ಮೈಸೂರು ದಿವಾನರ ದ್ರೋಹದಿಂದ ತ.ನಾಡಿಗೆ ಅನುಕೂಲವಾಯಿತು: ದೇವೇಗೌಡ

Posted By:
Subscribe to Oneindia Kannada

ಮಾಗಡಿ (ರಾಮನಗರ ಜಿಲ್ಲೆ), ಮಾರ್ಚ್ 12 : ಮೈಸೂರು ದಿವಾನರು ಕನ್ನಡ ನಾಡಿಗೆ ಮಾಡಿದ ದ್ರೋಹದಿಂದ ತಮಿಳುನಾಡಿಗೆ ಕಾವೇರಿ ನೀರು ವರದಾನದಂತೆ ಸಿಕ್ಕಿತಾ? ಹೌದು, ಈ ಬಗ್ಗೆ ಮಾಜಿ ಪ್ರಧಾನಿ- ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾತನಾಡಿದ್ದಾರೆ.

ಮೈಸೂರಿನ ರಾಜವಂಶಸ್ಥರ ಮಾನವೀಯ ಗುಣಗಳನ್ನು ದುರುಪಯೋಗ ಮಾಡಿಕೊಂಡ ದಿವಾನರು, ತಮಿಳುನಾಡಿಗೆ ಕಾವೇರಿ ನೀರಿನ ವಿಚಾರದಲ್ಲಿ ಅನುಕೂಲ ಮಾಡಿಕೊಟ್ಟರು ಎಂದು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಆರೋಪ ಮಾಡಿದರು.

ಕಾವೇರಿ ತೀರ್ಪಿಗೆ ಕೇಂದ್ರ ಮರು ಪರಿಶೀಲನಾ ಅರ್ಜಿ ಹಾಕಲಿ: ದೇವೇಗೌಡ ಸಲಹೆ

ಆಗಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಕಾಮರಾಜ್ ನಾಡಾರ್ ಗೆ ಪತ್ರ ಬರೆದು, ಕಾವೇರಿ ನದಿ ನೀರನ್ನು ಎಷ್ಟು ಬೇಕಾದರೂ ಬಳಸಿಕೊಳ್ಳಿ. ಆದರೆ ನಮಗೆ ಭತ್ತ ಕೊಡಿ ಎಂದು ಪತ್ರ ಬರೆದಿದ್ದರು. ಆ ಪತ್ರ ಕೂಡ ತಮಿಳುನಾಡಿಗೆ ಅನುಕೂಲ ಮಾಡಿಕೊಟ್ಟಿತು ಎಂದು ದೇವೇಗೌಡರು ಹೇಳಿದರು.

HD Deve Gowda

ತಮಿಳುನಾಡು, ಆಂಧ್ರದಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿವೆ. ಆದ್ದರಿಂದ ಎಷ್ಟೇ ಗದ್ದಲ ಮಾಡಿದರೂ ನಾಡಿನ ನದಿಗಳ ನೀರನ್ನು ಹೆಚ್ಚು ಬಳಸಿಕೊಳ್ಳಲು ಸಾಧ್ಯವಾಗಿದೆ. ಆದ್ದರಿಂದ ಇಲ್ಲೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಧಿಕಾರಕ್ಕೆ ಬರಬೇಕಿದೆ. ಆ ಮೂಲಕ ಕನ್ನಡ ನಾಡಿಗೆ ನ್ಯಾಯ ಸಿಗುವಂತೆ ಮಾಡಬೇಕಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru Deewan mistake leads to Cauvery water dispute, alleges former prime minister HD Deve Gowda in JDS party workers meeting at Magadi on Sunday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ