ಸ್ಮಾರ್ಟ್ ಮಲ್ಲೇಶ್ವರಂಗೆ ನೀವು ಸಲಹೆ ನೀಡಬಹುದು

Written By:
Subscribe to Oneindia Kannada

ಬೆಂಗಳೂರು, ಜೂ.22: ಬೆಂಗಳೂರು ಅಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮಲ್ಲೇಶ್ವರಂನ ವೈಭವ, ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ, ಕಡ್ಲೆಕಾಯಿ ಪರಿಷೆ, ಕರಗ, ಚಾಮರಾಜಪೇಟೆ, ಕೆಂಪೇಗೌಡ ಬಸ್ ನಿಲ್ದಾಣ, ಟ್ರಾಫಿಕ್ ನರಕ ... ಹೀಗೆ ನೂರಾರು ವಿಚಾರಗಳು ತಲೆಗೆ ಬರುತ್ತವೆ. ಉತ್ತಮವಾದದ್ದೂ ಇವೆ, ಕೆಟ್ಟವು ಇವೆ.

ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಾಲಯ, ರಾಣಿ ಅಮ್ಮಣ್ಣಿ ಕಾಲೇಜು, ಟಾಟಾ ವಿಜ್ಞಾನ ಸಂಸ್ಥೆ, ಸ್ಯಾಂಕಿ ಕೆರೆ, ಮೈಸೂರು ಲ್ಯಾಂಪ್ಸ್, ಚೌಡಯ್ಯ ಹಾಲ್ ಗಳು ಅದರದ್ದೇ ಆದ ಕಾರಣಕ್ಕೆ ಇಷ್ಟವಾಗುತ್ತವೆ. ಬದಲಾದ ಆಧುನಿಕ ಕಾಲಘಟ್ಟದ ವೇಗಕ್ಕೆ ಮಲ್ಲೇಶ್ವರಂ ಸಹ ಹೊಂದಿಕೊಂಡಿದೆ.[ನಮ್ಮ ಬೆಂಗಳೂರು ಹೀಗಾದರೆ ಚೆನ್ನ.. ವಿಡಿಯೋ ನೋಡಿ]

bengaluru

ಇಂಥ ಮಲ್ಲೇಶ್ವರಂನ್ನು ಮತ್ತಷ್ಟು ಸುಂದರವಾಗಿಸಲು ಶಾಸಕ ಡಾ. ಅಶ್ವತ್ಥ ನಾರಾಯಣ ಕಟಿಬದ್ಧರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ನಾರಾಯಣ ಮಲ್ಲೇಶ್ವರಂ ಉಳಿವಿಗೆ ಜನರಿಂದ ಸಲಹೆ ಕೇಳುತ್ತಿದ್ದಾರೆ. ನೀವು ಮಲ್ಲೇಶ್ವರಂ ನಿವಾಸಿ ಆಗಿದ್ದರೂ ಸರಿ, ಇಲ್ಲಾ ಮಲ್ಲೇಶ್ವರಂ ಪ್ರೀತಿ ಮಾಡುವರಾದರೂ ಸರಿ ನಿಮ್ಮ ಮಾತುಗಳನ್ನು ದಾಖಲು ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.[ಮಹಾನಗರಕ್ಕೆ ವೇಷ ಹೊಂದಿಕೆಯಾಗ್ದಿದ್ರೆ ಅಷ್ಟೇ ಕತೆ!]

-
-
-
-

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯ ಮುಂದುವರಿದ ಭಾಗವಾಗಿ ಡಾ. ಅಶ್ವತ್ಥ ನಾರಾಯಣ ಇಂಥ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸ್ಮಾರ್ಟ್ ಸಿಟಿಯಾಗಲೂ ಏನೆಲ್ಲ ಬೇಕು? ಯಾವ ಮಾರ್ಪಾಡುಗಳನ್ನು ನೀರಿಕ್ಷೆ ಮಾಡುತ್ತಿದ್ದೀರಿ? ಅಭಿವೃದ್ಧಿಗೆ ನಿಮ್ಮ ಸಲಹೆ ಏನು? ಎಂಬ ಎಲ್ಲ ವಿಚಾರಗಳನ್ನು ದಾಖಲು ಮಾಡಬಹುದು.[ಬೆಂಗಳೂರು: ವಾಸ್ತುದೋಷ ಕಾರಣ, ನೇರಳೆ ಮರದ ಜೀವ ಹರಣ?]

ಇದೆ ಕಾರಣಕ್ಕೆ ಶಾಸಕ ಡಾ. ಅಶ್ವತ್ಥ ನಾರಾಯಣ "ಮೈ ಮಲ್ಲೇಶ್ವರಂ" ಎಂಬ ಫೇಸ್ ಬುಕ್ ಪೇಜ್ ನ್ನು ಶುರುಮಾಡಿದ್ದು ಅಪ್ ಡೇಟ್ ಗಳನ್ನು ನೀಡುತ್ತಲೇ ಬಂದಿದ್ದಾರೆ. ನಿಮ್ಮ ಅಭಿಪ್ರಾಯವನ್ನು ಇಲ್ಲಿ ದಾಖಲು ಮಾಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"My Malleswaram" is a unique initiative of Dr. Ashwath Narayan. Idea behind the "My Malleswaram" FB page is to bring together Malleshwaram residents, irrespective of their age group, background and profession, to achieve the common goal.
Please Wait while comments are loading...