ಉಕ್ಕಿನ ಮೇಲ್ಸೇತುವೆಗೆ ಪರಿಸರ ಪ್ರಾಧಿಕಾರದಿಂದ ಗ್ರೀನ್ ಸಿಗ್ನಲ್!

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 25: ಕರ್ನಾಟಕದ ಸರ್ಕಾರದ ಉದ್ದೇಶಿತ ಉಕ್ಕಿನ ಮೇಲ್ಸೇತುವೆ ನಿರ್ಮಾಣದಿಂದ 823ಕ್ಕೂ ಅಧಿಕ ಮರಗಳು ನೆಲಕ್ಕುರಳಲಿವೆ. ಉಕ್ಕಿನ ಸೇತುವೆಯಿಂದ ಪರಿಸರಕ್ಕೆ ಹನಿ ಎಂಬ ಕೂಗೆದ್ದಿದೆ. ಆದರೆ, ಪರಿಸರದ ಮೇಲಾಗುವ ಪರಿಣಾಮದ ಮೌಲ್ಯಮಾಪನ ಪ್ರಾಧಿಕಾರ(ಎಸ್‌ಇಐಎಎ) ಈ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ.

'ಉಕ್ಕಿನ ಸೇತುವೆ ವಿನ್ಯಾಸವನ್ನು ಪರಿ ಐಐಎಸ್ಸಿ ವಿಜ್ಞಾನಿ ಟಿ.ವಿ.ರಾಮಚಂದ್ರ ಅವರು, 'ಎಲ್ಲ ಮೂಲಸೌಕರ್ಯ ಯೋಜನೆಗಳಿಗೂ ಪರಿಸರ ಸಚಿವಾಲಯದ ಅನುಮತಿ ಪಡೆಯುವುದು ಅಗತ್ಯ. ಆದರೆ, ಇಲ್ಲಿ ನಿಯಮ ಪಾಲನೆ ಮಾಡಲಾಗಿಲ್ಲ' ಎಂದು ಹೇಳಿದರು.

ಉಕ್ಕಿನ ಸೇತುವೆ ವಿನ್ಯಾಸ, ಪರಿಸರಕ್ಕೆ ಆಗುವ ಹಾನಿ ಕುರಿತಂತೆ ಯಾವುದೇ ಉಲ್ಲೇಖ ಇಲ್ಲದ ಕಾರಣ ಸೇತುವೆ ನಿರ್ಮಾಣಕ್ಕೆ ಪ್ರಾಧಿಕಾರ ಹಸಿರು ನಿಶಾನೆ ತೋರಿದೆ. ಅದರೆ, ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಹೆಚ್ಚಿನ ಮಾಹಿತಿಯನ್ನು ಕೋರಿದೆ.

Multi -Crore steel flyover project SEIAA clearance

ಆದರೆ, ಕಾಲ ಮಿತಿ ಕಡಿಮೆ ಇದ್ದು, ನವೆಂಬರ್ 1ರಂದು ಸೇತುವೆ ಕಾಮಗಾರಿಗೆ ಚಾಲನೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿರುವ ಸಚಿವ ಕೆಜೆ ಜಾರ್ಜ್ ಅವರು ಬೆಂಗಳೂರಿನ ಎಲ್ಲಾ ಜನ ಪ್ರತಿನಿಧಿಗಳಿಗೆ ಸೇತುವೆ ಬಗ್ಗೆ ಮಂಗಳವಾರ ಪಾಠ ಮಾಡಲಿದ್ದಾರೆ.

ಬಿಬಿಎಂಪಿಯ ವೃಕ್ಷ ಸಮಿತಿ, ಅರಣ್ಯ ಇಲಾಖೆ, ಪರಿಸರ ಪ್ರಾಧಿಕಾರ ಎಲ್ಲದರ ಒಪ್ಪಿಗೆ ಇದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೇಳಿಕೊಂಡಿದ್ದು, ಯೋಜನೆಗೆ ಗುದ್ದಲಿ ಪೂಜೆ ಆರಂಭ ಮಾಡಲು ಮುಹೂರ್ತ ನಿಗದಿ ಮಾಡಿಕೊಂಡಿದೆ. ಈ ನಡುವೆ ಸೇತುವೆ ವಿರೋಧಿಸಿ 42 ಸಾವಿರಕ್ಕೂ ಅಧಿಕ ಮಂದಿ ಸಹಿ ಹಾಕಿದ್ದಾರೆ. ಸೇತುವೆ ಪರ ಹೆಬ್ಬಾಳದ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ. (ಏಜೆನ್ಸೀಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Multi -Crore steel flyover project from Basaveshwara circle to Esteem Mall, over Hebbal flyover gets State Environmental Impact Assessment Authority (SEIAA) clearance as it is not in the list of infrastructure projects
Please Wait while comments are loading...