ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುತ್ತುರಾಜ್ ಅಂಡರ್ ಪಾಸ್‌ ಕಾಮಗಾರಿಗೆ ಡಿಸೆಂಬರ್‌ನಲ್ಲಿ ಮುಕ್ತಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 24: ಹೊಸಕೆರೆ ಹಳ್ಳಿ ಸಮೀಪದ ಮುತ್ತುರಾಜ್ ಜಂಕ್ಷನ್‌ನಲ್ಲಿ ಕೈಗೊಂಡಿರುವ ಅಂಡರ್ ಪಾಸ್‌ ಕಾಮಗಾರಿ ಡಿಸೆಂಬರ್‌ ಒಳಗೆ ಪೂರ್ಣಗೊಳಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗವುದು ಎಂದು ಬಿಬಿಎಂಪಿ ಮೇಯರ್ ಸಂಪತ್‌ರಾಜ್‌ ತಿಳಿಸಿದ್ದಾರೆ.

ಹೊರ ವರ್ತುಲ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ: ಟ್ರಾಫಿಕ್ ಜಾಮ್ ಭೀತಿಹೊರ ವರ್ತುಲ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ: ಟ್ರಾಫಿಕ್ ಜಾಮ್ ಭೀತಿ

ನಾಯಂಡಹಳ್ಳಿ ಜಂಕ್ಷನ್ ನಿಂದ ಸಿಲ್ಕ್ ಬೋರ್ಡ್ ವರೆಗೆ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯಡಿ ಮುತ್ತುರಾಜ್ ಜಂಕ್ಷನ್‌ನಲ್ಲಿ ಕೈಗೊಂಡ ಕೆಳಸೇತುವೆ ಕಾಮಗಾರಿಯ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲಿ ಕತ್ರಿಗುಪ್ಪೆಯ ಫುಡ್‌ ವರ್ಲ್ಡ್ ಜಂಕ್ಷನ್‌ನಲ್ಲಿ ಕೆಳಸೇತುವೆ ಮತ್ತು ಜೆಡಿ ಮರ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುತ್ತದೆ.

Mutturaj junction underpass will complete by December

ಜಾಹೀರಾತು ನೀತಿ ಆಗಸ್ಟ್ 31ಕ್ಕೆ ಪ್ರಕಟ: ಬಿಬಿಎಂಪಿಜಾಹೀರಾತು ನೀತಿ ಆಗಸ್ಟ್ 31ಕ್ಕೆ ಪ್ರಕಟ: ಬಿಬಿಎಂಪಿ

ಈವರೆಗೆ ಶೇ.25ರಷ್ಟು ಕಾಮಗಾರಿ ಮುಗಿದಿದೆ. ಹೆಚ್ಚುವರಿಯಾಗಿ ಯಂತ್ರೋಪಕರಣಗಳು ಹಾಗೂ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತದೆ. ಒಟ್ಟಿನಲ್ಲಿ ಈ ವರ್ಷದ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.

Mutturaj junction underpass will complete by December

ಸಿಗ್ನಲ್‌ ಫ್ರೀ ಕಾರಿಡಾರ್ ಯೋಜನೆಯಲ್ಲಿ 153.42 ಕೋಟಿ ರೂ. ವೆಚ್ಚದಲ್ಲಿ ನಾಯಂಡಹಳ್ಳಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ ಎರಡು ಅಂಡರ್‌ಪಾಸ್ ಮತ್ತು ಮೂರು ಮೇಲ್ಸೇತುವೆಗಳನ್ನು ನಿರ್ಮಿಸಲಾಗತ್ತಿದ್ದು, ಈ ಪೈಕಿ ಎರಡು ಮೇಲ್ಸೇತುವೆಗಳ ಕಾಮಗಾರಿಯನ್ನು ಪೂರ್ಣಗೊಳಿಸ, ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದರು.

English summary
Mutturaj junction underpass work near Outer Ring Road in Hosakerehalli will be completed by this December. BBMP mayor Sampath Raj said that if the underpass will complete, Nayandahalli and Silk board route will become signal free corridor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X