ನಿರ್ಮಾಣ ಹಂತದ ಕಟ್ಟಡ ಕುಸಿತ, 3 ಸಾವು, 11 ಕಾರ್ಮಿಕರ ರಕ್ಷಣೆ

Posted By:
Subscribe to Oneindia Kannada
   ಬೆಂಗಳೂರಿನ ಕಸವನಹಳ್ಳಿಯಲ್ಲಿ ಬಹುಮಹಡಿ ಕಟ್ಟಡ ಕುಸಿತ | 20 ಕಾರ್ಮಿಕರು ಅವಶೇಷಗಳಡಿ

   ಬೆಂಗಳೂರು, ಫೆಬ್ರವರಿ 15: ನಗರದ ಸರ್ಜಾಪುರ ರಸ್ತೆಯ ಕಸವನಹಳ್ಳಿಯಲ್ಲಿ ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಕುಸಿದು ಮೂವರು ಕಾರ್ಮಿಕ ಸಾವನ್ನಪ್ಪಿದ್ದು ಕನಿಷ್ಟ 20 ಜನ ಕಾರ್ಮಿಕರು ಕಟ್ಟಡದ ಅವಶೇಷದ ಅಡಿ ಸಿಲುಕಿದ್ದಾರೆ.

   ಮೃತ ಕಾರ್ಮಿಕರನ್ನು ಮೊಹರಮ್, ರಾಜು, ಮದೀನಾ ಎಂದು ಗುರುತಿಸಲಾಗಿದ್ದು, ಇವರ ಸ್ಥಳದ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ಹೆಚ್ಚಿನ ಕಾರ್ಮಿಕರು ಉತ್ತರ ಕರ್ನಾಟಕ ಹಾಗೂ ಬಿಹಾರ ಮೂಲದವರು ಎನ್ನಲಾಗಿದೆ.

   ಕಟ್ಟಡ ಕುಸಿತ ತನಿಖೆಗೆ ತಂಡ, ಮೃತರ ಕುಟುಂಬಕ್ಕೆ ರು.5 ಲಕ್ಷ: ಜಾರ್ಜ್‌

   ಕಟ್ಟಡದ ಒಳಗೆ ಸುಮಾರು 25 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದ್ದು, 8 ಜನ ಕಾರ್ಮಿಕರನ್ನು ಈಗಾಗಲೇ ಸ್ಥಳೀಯರು ರಕ್ಷಿಸಿದ್ದಾರೆ. ಇನ್ನೂ ಸಾಕಷ್ಟು ಜನ ಕಾರ್ಮಿಕರು ಅವಶೇಷದ ಅಡಿ ಸಿಲುಕಿದ್ದಾರೆ, ಸಾವು ನೋವು ಆಗಿರ ಬಹುದು ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ.

   multi storage building collapse in Bengaluru, 25 labors under the remnant

   ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಧಾವಿಸಿದ್ದು, ಸ್ಥಳೀಯರ ಸಹಾಯದೊಂದಿಗೆ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ರಕ್ಷಿಸಲ್ಪಟ್ಟ ಕಾರ್ಮಿಕರನ್ನು ಸೇಂಟ್ ಜೋನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

   multi storage building collapse in Bengaluru, 25 labors under the remnant

   ರಫೀಕ್ ಎನ್ನುವವರಿಗೆ ಈ ಸೇರಿದ ಕಟ್ಟಡ ಇದಾಗಿದ್ದು, ಆಂಧ್ರ ಮೂಲದ ಕೃಷ್ಣಾರೆಡ್ಡಿ ಎಂಬುವರ ಮೇಲುಸ್ತುವಾರಿಯಲ್ಲಿ ಕಟ್ಟಡ ಕಾಮಗಾರಿ ನಡೆಯುತಿತ್ತು. ವಸತಿ ಉದ್ದೇಶಕ್ಕಾಗಿ ಈ ಬಹುಮಹಡಿಯನ್ನು ನಿರ್ಮಾಣ ಮಾಡಲಾಗುತಿತ್ತು.

   multi storage building collapse in Bengaluru, 25 labors under the remnant

   ಸ್ಥಳಕ್ಕೆ ಬಿಬಿಎಂಪಿ ಮೇಯರ್‌ ಸಂಪತ್‌ರಾಜ್ ಭೇಟಿ ನೀಡಿದ್ದು, ಅಗ್ನಿಶಾಮಕ ದಳದ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಎಲ್ಲ ವ್ಯಕ್ತಿಗಳ ಆಸ್ಪತ್ರೆಯ ಖರ್ಚು ಭರಿಸುವುದಾಗಿ ಹೇಳಿರುವ ಅವರು, ಮೃತರ ಕುಟುಂಬಕ್ಕೆ ಪರಿಹಾರವನ್ನೂ ಘೋಷಿಸಿಸುವುದಾಗಿ ಭರವಸೆ ನೀಡಿದ್ದಾರೆ.

   ಕಟ್ಟಡ ಕುಸಿಯಲು ಕಳಪೆ ಕಾಮಗಾರಿಯೇ ಕಾರಣ ಎನ್ನಲಾಗುತ್ತಿದ್ದು, ಕಟ್ಟಡದ ಎಂಜಿನಿಯರ್ ಮತ್ತು ಮಾಲೀಕರ ಮೇಲೆ ಪೊಲೀಸರು ದೂರು ದಾಖಲಿಸಲಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   A multi storage building collapse in Bengaluru's Kasavanahalli. at least 25 labors struck under remnant. fire fighters began there rescue operation.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   X