ಮೈಸೂರು ರಸ್ತೆ ಮೆಟ್ರೋ ನಿಲ್ದಾಣದ 'ಸಿ' ಪ್ರವೇಶ ದ್ವಾರ ಮುಚ್ಚಲಾಗಿದೆ

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 26 : ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ. ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣದ 'ಸಿ' ಪ್ರವೇಶ ದ್ವಾರವನ್ನು 15 ದಿನಗಳ ಕಾಲ ಮುಚ್ಚಲಾಗಿದೆ.

'ಸಿ' ಪ್ರವೇಶ ದ್ವಾರದ ಕಡೆ ಎಸ್ಕಲೇಟರ್ ಆಳವಡಿಸುವ ಕಾರ್ಯ ನಡೆಯುತ್ತಿದೆ. ಆದ್ದರಿಂದ, ನ.25 ರಿಂದ ಡಿ.10ರ ತನಕ ಹದಿನೈದು ದಿನಗಳ ಕಾಲ 'ಸಿ' ಪ್ರವೇಶ ದ್ವಾರವನ್ನು ಮುಚ್ಚಲಾಗಿದೆ.

ಕನಕಪುರ ರಸ್ತೆಯಿಂದ ನಾಗವಾರಕ್ಕೆ ಮೆಟ್ರೋ ಮಾರ್ಗ?

Mysuru road

ಸಾರ್ವಜನಿಕರು ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಇತರ ಪ್ರವೇಶ/ನಿರ್ಗಮನ ದ್ವಾರಗಳನ್ನು ಉಪಯೋಗಿಸಬಹುದು ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.

ಜಯದೇವ ಮೇಲ್ಸೇತುವೆ ತೆರವು :ನಮ್ಮ ಮೆಟ್ರೋ 2ನೇ ಹಂತದಲ್ಲಿ ಆರ್‌.ವಿ.ರಸ್ತೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ತನಕ ಮೆಟ್ರೋ ಫ್ಲೈ ಓವರ್ ನಿರ್ಮಾಣವಾಗಲಿದೆ. ಇದಕ್ಕಾಗಿ ಜಯದೇವ ಹೃದ್ರೋಗ ಆಸ್ಪತ್ರೆ ಸಮೀಪದ ಮೇಲು ರಸ್ತೆಯನ್ನು ತೆರವುಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಆರ್ಥಿಕ ಸಂಕಷ್ಟ: ಕೆ.ಆರ್. ಪುರಂ- ಸಿಲ್ಕ್ ಜಂಕ್ಷನ್ ಮತ್ತಷ್ಟು ವಿಳಂಬ

3 ನಿಮಿಷಕ್ಕೊಂದು ರೈಲು : ಬಿಎಂಆರ್‌ಸಿಎಲ್ ಪ್ರಯಾಣಿಕರ ಅನುಕೂಲಕ್ಕಾಗಿ 3 ನಿಮಿಷಕ್ಕೊಂದು ಮೆಟ್ರೋ ರೈಲು ಓಡಿಸಲು ತೀರ್ಮಾನ ಕೈಗೊಂಡಿದೆ. ಈಗ 6 ನಿಮಿಷಕ್ಕೊಂದು ರೈಲುಗಳು ಸಂಚಾರ ನಡೆಸುತ್ತಿವೆ.

150 ಬೋಗಿಗಳನ್ನು ಖರೀದಿ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿದೆ. ಬೋಗಿಗಳು ಬಂದ ಬಳಿಕ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ, ವಿಕಲ ಚೇತನರಿಗೆ ಪ್ರತ್ಯೇಕ ಬೋಗಿಗಳನ್ನು ಮೀಸಲಾಗಿಡಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Entry to Mysuru road Namma metro station through 'C' entrance will be closed for 15 days from November 25 to Dec 10, 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ