ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಕಾಶ್ ರೈ ಹತ್ಯೆಗೆ ಸಂಚು?!ಸ್ಫೋಟಕ ಸುದ್ದಿಗೆ ರೈ ಪ್ರತಿಕ್ರಿಯೆ ಏನು?

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

Recommended Video

ಪ್ರಕಾಶ್ ರೈ ಹತ್ಯೆಗೆ ಸಂಚು ರೂಪಿಸಲಾಗಿತ್ತಾ? ಇದಕ್ಕೆ ಇವರ ಪ್ರತಿಕ್ರಿಯೆ?

ಬೆಂಗಳೂರು, ಜೂನ್ 28: ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಕೊಲೆಗಾರರೇ ನಟ ಪ್ರಕಾಶ್ ರೈ ಅವರನ್ನೂ ಕೊಲ್ಲಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಎಸ್ ಐಟಿ(ವಿಶೇಷ ತನಿಖಾ ದಳ) ನೀಡಿದ ಮಾಹಿತಿಯ ಪ್ರಕಾರ ಪ್ರಕಾಶ್ ರೈ ಹತ್ಯೆಗೂ ಸಂಚು ರೂಪಿಸಲಾಗಿತ್ತು ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ್ ಪ್ರಕಾಶ್ ರೈ, 'ನನಗೆ ಕೊಲೆ ಬೆದರಿಕೆ ಇದೆ ಎಂದರೆ ನಾನ್ಯಾವತ್ತೂ ಇದಕ್ಕೆಲ್ಲ ಹೆದರುವುದಿಲ್ಲ. ಬದಲಾಗಿ ನಾನು ಮತ್ತಷ್ಟು ಬಲಾಢ್ಯವಾಗುತ್ತೇನೆ' ಎಂದಿದ್ದಾರೆ.

ಪ್ರಕಾಶ್ ರಾಜ್ 'ಪಪ್ಪಿ ಶೇಮ್' ಟ್ವೀಟ್ ಗೆ ಟ್ವಿಟ್ಟಿಗರು ಲೆಫ್ಟ್-ರೈಟ್ಪ್ರಕಾಶ್ ರಾಜ್ 'ಪಪ್ಪಿ ಶೇಮ್' ಟ್ವೀಟ್ ಗೆ ಟ್ವಿಟ್ಟಿಗರು ಲೆಫ್ಟ್-ರೈಟ್

ಈ ಕುರಿತು ಟ್ವೀಟ್ ಸಹ ಮಾಡಿರುವ ಅವರು, ಇಂಥ ಬೆದರಿಕೆಗಳು ನನ್ನ ಧ್ವನಿಯನ್ನು ಹತ್ತಿಕ್ಕುವುದಿಲ್ಲ, ಬದಲಾಗಿ ಮತ್ತಷ್ಟು ಬಲಯುತವಾಗಿಸುತ್ತವೆ ಎಂದಿದ್ದಾರೆ.

Array

ಟ್ವೀಟ್ ನಲ್ಲೇನಿದೆ?

'ಪತ್ರಿಕೆ ಮತ್ತು ಚಾನೆಲ್ ನಲ್ಲಿ ಪ್ರಕಟವಾದ ಸುದ್ದಿಯ ಚಿತ್ರದೊಂದಿಗೆ ಟ್ವೀಟ್ ಮಾಡಿರುವ ಪ್ರಕಾಶ್ ರೈ, ಗೌರಿ ಲಂಕೇಶ್ ರನ್ನು ಕೊಂದವರು ಪ್ರಕಾಶ್ ರೈ ಅವರನ್ನೂ ಕೊಲ್ಲಲು ಯತ್ನಿಸಿದ್ದರು ಎಂಬ ಮಾಹಿತಿ ಎಸ್ ಐಟಿ ಗೆ ಲಭ್ಯವಾಗಿದೆ ಎಂದು ಸುದ್ದಿಯಲ್ಲಿ ಹೇಳಲಾಗಿದೆ. ಆದರೆ ಇಂಥ ಬೆದರಕೆಗಳನ್ನು ಕಂಡಾಗ ನನ್ನ ಧ್ವನಿ ಮೌನವಾಗುವುದಿಲ್ಲ, ಬದಲಾಗಿ ಮತ್ತಷ್ಟು ಶಕ್ತಿಯುತವಾಗುತ್ತದೆ. ನೀವೆಲ್ಲ ಹೇಡಿಗಳು, ಈ ಕೊಳಕು ರಾಜಕೀಯದಿಂದ ನಿಮಗೆ ಮುಕ್ತಿ ಸಿಗುತ್ತದೆ ಎಂದುಕೊಂಡಿದ್ದೀರಾ?' ಎಂದು ಅವರು ಟ್ವೀಟ್ ಮಾಡಿದ್ದಾರೆ.

ನನಗೆ ನಗುಬರುತ್ತದೆ!

ನನಗೆ ನಗುಬರುತ್ತದೆ!

'ಇಂಥ ಬೆದರಿಕೆಗಳನ್ನು ಕೇಳಿದಾಗ ನನಗೆ ನಗುಬರುತ್ತದೆ. ನಾನು ಖಂಡಿತ ಹೆಸರಿಕೊಂಡಿಲ್ಲ. ನನ್ನ ಧ್ವನಿ ಗಟ್ಟಿಯಾಗಿದೆ. ಇಂಥ ಶಕ್ತಿಗಳೇ ದೇಶದಲ್ಲಿ ದ್ವೇಷವನ್ನು ಬಿತ್ತುತ್ತಿರುವುದು. ಇಂದಿನ ಯುವಕರ ತಲೆಯಲ್ಲಿ ಇಂಥ ದ್ವೇಷದ ಸಿದ್ಧಾಂತವನ್ನು ಬಿತ್ತುವವರ ಬಗ್ಗೆ ನನಗೆ ಆತಂಕವಾಗುತ್ತಿದೆ' ಎಂದು ಪ್ರಕಾಶ್ ರೈ ಹೇಳಿದ್ದಾರೆ.

ನನಗೆ ಭಯವಾಗುವುದು ಬೇರೆ ವಿಷಯಕ್ಕೆ!

ನನಗೆ ಭಯವಾಗುವುದು ಬೇರೆ ವಿಷಯಕ್ಕೆ!

'ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆಂದರೆ ನನಗೆ ಭಯವಿಲ್ಲ. ಆದರೆ ನನಗೆ ಭಯವಿರುವುದು, ಈ ಯುವಕರನ್ನು ಬ್ರೈನ್ ವಾಶ್ ಮಾಡುವವರ ಬಗ್ಗೆ. ಒಬ್ಬರನ್ನು ಕೊಲ್ಲುವ ಮಟ್ಟಿಗೆ ಅವರ ಮನಸ್ಸಿನಲ್ಲಿ ದ್ವೇಷ ಬಿತ್ತುತ್ತಾರಾದರೆ ಅವರು ಎಷ್ಟು ದುರಹಂಕಾರಿಗಳು, ಕ್ರೂರಿಗಳು, ನಿರ್ಭೀತರಿರಬಹುದು ಎಂಬುದನ್ನು ನೆನಪಿಸಿಕೊಂಡರೆ ನನಗೆ ಭಯವಾಗುತ್ತೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಪ್ರಕಾಶ್ ರೈ.

ಪ್ರಕಾಶ್ ರೈ ಅವರ ಮೇಲೇಕೆ ದ್ವೇಷ?

ಪ್ರಕಾಶ್ ರೈ ಅವರ ಮೇಲೇಕೆ ದ್ವೇಷ?

2017 ರ ಸೆಪ್ಟೆಂಬರ್ 5 ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅವರ ಮನೆಯಲ್ಲೇ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಪರಶುರಾಮ್ ವಾಘ್ಮೋರೆ ಎಂಬ ಪ್ರಮುಖ ಆರೋಪಿ ಸೇರಿದಮತೆ ಹಲವರನ್ನು ಬಂಧಿಸಿದೆ. ಆದರೆ ಗೌರಿ ಹತ್ಯೆಯ ನಂತರ ಅವರ ಆಪ್ತ ಸ್ನೇಹಿತರಲ್ಲೊಬ್ಬರಾದ ಪ್ರಕಾಶ್ ರೈ ಅವರು ಬಲಪಂಥೀಯ ವಿಚಾರಧಾರೆಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದರು. ತಮ್ಮ ಜಸ್ಟ್ ಆಸ್ಕಿಂಗ್ ಎಂಬ ಅಭಿಯಾನದ ಮೂಲಕ ಗೌರಿ ಹತ್ಯೆಯನ್ನು ವಿರೋಧಿಸಿ ಸಾಕಷ್ಟು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದರು.

English summary
"Not threatened at all", said actor Prakash Raj on Thursday, on reports that the killers of journalist Gauri Lankesh had planned to kill him as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X