ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನನ್ನ ತಮ್ಮನ ಸಾವಿನ ನೋವು ನನಗೆ ಮಾತ್ರ ಗೊತ್ತು'

By Madhusoodhan
|
Google Oneindia Kannada News

ಬೆಂಗಳೂರು, ಜುಲೈ, 05: "ಯಾರು ಏನೇ ಹೇಳಲಿ ನನ್ನ ತಮ್ಮನ ಸಾವಿನ ನೋವು ನನಗೆ, ನಮ್ಮ ಕುಟುಂಬಕ್ಕೆ ಮಾತ್ರ ಗೊತ್ತು. ಆತನ ಸಾವಿಗೆ ಬೇರೆಯವವರು ನೀಡಿದ್ದ ಹಿಂಸೆಯೇ ಕಾರಣ" ಹೀಗೆಂದು ಹೇಳುತ್ತಾ ತಮ್ಮನನ್ನು ಕಳೆದುಕೊಂಡ ನೋವನ್ನು ಬಿಚ್ಚಿಟ್ಟಿದ್ದು ರೌನಕ್‌ ಬ್ಯಾನರ್ಜಿ (14) ಯ ಅಕ್ಕ ಸ್ರೀತಮಾ ಬ್ಯಾನರ್ಜಿ.

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುನ್ನ ರೌನಕ್‌ ಬ್ಯಾನರ್ಜಿಗೆ ಜ್ವರ ಕಾಡುತ್ತಿತ್ತು. ಆದರೂ ಆತ ಶಾಲೆಗೆ ತೆರಳಲು ಮುಂದಾಗಿದ್ದ. 'ಶಾಲೆಗೆ ಹೋಗುವುದು ಬೇಡ. ಆರೋಗ್ಯ ಸರಿಯಾದ ಮೇಲೆ ತೆರಳು' ಎಂದು ನನ್ನ ತಾಯಿ ಹೇಳಿದ್ದರು. ಆದರೆ ಮಗನ ಹಠಕ್ಕೆ ಕಟ್ಟುಬಿದ್ದು ಅಂತಿಮವಾಗಿ ಶಾಲೆಗೆ ತೆರಳಲು ಅನುಮತಿ ನೀಡಿದ್ದರು.[ಪ್ರಥಮ ಮಹಿಳಾ ಊಬರ್ ಡ್ರೈವರ್ ಬೆಂಗಳೂರಿನಲ್ಲಿ ಅನುಮಾನಾಸ್ಪದ ಸಾವು]

bengaluru

ತಮ್ಮ ಬರೆದಿರುವ ಪತ್ರವನ್ನು ನಾನು ಓದಿಲ್ಲ. ಆದರೆ ನನ್ನ ತಂದೆ ಹೇಳಿದಂತೆ ಶಾಲಾ ಬಸ್ ನಲ್ಲಿ ಆತನಿಗೆ ಯಾರೋ ಹಿಂಸೆ ನೀಡಿದ್ದಾರೆ. ಇದು ಒಂದೇ ದಿನ ನಡೆದಿದೆಯೋ ಅಥವಾ ಶಾಲೆ ಆರಂಭವಾದಾಗಿನಿಂದ ನಡೆಯುತ್ತಾ ಬಂದಿದೆಯೋ ಗೊತ್ತಿಲ್ಲ.

ನನ್ನ ತಮ್ಮ ಯಾವತ್ತು ಕೆಟ್ಟ ವಿಷಯಗಳನ್ನು ಮಾತನಾಡಿದವನೇ ಅಲ್ಲ. ಆತ ಸದಾ ಹಾಸ್ಯ ಪ್ರಜ್ಞೆಯಲ್ಲೇ ಇರುತ್ತಿದ್ದ. ಅದು ಡೈನಿಂಗ್ ಟೆಬಲ್ ಇರಬಹುದು ಇಲ್ಲ ಮನೆಯ ಹಾಲ್ ಇರಬಹುದು. ಸದಾ ಚಟುವಟಿಕೆಯಲ್ಲಿ ಇರುತ್ತಿದ್ದವ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದರೆ ನಂಬುವುದೇ ಅಸಾಧ್ಯ.[ಲಾಲ್ ಬಾಗ್ ನಲ್ಲಿ ಮೊಮ್ಮಗಳ ಸಾವು- ಆತ್ಮಹತ್ಯೆಗೆ ಶರಣಾದ ಅಜ್ಜ-ಅಜ್ಜಿ]

ಶಾಲಾ ಆಡಳಿತ ಮಂಡಳಿ ಸಹ ನಮ್ಮ ನೋವಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ನನ್ನ ತಂದೆ ಕೆಲ ವಿದ್ಯಾರ್ಥಿಗಳ ಜತೆ ಮಾತನಾಡಬೇಕು ಎಂದು ಬಯಸಿದರೆ ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಆದರೆ ಇಂದು ಸಹ ನನ್ನ ತಂದೆ ಶಾಲೆಗೆ ಹೋಗಿ ಮಕ್ಕಳನ್ನು ಮಾತನಾಡಿಸಲು ಯತ್ನ ಮಾಡಿದ್ದಾರೆ. ಪೊಲೀಸರು ಸಹ ಬಂದು ಪ್ರಶ್ನೆ ಮಾಡಲಿದ್ದಾರೆ. ಆಗಲಾದರೂ ನನ್ನ ತಮ್ಮನ ಸಾವಿನ ನಿಜ ಕಾರಣ ಗೊತ್ತಾಗುವುದೇ ನೋಡಬೇಕು.[ಯುವತಿ ಸೂಸೈಡ್ ಲೈವ್ ವಿಡಿಯೋಗೆ ಪೆರಿಸ್ಕೋಪ್ ಬಳಕೆ]

ಆದರೆ ಖಂಡಿತವಾಗಿ ಹೇಳುತ್ತೇನೆ. ಶಾಲೆ ಆಡಳಿತ ಮಂಡಳಿ ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಬೇಕು. ಕಾರಣವಿಲ್ಲದೇ ಬೇರೆ ವಿದ್ಯಾರ್ಥಿಗಳಿಗೆ ತೊಂದರೆ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ರೀತಮಾ ಆಗ್ರಹಿಸುತ್ತಾರೆ.

ಸ್ರೀತಮಾ ಕಸಿನ ದ್ಯುತಿ ಈ ಸಾವಿನ ನಂತರ ಆನ್ ಲೈನ್ ಪೆಟಿಶನ್ ಒಂದನ್ನು ಆರಂಭ ಮಾಡಿದ್ದಾರೆ. ಶಿಕ್ಷಣ ಸಚಿವ ತನ್ವೀರ್ ಸೇಠ್ ರಾಜ್ಯದಾದ್ಯಂತ ಮಕ್ಕಳ ಮೇಲಿನ ಹಿಂಸೆ ತಡೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಶಾಲೆಯಲ್ಲಿ ನನಗೆ ಅಪಮಾನವಾಗಿದೆ ಎಂದು ಡೆತ್ ನೋಟ್ ಬರೆದಿಟ್ಟ ರೌನಕ್‌ ಬ್ಯಾನರ್ಜಿ (14) ಜೆಪಿ ನಗರದ ಅಪಾರ್ಟ್ ಮೆಂಟ್ ನ ಹತ್ತನೇ ಮಹಡಿಯಿಂದ ಜಿಗಿದು ಆತ್ಮ,ಹತ್ಯೆ ಮಾಡಿಕೊಂಡಿದ್ದ.

ಇನ್ನೊಂದೆಡೆ ಸ್ಪಷ್ಟನೆ ನೀಡಿರುವ ಶಾಲಾ ಆಡಳಿತ ಮಂಡಳಿ, ಶಾಲೆಯಲ್ಲಿ ಹಿಂಸೆ ನೀಡಿದಂಥ ಯಾವ ಘಟನೆ ಆಗಿಲ್ಲ. ವಿದ್ಯಾರ್ಥಿ ಆತ್ಮಹತ್ಯೆಗೂ ಶಾಲೆಗೂ ಸಂಬಂಧವಿಲ್ಲ ಎಂಬ ಹೇಳಿಕೆ ನೀಡಿದೆ.

English summary
Bengaluru: 14-year-old Raunak Banerjee killed himself, his older sister Sreetama is looking for signs in his behaviour that could have hinted at his intentions or pain.The day before Raunak jumped off the roof of their apartment in Benglauru's JP Nagar area, Raunak was down with fever but was looking forward to going to school on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X