"ಶಸ್ತ್ರಾಸ್ತ್ರ ಹಿಡಿಯುವುದೊಂದೇ ಹಿಂದೂಗಳಿಗೆ ಇರುವ ದಾರಿ"

Subscribe to Oneindia Kannada

ಬೆಂಗಳೂರು, ಮಾರ್ಚ್, 15: ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಹಾಗೂ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾರ್ಯಕರ್ತ ರಾಜು ಹತ್ಯೆ ಮತ್ತು ಶವ ಸಂಸ್ಕಾರದ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು.

ಮಂಗಳವಾರ ಮೈಸೂರು ಬ್ಯಾಂಕ್ ವೃತ್ತದ ಸಮೀಪ ಸಮಾವೇಶಗೊಂಡ ಹಿಂದೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಿಎಂ ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.[ಮೈಸೂರು ಬಂದ್ ಹಿಂಸಾಚಾರಕ್ಕೆ ತಿರುಗಿದ್ದು ಹೇಗೆ?]

ಬೆಳಗ್ಗೆ 10 ಗಂಟೆಗೆ ಮೈಸೂರು ಬ್ಯಾಂಕ್ ವೃತ್ತದ ಸಮೀಪ ಸೇರಿದ ಹಿಂದೂ ಕಾರ್ಯಕರ್ತರು, 'ರಾಜು ಅಮರ್ ರಹೆ, ಹಿಂದೂ ಶಕ್ತಿ ಕೆರಳಿದರೆ ಸುಮ್ಮನಿರಲ್ಲ, ದೇಶ ರಕ್ಷಣೆ ನಮ್ಮಿಂದಲೇ, ಬೋಲೋ ಭಾರತ್ ಮಾತಾಕಿ ಘೋಷಣೆಗಳನ್ನು ಕೂಗಿದರು. ಮೈಸೂರಿನಲ್ಲಿ ರಾಜು ಹತ್ಯೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯ ಮಾಡಿದರು.[ಕರ್ನಾಟಕದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ: ಪ್ರತಾಪ್ ಸಿಂಹ]

ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ

ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೊದಲಿನಿಂದಲೂ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿಕೊಂಡು ಬರುತ್ತಿದೆ. ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ರಾಜ್ಯದ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದರು.

ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಬೆಂಬಲ

ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಬೆಂಬಲ

ಎಲ್ಲಿಯವರೆಗೆ ಇಸ್ಲಾಂ ಇರುತ್ತದೆಯೋ ಅಲ್ಲಿಯವೆಗೆ ಭಯೋತ್ಪಾದನೆ ಇರುತ್ತದೆ ಎಂಬ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಯನ್ನು ನಾವು ಬೆಂಬಲಿಸುತ್ತೇವೆ. ಈಗ ನಡೆಯುತ್ತಿರುವ ಘಟನಾವಳಿಗಳು ಅದನ್ನೇ ಸಾರಿ ಹೇಳುತ್ತಿವೆ ಎಂದು ಪ್ರತಿಭಟನಾಕಾರರು ಹೇಳಿದರು.

 ಶಸ್ತ್ರಾಸ್ತ್ರ ಹಿಡಿಯುವುದೇ ದಾರಿ

ಶಸ್ತ್ರಾಸ್ತ್ರ ಹಿಡಿಯುವುದೇ ದಾರಿ

ಈ ಹತ್ಯೆಯೇ ಹಿಂದೂ ಕಾರ್ಯಕರ್ತರೊಬ್ಬರ ಕೊನೆ ಹತ್ಯೆಯಾಗಬೇಕು. ಇಂಥ ಘಟನಾವಳಿಗಳು ಮುಂದೆ ಸಂಭವಿಸಿದರೆ ನಾವು ಶಸ್ತ್ರಾಸ್ತ್ರ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾಧ್ಯಮಗಳ ಮೇಲೆ ಗರಂ

ಮಾಧ್ಯಮಗಳ ಮೇಲೆ ಗರಂ

ಅಲ್ಪಸಂಖ್ಯಾತರು ಸಾವಿಗೆ ಈಡಾದಾಗ ಇಡೀ ದಿನ ತೋರಿಸುವ ಮಾಧ್ಯಮಗಳು ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ತಾರತಮ್ಯ ಮಾಡುತ್ತಿವೆ ಎಂದು ಪ್ರತಿ ಪ್ರಭಟನಾಕಾರರು ಮಾಧ್ಯಮಗಳ ಮೇಲೆ ಹರಿಹಾಯ್ದ ಪ್ರಕರಣವೂ ನಡೆಯಿತು.

ಎಸ್ ಡಿಪಿಐ ನಿಷೇಧವಾಗಲಿ

ಎಸ್ ಡಿಪಿಐ ನಿಷೇಧವಾಗಲಿ

ಉಗ್ರವಾದವನ್ನು ದೇಶದಲ್ಲಿ ಬಿತ್ತುತ್ತಿರುವ ಸೊಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ)ನ್ನು ಮೊದಲು ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.

ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಬೇಡಿ

ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಬೇಡಿ

ಯಾವಾಗ ದೇಶದ ಮೇಲೆ ಮುಸ್ಲಿಮರ ಆಕ್ರಮಣವಾಯಿತೋ ಆಗಲೇ ದೇಶದಲ್ಲಿ ಹಿಂದೂಗಳ ಭವಿಷ್ಯ ಅತಂತ್ರವಾಯಿತು. ಬಹುಸಂಖ್ಯಾತರು ಅವರಿಗೆ ಬದುಕಲು ನೀಡಿದ ಅವಕಾಶವೇ ಇಂದು ಮುಳುವಾಗಿದೆ ಎಂದು ಹೇಳಿದರು.

ದೇಶ ಇಬ್ಭಾಗ

ದೇಶ ಇಬ್ಭಾಗ

ಸ್ವಾತಂತ್ರ್ಯಾನಂತರದಲ್ಲಿ ತೆಗೆದುಕೊಂಡ ಕೆಲ ಕ್ರಮಗಳು ದೇಶವನ್ನು ಒಳಗಿನಿಂಲೇ ಇಬ್ಭಾಗ ಮಾಡಿದವು. ಹಿಂದೂ ರಾಷ್ಟ್ರ ಅಲ್ಲಿಂದಲೇ ಮುಸ್ಲಿಂ ಭಯೋತ್ಪಾದನೆ ಅಡಿ ಸಿಲುಕಿಕೊಳ್ಳುವಂತಾಯಿತು.

ಎಲ್ಲದಕ್ಕೂ ಕಾಂಗ್ರೆಸ್ ಕಾರಣ

ಎಲ್ಲದಕ್ಕೂ ಕಾಂಗ್ರೆಸ್ ಕಾರಣ

ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆಗೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ. ಸಮಾಜದಲ್ಲಿ ಬಿರುಕು ಮೂಡಿಸುವ ಯತ್ನವನ್ನು ಕಾಂಗ್ರೆಸ್ ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದೆ ಎಂದು ಆರೋಪಿಸಿದರು.

 ಮುಸ್ಲಿಂ ತುಷ್ಟೀಕರಣ ಕೈಬಿಡಿ

ಮುಸ್ಲಿಂ ತುಷ್ಟೀಕರಣ ಕೈಬಿಡಿ

ಕಾಂಗ್ರೆಸ್ ಸರ್ಕಾರ ಮೊದಲು ಮುಸ್ಲಿಂ ತುಷ್ಟೀಕರಣ ನೀತಿಯನ್ನು ಕೈಬಿಡಬೇಕು. ಅಪರಾಧ ಕೃತ್ಯದಲ್ಲಿ ಯಾರೇ ತೊಡಗಿಕೊಂಡಿದ್ದರೂ ಅವರನ್ನು ಶೀಕ್ಷಿಸಬೇಕು ಎಂದು ಆಗ್ರಹಿಸಿದರು.

ಪ್ರಕರಣ ಹಿಂದಕ್ಕೆ ಯಾಕೆ?

ಪ್ರಕರಣ ಹಿಂದಕ್ಕೆ ಯಾಕೆ?

ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಂಘಟನೆಗಳ ಮೇಲೆ ಇದ್ದ ಅನೇಕ ಪ್ರಕರಣಗಳನ್ನು ವಿವಾರಣೆ ನಡೆಸದೆ ವಜಾ ಮಾಡಿದೆ. ರೈತರ ಮೇಲೆ ಅಮಾಯಕರ ಮೇಲೆ ಪ್ರಕರಣ ದಾಖಲಿಸುವ ಸರ್ಕಾರ ನಿಜ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ವಿಫಲ

ಸಿದ್ದರಾಮಯ್ಯ ವಿಫಲ

ತಮ್ಮ ತವರಿನಲ್ಲೇ ಶಾಂತಿ ಕಾಪಾಡಲು ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಒಬ್ಬರೇ ಒಬ್ಬರು ಕಾಂಗ್ರೆಸ್ ನಾಯಕರು ಮೈಸೂರಿನ ಘಟನೆಯನ್ನು ಖಂಡಿಸಿಲ್ಲ. ಇದೆಲ್ಲ ಏನನ್ನು ಸೂಚಿಸುತ್ತದೆ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಮೇಲೆ ವಾಗ್ದಾಳಿ

ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಕಾಂಗ್ರೆಸ್ ಮೇಲೆ ಯಾವ ರೀತಿಯಾಗಿ ವಾಗ್ದಾಳಿ ಮಾಡಿದರು ಕೇಳಿಕೊಂಡು ಬನ್ನಿ...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru: After the incident of VHP activist murder Bengaluru witnessed major protest. Vishwa Hindu Parishad members have staged a protest near Mysuru Bank circle, Bengaluru on 15 March.
Please Wait while comments are loading...