ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೆಳೆಯರ ಬಳಗದಿಂದ ಏ.7 ರಂದು ಗುರುವಂದನಾ ಕಾರ್ಯಕ್ರಮ

|
Google Oneindia Kannada News

ಬೆಂಗಳೂರು, ಏಪ್ರಿಲ್ 06: ವಿಖ್ಯಾತ ಹಿಂದುಸ್ಥಾನಿ ಗಾಯಕ ಪಂ. ಬಸವರಾಜ ರಾಜಗುರು ಅವರ ಸ್ಮರಣಾರ್ಥ 'ಗೆಳೆಯರ ಬಳಗ' ಇದೇ ಶನಿವಾರ (ಏ. 7) ಹೆಸರಾಂತ ಗಾಯಕಿ ವಿದುಷಿ ಭಾರತಿ ಪ್ರತಾಪ್ ಅವರ ಸಂಗೀತ ಕಛೇರಿಯನ್ನು ಹಮ್ಮಿಕೊಂಡಿದೆ. ಬೆಂಗಳೂರಿನ ಮಲ್ಲೇಶ್ವರಂ ನ ಸೇವಾಸದನದಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಭಾರತಿ ಪ್ರತಾಪ್ ಹಾಗೂ ಯುವ ಗಾಯಕ ವಿನಾಯಕ ಹಿರೇಹದ್ದ ಅವರು ಗಾನಸುಧೆ ಹರಿಸಲಿದ್ದಾರೆ.

ಈ ಕಲಾವಿದರಿಗೆ ಸಹವಾದನದಲ್ಲಿ ಗುರುಮೂರ್ತಿ ವೈದ್ಯ, ನಿತಿನ್ ಹೆಗಡೆ (ತಬಲಾ) ಹಾಗೂ ಮಧುಸೂದನ ಭಟ್, ಭರತ್ ಹೆಗಡೆ (ಹಾರ್ಮೋನಿಯಂ) ಸಹಯೋಗ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆ.

Music programme by Geleyara Balaga in Bengaluru

ಕಲಾವದಿರಾದ ವಿದುಷಿ ಭಾರತಿ ಪ್ರತಾಪ್ ಶಾಸ್ತ್ರೀಯ ಗಾಯನದಲ್ಲಿ ಆಕಾಶವಾಣಿಯ 'ಬಿ' ಹೈ ಗ್ರೇಡ್ ಕಲಾವಿದೆ. ದೇವರನಾಮ ಮತ್ತು ವಚನಗಳಲ್ಲಿ ಎ' ಗ್ರೇಡ್ ಕಲಾವಿದೆ. ಅವರು ಭಾರತವಷ್ಟೇ ಅಲ್ಲದೆ ಅಮೆರಿಕ ಮತ್ತು ಕೆನಡಾ ಮೊದಲಾದ ಕಡೆಗಳಲ್ಲಿಯೂ ಸಂಗೀತ ಕಛೇರಿ ನೀಡಿದ್ದಾರೆ. ಅವರ ಗಾಯನದ ಹಲವು ಸಿ.ಡಿ.ಗಳು ಬಿಡುಗಡೆಯಾಗಿವೆ.

ಗಾಯಕಿಯಾಗಿ ರೂಪಾ ಮೌದ್ಗಿಲ್, ವಿಡಿಯೋ ಆಲ್ಬಂ ನೋಡಿದ್ರಾ?ಗಾಯಕಿಯಾಗಿ ರೂಪಾ ಮೌದ್ಗಿಲ್, ವಿಡಿಯೋ ಆಲ್ಬಂ ನೋಡಿದ್ರಾ?

ವಿನಾಯಕ ಹಿರೇಹದ್ದ ಉತ್ತರ ಕನ್ನಡದ ಸಿದ್ದಾಪುರ ತಾಲೂಕು ಹಿರೇಹದ್ದದ ವಿನಾಯಕ ಅವರು ಸಾಂಸ್ಕೃತಿಕ ಹಿನ್ನೆಲೆಯ ಕುಟುಂಬದಿಂದ ಬಂದವರು. ಅವರು ಆಕಾಶವಾಣಿ ಹಾಗೂ ದೂರದರ್ಶನದ ಎ' ಗ್ರೇಡ್ ಕಲಾವಿದ. ತಬಲಾ ಹಾಗೂ ಹಾರ್ಮೋನಿಯಂಗಳನ್ನೂ ನುಡಿಸಬಲ್ಲ ಅವರು ಹಲವು ಆಸಕ್ತ ವಿದ್ಯಾರ್ಥಿಗಳಿಗೆ ಸಂಗೀತದಲ್ಲಿ ತರಬೇತಿ ನೀಡುತ್ತಿದ್ದಾರೆ. ಅದರ ಜತೆಗೆ ಆಧಾರ ಷಡ್ಜ' ಸಂಸ್ಥೆಯ ಮೂಲಕ ಸಂಗೀತದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.

Music programme by Geleyara Balaga in Bengaluru

ತಬಲಾಕ್ಷೇತ್ರದಲ್ಲಿ ಗುರುಮೂರ್ತಿ ವೈದ್ಯ ಅವರ ಹೆಸರು ಚಿರಪರಿಚಿತವಾದದ್ದು. ಅನೇಕ ತಬಲಾ ಸೋಲೋ ಕಛೇರಿಗಳನ್ನೂ ನೀಡಿದ್ದಾರೆ. ಆಕಾಶವಾಣಿಯ ಕಲಾವಿದರಾದ ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ಗೆಳೆಯರ ಬಳಗ
'ಗೆಳೆಯರ ಬಳಗ'ವು ಪಂ. ಬಸವರಾಜ ರಾಜಗುರು ಅವರ ಸ್ಮರಣಾರ್ಥ ಕಳೆದ ಆರು ವರ್ಷಗಳಲ್ಲಿ; ಹೆಸರಾಂತ ಗಾಯಕರಾದ ಪಂ. ಗಣಪತಿ ಭಟ್ ಹಾಸಣಗಿ, ಪಂ. ಎಂ.ಪಿ. ಹೆಗಡೆ ಪಡಿಗೇರಿ, ಪಂ. ಪರಮೇಶ್ವರ ಹೆಗಡೆ, ಪಂ. ಶ್ರೀಪಾದ ಹೆಗಡೆ ಕಂಪ್ಲಿ, ಪೂರ್ಣಿಮಾ ಭಟ್ ಕುಲಕರ್ಣಿ, ಕಿರಣ್ ಮಗೇಗಾರ್, ನಾಗರಾಜ್ ಶಿರನಾಲಾ, ನಾಗಭೂಷಣ ಬಾಳೆಹದ್ದ, ಧನಂಜಯ ಹೆಗಡೆ, ಸತೀಶ್ ಮಾಳಕೊಪ್ಪ ಅವರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಜೊತೆಗೆ ಉದಯೋನ್ಮುಖ ಗಾಯಕರಾದ ನರಸಿಂಹ ಸೋಂದಾ, ವಿಶಾಲ್ ಕಂಪ್ಲಿ, ರಘುನಂದನ್ ಬ್ರಹ್ಮಾವರ, ಹರೀಶ್ ಹಳವಳ್ಳಿ, ಸುಮಾ ಹಿತ್ಲಳ್ಳಿ ಅವರೂ ಈ ಕಾರ್ಯಕ್ರಮಗಳಲ್ಲಿ ಗಾಯನವನ್ನು ಪ್ರಸ್ತುತಪಡಿಸಿದ್ದರು. ಗುಣಮಟ್ಟದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು, ಪ್ರತಿಭಾವಂತ ಹಿರಿಕಿರಿಯ ಕಲಾವಿದರಿಗೆ ವೇದಿಕೆಯನ್ನು ಒದಗಿಸಿ ಒಳ್ಳೆಯ ಸಂಗೀತ ವಾತಾವರಣವನ್ನು ನಿರ್ಮಾಣ ಮಾಡುವುದು ಈ ಬಳಗದ ಉದ್ದೇಶ.

English summary
Guruvandana 2018: A music programme is orgainsed by Geleyara Balaga, an organisation in Bengaluru. The programme will be taking place on April 7th at 5 pm, in Sevasadan Malleshwaram, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X