕೆ ನಿರ್ಧಾರ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್, 25: ಬಳ್ಳಾರಿ ರಸ್ತೆಯಲ್ಲಿರುವ ಮೇಖ್ರಿ ವೃತ್ತದಲ್ಲಿ ನಿತ್ಯ ಉಂಟಾಗುವ ಟ್ರಾಫಿಕ್ ಕಿರಿಕಿರಿಗೆ ಶೀಘ್ರ ಮುಕ್ತಿ ಸಿಗಲಿದೆ. ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಅರಮನೆ ಮೈದಾನದ 12 ಎಕರೆ ಪ್ರದೇಶವನ್ನು ವಶಕ್ಕೆ ಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.

ಅಭಿವೃದ್ಧಿ ಯೋಜನೆಗಳಿಗಾಗಿ ಆಸ್ತಿ ವರ್ಗಾವಣೆ (ಟಿಡಿಆರ್) ಯೋಜನೆಯಡಿ ಮೈಸೂರು ರಾಜವಂಶಸ್ಥರಿಗೆ ಸೇರಿದ ಅರಮನೆ ಮೈದಾನದ 12 ಎಕರೆ ವಶಕ್ಕೆ ಪಡೆಯುತ್ತಿದ್ದೆವೆ, ಇದರಿಂದ ಪ್ರಮುಖ ಎರಡು ರಸ್ತೆಗಳ ವಿಸ್ತರಣೆಗೆ ಸಹಕಾರಿಯಾಗಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

Mysuru royal family has agreed to part with 12 acres for road widening

ಈ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸಿದ ಜಾರ್ಜ್ ಅವರು "ಬಿಡಿಎ ಜಂಕ್ಷನ್ ನಿಂದ ಮೇಖ್ರಿ ವೃತ್ತ ಮತ್ತು ದಂಡು ಪ್ರದೇಶದಿಂದ ಮೇಖ್ರಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ವಿಸ್ತರಿಸಲಾಗುವುದು" ಎಂದು ಅವರು ತಿಳಿಸಿದರು

ಈ ಕುರಿತು 2016 ನವೆಂಬರ್ 11ರಂದು ರಸ್ತೆ ವಿಸ್ತರಣೆಗಾಗಿ ಅಗತ್ಯವಿರುವ ಭೂಮಿಯನ್ನು ಟಿಡಿಎಸ್ ಮೂಲಕ ವಶಕ್ಕೆ ಪಡೆಯಲು ಸುಪ್ರೀಂಕೋರ್ಟ್ ಸಹ ಬಿಬಿಎಂಪಿಗೆ ಆದೇಶ ನೀಡಿದೆ ಎಂದು ಅವರು ಹೇಳಿದರು.

Mysuru royal family has agreed to part with 12 acres for road widening

ಜಯಮಹಲ್ ರಸ್ತೆಯಲ್ಲಿ ದಿನನಿತ್ಯ ಉಂಟಾಗುವ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕಾಗಿ ಒಟ್ಟು 15 ಎಕರೆ ಭೂಮಿ ವಶಪಡಿಸಿಕೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಸಹ ನಿರ್ದೇಶನ ನೀಡಿದೆ ಎಂದು ಅವರು ತಿಳಿಸಿದರು.

ರಸ್ತೆ ಅಗಲೀಕರಣಕ್ಕಾಗಿ ಭೂಮಿ ಬಿಟ್ಟುಕೊಡಲು ಮೈಸೂರು ರಾಜವಂಶಸ್ಥರು ಸಹ ಸಮ್ಮತಿ ಸೂಚಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The traffic-prone Mekhri circle and other parts of the city near it may now get a breather.The Mysuru royal family has agreed to part with 12 acres of the Bengaluru palace grounds for a road widening project.
Please Wait while comments are loading...