ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ರಾಮಮಂದಿರವನ್ನು ಭಾರತದಲ್ಲಲ್ಲದೆ ಪಾಕಿಸ್ತಾನದಲ್ಲಿ ಕಟ್ಟೋಕಾಗುತ್ತಾ?'

|
Google Oneindia Kannada News

ಬೆಂಗಳೂರು, ನವೆಂಬರ್ 01: ರಾಮಮಂದಿರವನ್ನು ಭಾರತದಲ್ಲಲ್ಲದೆ ಪಾಕಿಸ್ತಾನದಲ್ಲಿ ಕಟ್ಟುವುದಕ್ಕಾಗುತ್ತೆಯೇ?' ಎಂದು ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಪ್ರಶ್ನಿಸಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾನೂನು ರೂಪಿಸುವ ಬಗ್ಗೆ ಬಿಜೆಪಿ ಚಿಂತನೆ ನಡೆಸುತ್ತಿರುವ ಕುರಿತು ಶಿವಾಜಿನಗರ ಶಾಸಕ ರೋಷನ್ ಬೇಗ್ ಪ್ರತಿಕ್ರಿಯೆ ನೀಡಿದರು.

'ರಾಮಮಂದಿರವನ್ನು ಅಯೋಧ್ಯೆಯಲ್ಲಿ ಕಟ್ಟುವುದು, ಹೈದರಾಬಾದಿನಲ್ಲಲ್ಲ!''ರಾಮಮಂದಿರವನ್ನು ಅಯೋಧ್ಯೆಯಲ್ಲಿ ಕಟ್ಟುವುದು, ಹೈದರಾಬಾದಿನಲ್ಲಲ್ಲ!'

"ಮುಸ್ಲಿಮರು ಎಂದಿಗೂ ರಾಮಮಂದಿರ ನಿರ್ಮಾಣವನ್ನು ವಿರೋಧಿಸಿಲ್ಲ. ರಾಮಮಂದಿರವನ್ನು ಭಾರತದಲ್ಲಲ್ಲದೆ ಪಾಕಿಸ್ತಾನದಲ್ಲಿ ನಿರ್ಮಿಸುವುದಕ್ಕಾಗುತ್ತದೆಯೇ? ಅದನ್ನು ಭಾರತದಲ್ಲೇ ಕಟ್ಟಬೇಕು. ಸದ್ಯಕ್ಕೆ ಈ ವಿವಾದ ಕೋರ್ಟಿನಲ್ಲಿದೆ. ಆದರೆ ಈ ಸಂದರ್ಭದಲ್ಲಿ ಬಿಜೆಪಿ ಕಾನೂನು ತರುವ ಬಗ್ಗೆ ಚಿಂತನೆ ನಡೆಸುತ್ತಿದೆ"

Muslims are not against construction of Ram Mandir: Roshan Baig

"ಲೋಕಸಭೆ ಚುನಾವಣೆ ಹತ್ತಿರದಲ್ಲಿರುವಾಗ ಬಿಜೆಪಿಗೆ ಇದು ನೆನಪಾಯಿತೇ? ಕಳೆದ ನಾಲ್ಕೂವರೆ ವರ್ಶಶದಿಂದ ಅವರೆಲ್ಲ ಏನು ಮಾಡುತ್ತಿದ್ದರು? ಹಿಂದು ಮತ್ತು ಮುಸ್ಲಿಮರ ನಡುವಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸುವುದು ಅವರ ಉದ್ದೇಶ. ಪೆಟ್ರೋಲ್ ದರ ಏರಿಕೆ, ಜಿಎಸ್ಟಿ ಮತ್ತು ಅಪನಗದೀಕರಣದ ನಂತರ ಸರ್ಕಾರದ ಬಗ್ಗೆ ಮುನಿಸಿಕೊಂಡಿರುವ ಜನರ ಮತಕ್ಕಾಗಿ ರಾಮಮಂದಿರ ವಿಷಯವನ್ನು ಮತ್ತೆ ಬಿಜೆಪಿ ಪ್ರಸ್ತುತವಾಗಿಸಿದೆ" ಎಂದು ರೋಷನ್ ಬೇಗ್ ಆರೋಪಿಸಿದರು.

25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್

ಭಗವಂತ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ಕಾನೂನನ್ನು ಜಾರಿಗೆ ತರುವ ಬಗ್ಗೆ ಬಿಜೆಪಿ ಚಿಂತಿಸುತ್ತಿದೆ.

English summary
Muslims aren't against construction of Ram Mandir.If Ram Mandir isn't constructed in India, will it be constructed in Pakistan?It should be built in India only.Matter is before court. Now they're trying to bring ordinance.Why did they not do this in 4.5 yrs?: Roshan Baig,Congress
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X