ಬೆಂಗಳೂರು : ಮನೆಯಲ್ಲಿ ನಿಗೂಢ ಸ್ಫೋಟ, ನಾಲ್ವರಿಗೆ ಗಾಯ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 14 : ಬೆಂಗಳೂರು ನಗರದ ಈಜಿಪುರದಲ್ಲಿನ ಮನೆಯೊಂದರಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಮಹಿಳೆ ಸ್ಥಿತಿ ಗಂಭೀರವಾಗಿದೆ.

ಈಜಿಪುರ ಸಮೀಪದ ಆರ್‌.ಎ.ರಸ್ತೆಯ 'ಶಾಲಮ್' ಎಂಬ ಎರಡಂತಸ್ತಿನ ಮನೆಯಲ್ಲಿ ಭಾನುವಾರ ಮಧ್ಯಾಹ್ನ ಈ ಸ್ಫೋಟ ಸಂಭವಿಸಿದೆ. ಮನೆಯ ನೆಲ ಅಂತಸ್ತಿನಲ್ಲಿ ಸ್ಫೋಟ ನಡೆದಿದ್ದು, ದಟ್ಟ ಹೊಗೆ ಆವರಿಸಿದೆ. ಮನೆಯಲ್ಲಿದ್ದ ಸಿಲಿಂಡರ್‌ಗಳು ಸುರಕ್ಷಿತವಾಗಿದ್ದು, ಅವುಗಳು ಸ್ಫೋಟಗೊಂಡಿಲ್ಲ.[ಮೈಸೂರು ಕೋರ್ಟ್ ಸ್ಫೋಟ : ಮಲಯಾಳಂ ಪತ್ರಿಕೆಯಲ್ಲಿತ್ತು ಸ್ಫೋಟಕ]

Mysterious explosion at house Ejipura, Bengaluru

'ಶಾಲಮ್' ಎಂಬ ಮನೆ ಕೇರಳ ಮೂಲದ ಮ್ಯಾಥ್ಯೂ ಎಂಬುವವರಿಗೆ ಸೇರಿದ್ದಾಗಿದೆ. ಈ ಸ್ಫೋಟದಿಂದಾಗಿ ಒಬ್ಬ ಮಹಿಳೆ ಸೇರಿ ನಾಲ್ವರಿಗೆ ಗಾಯವಾಗಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.[ಮೈಸೂರು ಸ್ಫೋಟದಲ್ಲಿ ಹೊಸ ಸಂಘಟನೆ ಹೆಸರು]

ಕೇಂದ್ರ ವಲಯ ಡಿಸಿಪಿ ಸಂದೀಪ್ ಪಾಟೀಲ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಫೋಟದಿಂದಾಗಿ ಮನೆಯ ಹೊರಗೆ ನಿಲ್ಲಿಸಿದ್ದ ಕಾರು, ಮನೆಯ ಕಿಟಕಿಗಾಜುಗಳು ಜಖಂಗೊಂಡಿವೆ. ಸ್ಫೋಟಕ್ಕೆ ನಿಖರವಾದ ಕಾರಣ ಏನು ಎಂಬುದು ತಿಳಿದುಬಂದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Four injured in a mysterious explosion at house in Ejipura, Bengaluru. Police reached the spot and investigating.
Please Wait while comments are loading...