ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಮುಸ್ಲಿಂ ಮಹಿಳೆಗೆ ಮನೆ ಕೊಡಲು ಒಪ್ಪದ ಮಾಲೀಕರು!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22 : 'ಮನೆ ಖಾಲಿ ಇದೆ....Veg only' ಎಂಬ ಬೋರ್ಡ್‌ ಅನ್ನು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕಾಣಬಹುದು. ಆದರೆ, ಮುಸ್ಲಿಂ ಎಂಬ ಕಾರಣಕ್ಕೆ ಮಹಿಳೆಗೆ ಮನೆ ನೀಡಲು ನಿರಾಕರಿಸಿದ ಘಟನೆ ನಗರದಲ್ಲಿ ನಡೆದಿದೆ.

ಮುಸ್ಲಿಂ ಮಹಿಳೆಯೊಬ್ಬರು ಈ ಕುರಿತು ಟ್ವೀಟ್ ಮಾಡಿದ್ದು, ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಎರಡು ಮನೆಯ ಮಾಲೀಕರು ಮುಸ್ಲಿಂ ಕುಟುಂಬ ಎಂಬ ಕಾರಣಕ್ಕೆ ಮನೆ ನೀಡುವುದಕ್ಕೆ ನಿರಾಕರಿಸಿದ್ದಾರೆ. ಮನೆ ಮಹಿಳೆಗೆ ಇಷ್ಟವಾದರೂ ಮಾಲೀಕರು ಅದನ್ನು ಬಾಡಿಗೆಗೆ ಕೊಟ್ಟಿಲ್ಲ.

ಸಿಎಂ ವಸತಿ ಯೋಜನೆ: 50 ಸಾವಿರ ಮನೆ ನಿರ್ಮಾಣಕ್ಕೆ ಶೀಘ್ರ ಟೆಂಡರ್ಸಿಎಂ ವಸತಿ ಯೋಜನೆ: 50 ಸಾವಿರ ಮನೆ ನಿರ್ಮಾಣಕ್ಕೆ ಶೀಘ್ರ ಟೆಂಡರ್

Muslim women denied house for rent in Bengaluru

ಆನ್‌ಲೈನ್ ವೆಬ್‌ಸೈಟ್ ಮೂಲಕ ಮಹಿಳೆ ಮನೆ ನೋಡಿ ಇಷ್ಟಪಟ್ಟಿದ್ದರು. ಮಾಲೀಕರಿಗೆ ಕರೆ ಮಾಡಿದಾಗ ಅವರು ವಿವರಗಳನ್ನು ಕೇಳಿಸಿಕೊಳ್ಳದೇ ನನ್ನ ಹೆಸರು ಕೇಳಿದ ತಕ್ಷಣ ಮುಸ್ಲಿಂಮರಿಗೆ ಮನೆ ನೀಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.

ಕೆಂಪೇಗೌಡ ಬಡಾವಣೆ: 5 ಸಾವಿರ ಜನರಿಗೆ ಹೊಡೆಯಿತು 'ಲಾಟರಿ'!ಕೆಂಪೇಗೌಡ ಬಡಾವಣೆ: 5 ಸಾವಿರ ಜನರಿಗೆ ಹೊಡೆಯಿತು 'ಲಾಟರಿ'!

ಆನ್‌ಲೈನ್ ವೆಬ್‌ಸೈಟ್ ವಿರುದ್ಧವೂ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಇಂತಹ ಮನೆಗಳ ಬಗ್ಗೆ ನೀವು ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದೀರಿ ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಲ್ಲವೇ? ಎಂದು ಪ್ರಶ್ನಿಸಿದ್ದಾಳೆ.

ಮುಸ್ಲಿಂ ಸಮುದಾಯದಿಂದ ರೆಹನಾ ಫಾತಿಮಾ ಉಚ್ಚಾಟನೆಮುಸ್ಲಿಂ ಸಮುದಾಯದಿಂದ ರೆಹನಾ ಫಾತಿಮಾ ಉಚ್ಚಾಟನೆ

'ನನ್ನ ದೇಶದಲ್ಲಿಯೇ ನನಗೆ ಬಾಡಿಗೆಗೆ ಮನೆ ಸಿಗುತ್ತಿಲ್ಲ. ನನ್ನ ಹಿಂದೂ ಸ್ನೇಹಿತರು ಇದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು' ಎಂದು ಹೇಳಿಕೊಳ್ಳುತ್ತೇನೆ ಎಂದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ.

ಆನ್‌ಲೈನ್ ವೆಬ್‌ಸೈಟ್ ಸಹ ಮಹಿಳೆಯ ಟ್ವಿಟ್‌ಗೆ ಪ್ರತಿಕ್ರಿಯೆ ನೀಡಿದೆ. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ವೆಬ್‌ಸೈಟ್ ನಾವು ನಿಮ್ಮ ಪರವಾಗಿದ್ದೇವೆ. ಈ ಎರಡು ಮನೆಯ ಜಾಹೀರಾತನ್ನು ವೆಬ್‌ಸೈಟ್‌ನಿಂದ ತೆಗೆಯುತ್ತೇವೆ. ನಾವು ಸಾಮಾಜಿಕ ನ್ಯಾಯದ ಪರವಾಗಿದ್ದೇವೆ ಎಂದು ವೆಬ್‌ಸೈಟ್ ಹೇಳಿದೆ.

English summary
A muslim women alleged that two house owners in Bengaluru refused to rent house for her. In a twitter she alleged that irrational hindu house owner can judge me without even talking to me.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X